ಬೆಳೆ ವಿಮೆ ತುಂಬದಿದ್ದರೂ ಬೆಳೆ ಪರಿಹಾರ ಪಡೆಯಬಹುದು ಹೇಗೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ, ಬೆಳೆ ವಿಮೆ ತುಂಬದಿದ್ದರೂ ಕೂಡ ನೀವು ಬೆಳೆ ಪರಿಹಾರವನ್ನು(crop loss parihara) ಪಡೆಯಬಹುದು, ಬನ್ನಿ ನಿಮಹೇ ತಿಳಿಸಿಕೊಡುತ್ತೇನೆ.

ಮೊಟ್ಟಮೊದಲು ನೀವು ತಿಳಿದುಕೊಳ್ಳಬೇಕಾದ ಅಂಶವೇನೆಂದರೆ ಬೆಳೆ ಪರಿಹಾರವೇ ಬೇರೆ ಹಾಗೂ ಬೆಳೆ ವಿಮೆಯೇ ಬೇರೆ.

ಬೆಳೆ ವಿಮೆ ಎಂದರೆ ನೀವು ಆ ಬೆಳೆಗಳಿಗೆ ಇನ್ಸೂರೆನ್ಸ್ ಪ್ರೀಮಿಯಂ ಹಣವನ್ನು ತುಂಬಿ ಮುಂದಿನ ದಿನಗಳಲ್ಲಿ ಆ ಬೆಳೆಗಳು ಹಾನಿಯಾದಾಗ ನಿಮಗೆ ಇನ್ಸೂರೆನ್ಸ್ ಹಣ ದೊರಕುತ್ತದೆ ಅದಕ್ಕೆ ಬೆಳೆ ವಿಮೆ ಎಂದು ಕರೆಯುತ್ತಾರೆ.

ಬೆಳೆ ಪರಿಹಾರವೆಂದರೆ ಅತಿವೃಷ್ಟಿ ಅನಾವೃಷ್ಟಿ ಅಥವಾ ಇನ್ನಿತರ ಕಾರಣಗಳಿಂದ ಬೆಳಗಳು ಹಾನಿಯದಲ್ಲಿ ಸರ್ಕಾರದ ವತಿಯಿಂದ ನೀಡುವಂತಹ ಪರಿಹಾರ ಹಣಕ್ಕೆ ಬೆಳೆ ಪರಿಹಾರ ಎಂದು ಕರೆಯುತ್ತಾರೆ.

ಹಾಗಾಗಿ ನೀವು ಒಂದು ವೇಳೆ ನಿಮ್ಮ ಹೊಲದಲ್ಲಿ ಬೆಳೆದಂತಹ ಬೆಳೆಗಳಿಗೆ ಇನ್ಸೂರೆನ್ಸ್ ಪ್ರೀಮಿಯಂ ಹಣವನ್ನು ತುಂಬಿ ಬೆಳೆವಿಮೆ ಮಾಡಿಸಿಲ್ಲವೇ?

ಹಾಗಾದರೆ ಚಿಂತೆ ಮಾಡಬೇಡಿ ಯಾಕೆಂದರೆ ಈಗ ಬೆಳೆಗೆ ಮಾಡಿಸುವ ದಿನಾಂಕ ಕೊನೆಯಾಗಿದೆ, ಹಾಗಾಗಿ ನಿಮಗೆ ಇರುವ ಒಂದೇ ಒಂದು ಅವಕಾಶವೆಂದರೆ ಅದು ಬೆಳೆ ಪರಿಹಾರದ ಹಣ.

ಹಾಗಾಗಿ ನಿಮ್ಮ ಖಾತೆಗಳಿಗೆ ಬೆಳೆ ಪರಿಹಾರ ಹಣ ಜಮೆಯಾಗಬೇಕೆಂದರೆ ಕೂಡಲೇ ನೀವು ಕೊನೆಯ ದಿನದ ಮುಗಿಯುವುದರೊಳಗಾಗಿ ಬೆಳೆ ಪರಿಹಾರ ಪಡೆಯಲು ಬೆಳೆ ಸಮೀಕ್ಷೆ ಮಾಡುವುದು ಕಡ್ಡಾಯವಾಗಿದೆ.

ಹಾಗಾಗಿ ಆದಷ್ಟು ಬೇಗ ಬೆಳೆ ಸಮೀಕ್ಷೆ ಮಾಡಿ ಬೆಳೆ ಪರಿಹಾರವನ್ನು ಪಡೆಯಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ಬೆಳೆ ಸಮೀಕ್ಷೆ ಮಾಡುವುದರಿಂದ ನಮಗೆ ಸಿಗುವ ಲಾಭಗಳೇನು?

ಕನಿಷ್ಠ ಬೆಂಬಲ ಬೆಲೆ ಯೋಜನೆ,

ಬೆಳೆ ಪರಿಹಾರ,

ಬೆಳೆ ವಿಮೆ ಯೋಜನೆ,

ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು

ಬೆಳೆಸಾಲ ಅನುಕೂಲವಾಗುವದರಿಂದ

ಎಲ್ಲ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ದಾಖಲಿಸಿ ಪಡೆದುಕೊಳ್ಳಬೇಕಿದೆ.

2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಾವೇ ಖುದ್ದಾಗಿ ಗೂಗಲ್ ಪ್ಲೇಸ್ಟೋರ್ ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ 2023″ ಹಾಗೂ ಆಯಾ ಗ್ರಾಮದ ಖಾಸಗಿ ನಿವಾಸಿಗಳ “ಮುಂಗಾರು ಬೆಳೆ ಸಮೀಕ್ಷೆ 2023-24″ ನ್ನು Download ಮಾಡಿಕೊಂಡು ಬೆಳೆ ವಿವರಗಳನ್ನು ದಾಖಲಿಸಬೇಕಾಗಿದೆ.

“ಮುಂಗಾರು ರೈತರ ಬೆಳೆ ಸಮೀಕ್ಷೆ 2023″: ಡೈರೆಕ್ಟ್ ಲಿಂಕ್:

https://play.google.com/store/apps/details?id=com.csk.farmer23_24.cropsurvey

“ಮುಂಗಾರು ಬೆಳೆ ಸಮೀಕ್ಷೆ 2023-24″:ಡೈರೆಕ್ಟ್ ಲಿಂಕ್

https://play.google.com/store/apps/details?id=com.csk.PR_Kharif_2023.cropsurvey

ಹೀಗೆ ವಿವರಗಳನ್ನು ದಾಖಲಿಸುವದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ಬೆಳೆಸಾಲ ಪಡೆಯುವಲ್ಲಿ ರೈತರಿಗೆ ಅನುಕೂಲವಾಗುವದರಿಂದ ಎಲ್ಲ ರೈತರು ಬೆಳೆ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳು, ಕಂದಾಯ/ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು ಹಾಗೂ 18004253553 ಗೆ ಕರೆ ಮಾಡಲು ಕೋರಿದೆ.

 

Leave a Comment