bara

ಆತ್ಮೀಯ ರೈತ ಬಾಂಧವರೇ, ರಾಜ್ಯದಲ್ಲಿ  ಕೆಲವೊಂದಿಷ್ಟು ರೈತರಿಗೆ ಮುಟ್ಟಿದ ಬೆಳೆ ಪರಿಹಾರ, ಇನ್ನು ಕೆಲವೊಂದಿಷ್ಟು ರೈತರಿಗೆ ಮುಟ್ಟಬೇಕಾಗಿರುವ ಬೆಳೆ ಪರಿಹಾರ.

ಹೌದು ಆತ್ಮೀಯ ರೈತ ಬಾಂಧವರೇ, ರಾಜ್ಯದಲ್ಲಿ  ಬಹುತೇಕ ರೈತರಿಗೆ ಮೊದಲನೇ ಕಂತಿನ ಎರಡು ಸಾವಿರ ರೂಪಾಯಿಗಳು ಜಮಾ ಆಗಿದ್ದವು,. ನಂತರ ಕೇಂದ್ರ ಸರ್ಕಾರ ಸಹಾಯಧನ ಬಿಡುಗಡೆ ಮಾಡಿದ ನಂತರ ರೈತರಿಗೆ ಎರಡನೇ ಕಂತನ್ನು ಬಿಡುಗಡೆ ಮಾಡಲಾಯಿತು.

ಆದರೆ ಇನ್ನೂ ಕೂಡ  ಕೆಲವೊಂದಿಷ್ಟು ರೈತರ ಖಾತೆಗೆ ಎರಡನೇ  ಕಂತಿನ ಬೆಳೆ ಪರಿಹಾರದ ಹಣ ಮುಟ್ಟಿಲ್ಲ.

ಮೊದಲನೇ ಕಂತಿನ ಬೆಳೆ ಪರಿಹಾರದ ಹಣ ಜಮೆಯಾಗಿದ್ದರೂ ಕೂಡ ಇನ್ನು ಏಕೆ ಎರಡನೇ ಕಂತಿನ ಬೆಳೆ ಪರಿಹಾರದ ಹಣ ಜಮೆ ಆಗಿಲ್ಲ ಎಂಬುದು ರೈತರ ಚಿಂತೆಯಾಗಿದೆ.

ಇನ್ನೂ ಕೆಲವೊಂದಿಷ್ಟು ರೈತರಿಗೆ ಮೊದಲೇ     ಕಂತಿನ ಬರೇ ಪರಿಹಾರದ ಹಣವೇ ಬಂದಿಲ್ಲ,  ಸರ್ಕಾರ ಅದಕ್ಕಾಗಿ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಿದ್ದು ಈಗಾಗಲೇ ರೈತರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.

ಆದರೆ ಈಗಾಗಲೇ 2024 25 ನೇ ಸಾಲಿನ ಮುಂಗಾರಿ ಹಂಗಾಮಿನ ಬಿತ್ತನೆ ಕಾರ್ಯಗಳು ಪ್ರಾರಂಭವಾಗಿದ್ದು, ಇನ್ನೂ ಕೂಡ 2023 24ನೇ ಸಾಲಿನ ಮುಂಗಾರಿ ಹಂಗಾಮಿನ ಬರ ಪರಿಹಾರದ ಹಣ ಪ್ರತಿಯೊಬ್ಬ ರೈತರಿಗೆ ಮುಟ್ಟದಿರುವುದು  ಶೋಕನೀಯವಾಗಿದೆ.

ಕಳೆದ ಬಾರಿ ಬರಗಾಲದಿಂದ ಈಗಾಗಲೇ  ಆರ್ಥಿಕ ಸಂಕಷ್ಟದಲ್ಲಿದ್ದ ರೈತರಿಗೆ, ಪರಿಹಾರ  ಕೈ ಹಿಡಿಯಲಿದೆ ಎಂದು  ನಂಬಿಕೆಯಲ್ಲಿದ್ದ ರೈತರಿಗೆ  ,ಇನ್ನೂ ಕೂಡ ಪರಿಹಾರ ಜಮಾ ಆಗದೇ ಇರುವುದು  ತುಂಬಾ ಕಷ್ಟಕರವಾಗಿದೆ.

ಮುಂದಿನ  ದಿನಮಾನಗಳಲ್ಲಿ  ಕೇಂದ್ರ ಹಾಗೂ ರಾಜ್ಯ ಸರ್ಕಾರವು ಒಗ್ಗಟ್ಟಿನಿಂದ ರೈತರಿಗೆ ಸರಿಯಾದ ಸಮಯದಲ್ಲಿ ರೈತರಿಗೆ ಆರ್ಥಿಕ ನೆರವನ್ನು ನೀಡಬೇಕಾಗಿ ವಿನಂತಿ.

Read this also:

ಸರ್ವೇ ನಂಬರ್ ಮೂಲಕ ಬೆಳೆ ಪರಿಹಾರ ಜಮೆ ಆಗಿರುವುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಆತ್ಮೀಯ ರೈತ ಬಾಂಧವರೇ,ತಮಗೆಲ್ಲ ತಿಳಿದಿರುವ ಹಾಗೆ ಈ ಬಾರಿ ಮುಂಗಾರಿನಲ್ಲಿ ಅನಾವೃಷ್ಟಿಯ ಕಾರಣದಿಂದಾಗಿ ರಾಜ್ಯದ ತುಂಬಾ ಬರ ಆವರಿಸಿದ್ದು, ಸರ್ಕಾರ ರೈತರ ನೆರವಿಗಾಗಿ ಬೆಳೆ ಪರಿಹಾರವನ್ನು ಘೋಷಿಸಿದ್ದು, ಮೊದಲ ಕಂತಿನ ಎರಡು ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.

ಹಾಗಾದರೆ ನಿಮ್ಮ ಸರ್ವೇ ನಂಬರ್ ಮೂಲಕ ಆನ್ಲೈನ್ ನಲ್ಲಿ ಯಾವ ಖಾತೆಗೆ ಹಣ ಯಾವಾಗ ಎಷ್ಟು ಜಮೆಯಾಗಿದೆ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ನೋಡೋಣ ಬನ್ನಿ.

ಮೊಟ್ಟ ಮೊದಲು ಗೂಗಲ್ ನಲ್ಲಿ PARIHARA ಎಂದು ಸರ್ಚ್ ಮಾಡಿ.

ಆಗ ನಿಮಗೆ ಕಾಣುವಂತಹ ಮೊದಲ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಒತ್ತಿ :

https://parihara.karnataka.gov.in/Pariharahome/

ಆಗ ಅಲ್ಲಿ ಕಾಣುವಂತಹ NEW REPORT =2023 kharif drought season ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಒತ್ತಿ :

https://parihara.karnataka.gov.in/service92/

ಆಗ ಅಲ್ಲಿ

ವರ್ಷ =2023-24

ವೃತು =ಮುಂಗಾರು

ವಿಪತ್ತಿನ ವಿಧ = ಬರ ಆಯ್ಕೆ ಮಾಡಿ

ಮುಂದೆ ಬರುವಂತಹ ಹಲವಾರು ಆಯ್ಕೆಗಳಲ್ಲಿ search by survey number ಮೇಲೆ ಕ್ಲಿಕ್ ಮಾಡಿ.

ಇಲ್ಲಿ ನಿಮ್ಮ survey number ಹಾಕುವ ಮೂಲಕ ನೀವು ಯಾವ ಖಾತೆಗೆ ಯಾವಾಗ ಎಷ್ಟು ಹಣ ಜಮೆಯಾಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

READ THIS ALSO:

ಗದಗ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿದ್ದು, ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.

ಪ್ರಸ್ತುತ ಅಳಿದುಳಿದಿರುವ ಮೆಣಸಿನಕಾಯನ್ನು ಬ್ಯಾಡಗಿ, ಹುಬ್ಬಳ್ಳಿ, ಗದಗ ಮಾರುಕಟ್ಟೆಗೆ ಒಯ್ದರೆ, ಕ್ವಿಂಟಾಲ್‌ಗೆ 20ರಿಂದ 35 ಸಾವಿರ ರೂ.ಗಳಿಗೆ ಆವಕವಾಗುತ್ತಿದೆ. ಕಳೆದ ವರ್ಷ ಕ್ವಿಂಟಾಲ್ ಒಂದಕ್ಕೆಗರಿಷ್ಠ 75 ಸಾವಿರ ರೂ.ಗಳಿಗೆ ಮಾರಾಟವಾಗಿತ್ತು.

ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ಅತ್ಯಂತ ಮಹತ್ವ ಹೊಂದಿರುವ ಮೆಣಸಿನಕಾಯಿ ಬೆಳೆಗೆ ಈ ವರ್ಷದ ಬರಗಾಲ ತೀವ್ರ ನಷ್ಟ ತಂದೊಡ್ಡಿದ್ದು, ಸಾಲ- ಸೋಲ ಮಾಡಿ ಬಿತ್ತನೆ ಮಾಡಿದ ರೈತ ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷ ಹೆಚ್ಚಿನ ಮಳೆಯಾಗಿ ಬೆಳೆ ಹಾನಿಗೊಳಗಾಗಿತ್ತು.

ಈ ವರ್ಷ ಮಳೆ ಕೈಕೊಟ್ಟು ಬರಗಾಲಆವರಿಸಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣವನ್ನು ಮಧ್ಯಂತರ ಪರಿಹಾರವಾಗಿ ಜಮಾವಣೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ ಎನ್ನುತ್ತಾರೆ ರೈತರು.

ಪೂರ್ಣ ಪ್ರಮಾಣದ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಆಗ್ರಹಿಸಿದ್ದಾರೆ.

By Raju

Leave a Reply

Your email address will not be published. Required fields are marked *