samrakshane

ಆತ್ಮೀಯ ರೈತ ಬಾಂಧವರೇ,  ಯಾವ ಬೆಳೆಗಳಿಗೆ ಎಷ್ಟು ಬೆಳೆ ವಿಮೆಯ ಹಣ ಬರಲಿದೆ ಎಂಬುದು ಈಗಾಗಲೇ ಸಂರಕ್ಷಣೆ ತಂತ್ರಾಂಶದಲ್ಲಿ ಶಾರ್ಟ್ ಫಾಲ್ ಜನರೇಟ್ ಆಗಿದ್ದು,  ಬೆಳೆ ವಿಮೆ ಬರುವುದು ಖಚಿತವೆಂದು ತಿಳಿದಿರುವ ರೈತರು  ಖುಷಿಯಲ್ಲಿದ್ದಾರೆ.

 ಆದರೆ ಈಗಾಗಲೇ ಶಾರ್ಟ್ ಫಾಲ್  ಬಿಡುಗಡೆಯಾಗಿ ಸುಮಾರು 15 ದಿನಗಳ ಮೇಲೆ ಆದರೂ ಕೂಡ ಇನ್ನೂ ರೈತರ ಖಾತೆಗಳಿಗೆ ಬೆಳೆವಿಮೆಯ ಹಣ ಜಮೆಯಾಗಿಲ್ಲ, ಹೀಗಾಗಿ ಜನರು ಬೆಳೆ ವಿಮೆ ನಿರೀಕ್ಷೆಯಲ್ಲಿದ್ದು, ಕೂಡಲೇ ಆದಷ್ಟು ಬೇಗ ಬೆಳೆ ವಿಮೆಯನ್ನು ಬಿಡುಗಡೆ ಮಾಡಬೇಕಾಗಿ  ಸರ್ಕಾರಕ್ಕೆ ವಿನಂತಿಯನ್ನು ಮಾಡಿಕೊಳ್ಳುತ್ತೇವೆ.

ಆತ್ಮೀಯ ರೈತ ಬಾಂಧವರೇ,  ಮೆಣಸಿನಕಾಯಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು,  ಏಕೆಂದರೆ ಪ್ರತಿ ಎಕರೆಗೆ 22 ಸಾವಿರ ರೂಪಾಯಿಗಳ ಬೆಳೆ ವಿಮೆ ಕ್ಲೇಮ್ ಆಗಿದ್ದು ರೈತರಲ್ಲಿ ಖುಷಿಯನ್ನು ತರಿಸಿದೆ.

ಗದಗ್ ಜಿಲ್ಲೆ ಗದಗ್ ತಾಲೂಕಿನ ಬೆಟಿಗೇರಿ ಹೋಬಳಿಯಲ್ಲಿ ಬರುವಂತಹ ಎಲ್ಲಾ ಗ್ರಾಮ ಗಳಲ್ಲಿ  ಮೆಣಸಿನಕಾಯಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ  ಇನ್ನೇನು ಕೆಲವೇ ದಿನಗಳಲ್ಲಿ ಪ್ರತಿ ಎಕರೆಗೆ 17,000  ರೂಪಾಯಿಗಳು ಜಮೆಯಾಗಲಿವೆ.

ಈಗ ತಾನೆ ಶಾರ್ಟ್ ಫಾಲ್ ಬಿಡುಗಡೆಯಾಗಿದ್ದು  ಗದಗ್ ಜಿಲ್ಲೆ, ಗದಗ್ ತಾಲೂಕಿನ ಬೆಟಿಗೇರಿ  ಹೋಬಳಿ ಅಡಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳ ಮೆಣಸಿನ ಕಾಯಿ ಆನೆವರಿಯ ಪ್ರಕಾರ  ಶೇಕಡ 70 ರಷ್ಟು ಇಳುವರಿ ಕುಂಠಿತವಾಗಿದ್ದು,  ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಶೇಕಡ 70ರಷ್ಟು ಬೆಳೆ ವಿಮೆಯ ಹಣ ಕ್ಲೇಮ್ ಆಗಲಿದೆ.

 ಪ್ರತಿ ಎಕರೆಗೆ ಶೇಕಡ 70% ಎಂದರೆ 22+ ಸಾವಿರ ರೂಪಾಯಿ ಹಣ ಕ್ಲೇಮ್ ಆಗಲಿದ್ದು,  ಈಗಾಗಲೇ ಮಧ್ಯಂತರವಾಗಿ 5000+ ಗಳನ್ನು ರೈತರ ಖಾತೆಗಳಿಗೆ ಡಿಸೆಂಬರ್ ತಿಂಗಳಲ್ಲಿ ಜಮೇ ಮಾಡಲಾಗಿದ್ದು,  ಆ ಐದು ಸಾವಿರ ರೂಪಾಯಿಗಳನ್ನು ಮುರಿದು ಇನ್ನುಳಿದ ಅಂತಹ ಹಣವಾದ 17000+ ಗಳನ್ನು ಇನ್ನೇನು ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು.

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ? 

ನಿಮ್ಮ ಮೊಬೈಲ್ ನಲ್ಲಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದನ್ನು ನೋಡೋಣ.

ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಸಂರಕ್ಷಣೆ ಎಂದು ಸರ್ಚ್ ಮಾಡಿ ಅಥವಾ ಟೈಪ್ ಮಾಡಿ:

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:

https://samrakshane.karnataka.gov.in/

Step 1:ಅಲ್ಲಿ ನಿಮಗೆ ಒಂದು ಹೊಸ ಓಪನ್ ಆಗುತ್ತೆ ಅದರಲ್ಲಿ ನೀವು ಬೆಳೆ ವಿಮೆ ಮಾಡಿಸಿರ್ತಕ್ಕಂತ ಋತು, ವರ್ಷ ಹಾಕಿ ಗೋ (GO)ಬಟನ್ ಅನ್ನು ಒತ್ತಿ

  • ಆಗ ಅಲ್ಲಿ ವರ್ಷ ಹಾಗೂ ಋತುವಿನ ಆಯ್ಕೆ ಮಾಡಿ
  • ವರ್ಷ 2023-24
  •  ಋತು ಮುಂಗಾರು( kharif)
  • ಮುಂದೆ/GO ಬಟನನ್ನು ಒತ್ತಿ

Step 2: ಅದಾದ ನಂತರ ನಿಮಗೆ ಮತ್ತೊಂದು ಹೊಸ ವಿಂಡೋ ಓಪನ್ ಆಗುತ್ತೆ, ಅಲ್ಲಿ ನೀವು ಫಾರ್ಮರ್ ಕಾರ್ನರ್ ಅಡಿಯಲ್ಲಿ ಇರುವಂತಹ Check status ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ.

ಅಲ್ಲಿ ಮೊದಲನೇ ಆಪ್ಷನ್ ಆದಂತಹ ಪ್ರಪೋಸಲ್ ಮಾರ್ಕ್ ಮಾಡಿ ಅಥವಾ ಕ್ಲಿಕ್ ಮಾಡಿ

ನಂತರ ನಿಮ್ಮ ಪ್ರಪೋಸ ನಂಬರ (ಅಪ್ಲಿಕೇಶನ್ no) ಅಲ್ಲಿ ನಮೂದಿಸಿ ನಂತರ ಕ್ಯಾಚ್ ಅಪ್ ಕೋಡ್ ಟೈಪ್ ಮಾಡಿ ಸರ್ಚ್ ಬಟನ್ ಒತ್ತಿ.

ಅದಾದ ನಂತರ ನಿಮಗೆ ಯಾವ ಬೆಳೆಗೆ ನೀವು ಬೆಳೆ ವಿಮೆ ಮಾಡಿಸಿದ್ದೀರಿ ಹಾಗೂ ಎಷ್ಟು ರೂಪಾಯಿಗಳು ಮಧ್ಯಂತರ ಹಣ ನಿಮ್ಮ ಖಾತೆಗೆ ಬಿಡುಗಡೆಯಾಗಿದೆ ಎಂಬುದರ ಮಾಹಿತಿಯನ್ನು ನೀವು ಇದರ ಮೂಲಕ ಪಡೆಯಬಹುದು

ಈ ರೀತಿ ನಿಮಗೂ ನಿಮ್ಮ ಬೆಳೆವಿಮೆ ಸ್ಟೇಟಸ್ ನಲ್ಲಿ Payment process in progress ಈ ರೀತಿ ಇದ್ದರೆ ನಿಮಗೆ ಇನ್ನೇನು ಕೆಲ ದಿನಗಳಲ್ಲಿ ಬೆಳೆ ವಿಮೆ ಜಮಾ ಆಗಲಿದೆ

Read these also:

ಮಾರ್ಚ್ ಅಂತ್ಯದ ವೇಳೆಗೆ 5 ಲಕ್ಷ ರೈತರಿಗೆ 800 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆ

ಕರ್ನಾಟಕ ರಾಜ್ಯದ ಕೃಷಿ ಸಚಿವರಾದಂತಹ N. ಚೆಲುವರಾಯಸ್ವಾಮಿ ಯವರು  ನಾಗಮಂಗಲದಲ್ಲಿ ನಡೆದಂತಹ ಸಮಾರಂಭದಲ್ಲಿ ಮಾತನಾಡಿ ಮಾರ್ಚ್ ಅಂತ್ಯದ ವೇಳೆಗೆ 5 ಲಕ್ಷ ರೈತರಿಗೆ 800 ಕೋಟಿ ರೂಪಾಯಿಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಹೇಳಿದರು.

ಕರ್ನಾಟಕದಲ್ಲಿ 25 ಲಕ್ಷ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡಿದ್ದು ಅದರಲ್ಲಿ 13 ಲಕ್ಷ ರೈತರಿಗೆ 1400 ಕೋಟಿ ರೂಪಾಯಿಗಳ ಬೆಳೆ ವಿಮೆಯನ್ನು ಕ್ಲೇಮ್ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ಮಧ್ಯಂತರ ಬೆಳೆ ವಿಮೆಯನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದ್ದು ಪೂರ್ಣ ಪ್ರಮಾಣದ ಬೆಳೆ ವಿಮೆಯ ಹಣವನ್ನು ಮಾರ್ಚ್ ಅಂತ್ಯಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಸದ್ಯಕ್ಕೆ 8 ಲಕ್ಷ ರೈತರು ಖಾತೆಗಳಿಗೆ 600 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು ಉಳಿದ 5 ಲಕ್ಷ ರೈತರ ಖಾತೆಗೆ 800 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

 

👉How to check all lands are connected to fid number: ನಿಮ್ಮ ಎಲ್ಲಾ ಹೊಲದ ಸರ್ವೆ ನಂಬರ್ಗಳು fid ನಂಬರಿಗೆ ಲಿಂಕ್ ಆಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ?

https://krishisuddi.com/how-to-check-all-lands-are-connected-to-fid-number/

👉ಈ ದಿನಾಂಕದೊಳಗೆ FID ಮಾಡಿಸದಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ಸಿಗುವುದಿಲ್ಲ

https://krishisuddi.com/last-date-for-fid/

👉How to check all lands are connected to fid number: ನಿಮ್ಮ ಎಲ್ಲಾ ಹೊಲದ ಸರ್ವೆ ನಂಬರ್ಗಳು fid ನಂಬರಿಗೆ ಲಿಂಕ್ ಆಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ?

https://krishisuddi.com/how-to-check-all-lands-are-connected-to-fid-number/

👉ಈ ದಿನಾಂಕದೊಳಗೆ FID ಮಾಡಿಸದಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ಸಿಗುವುದಿಲ್ಲ

https://krishisuddi.com/last-date-for-fid/

 

By Raju

Leave a Reply

Your email address will not be published. Required fields are marked *