ಬೆಳೆ ಸಮೀಕ್ಷೆಗೆ ಕೊನೆಯ ದಿನಾಂಕ ಯಾವುದು ಗೊತ್ತಾ?

ಆತ್ಮೀಯ ರೈತ ಬಾಂಧವರೇ, ಬೆಳೆ ಸಮೀಕ್ಷೆ(crop survey) ಈಗಾಗಲೇ ಪ್ರಾರಂಭವಾಗಿದ್ದು ಆದಷ್ಟು ಬೇಗ ರೈತರು ತಮ್ಮ ಹೊಲದಲ್ಲಿ ಬೆಳೆದಂತಹ ಬೆಳೆಗಳನ್ನು ಬೆಳೆ  ಸಮೀಕ್ಷೆ ಮಾಡಬೇಕಾಗಿ ವಿನಂತಿ. ಹಾಗೆ ಬೆಳೆ ಸಮೀಕ್ಷೆ ಮಾಡಲು ಕೊನೆಯ ದಿನಾಂಕ ಯಾವುದು ಗೊತ್ತಾ?

 ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಮುಗಿದಿದ್ದು, ಈಗ ಮುಂಗಾರು ಬೆಳೆ ಸಮೀಕ್ಷೆ ಜಾರಿಯಲ್ಲಿರುತ್ತದೆ, ಹಾಗಾಗಿ ಆದಷ್ಟು ಬೇಗ ರೈತರು ಬೆಳೆ ಸಮೀಕ್ಷೆ ಮಾಡಬೇಕಾಗಿ ವಿನಂತಿ.

ಇನ್ನು ಮುಂಗಾರು ಸಮೀಕ್ಷೆ ಯಾವಾಗ ಮುಗಿಯುತ್ತದೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಆದೇಶ ಬಂದಿಲ್ಲ, ಹಾಗಾಗಿ ರೈತರು ಆದಷ್ಟು ಬೇಗ ಬೆಳೆ ಸಮೀಕ್ಷೆಯನ್ನು ಮಾಡಬೇಕಾಗಿ ವಿನಂತಿ.

ಬೆಳೆ ಸಮೀಕ್ಷೆ ಮಾಡುವುದರಿಂದ ನಮಗೆ ಸಿಗುವ ಲಾಭಗಳೇನು?

ಕನಿಷ್ಠ ಬೆಂಬಲ ಬೆಲೆ ಯೋಜನೆ,

ಬೆಳೆ ವಿಮೆ ಯೋಜನೆ,

ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು

ಬೆಳೆಸಾಲ ಅನುಕೂಲವಾಗುವದರಿಂದ

ಎಲ್ಲ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ದಾಖಲಿಸಿ ಪಡೆದುಕೊಳ್ಳಬೇಕಿದೆ.

ಅಪ್‌ಲೋಡ್ ಮಾಡದಿದ್ದಲ್ಲಿ ಯೋಜನೆಗಳ ಸದುಪಯೋಗ ಲಾಭದಿಂದ ವಂಚಿತರಾಗುವ ಸಾಧ್ಯತೆ ಇದೆ. ಇದನ್ನು ಮತ್ತು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ವಿವರಗಳನ್ನು ಪಡೆಯುವಲ್ಲಿ ದಾಖಲಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ರೈತರು ಬೆಳೆ ತಾರಾಮಣಿ ಜಿ.ಎಚ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳು, ಕಂದಾಯ/ಕೃಷಿ/ ರೈತರು ಬೆಳೆ ವಿವರಗಳನ್ನು ತೋಟಗಾರಿಕೆ/ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಮೇಲೆ ತಿಳಿಸಿದ ಸಂಪರ್ಕಿಸಬಹುದು ಮೊ/8448447715 ಗೆ ಕರೆ ಮಾಡಲು ಕೋರಿದೆ.

✳️ *ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ*. 👇

https://play.google.com/store/apps/details?id=com.csk.farmer23_24.cropsurvey

🎥 *ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಬಳಸುವ ವಿಧಾನಕ್ಕಾಗಿ ಈ ಕೆಳಗಿನ ಮಾರ್ಗದರ್ಶಿ ವಿಡಿಯೋ ನೋಡಿ.* 👇

*https://youtu.be/12y0D8uyTMs*

👉 *ಬೆಳೆ ಸಮೀಕ್ಷೆ ಪ್ರಕಾರ ನಿಮ್ಮ ಜಮೀನಿನಲ್ಲಿ ದಾಖಲಾದ ಬೆಳೆ ವಿವರದ ಮಾಹಿತಿಯನ್ನು *ಬೆಳೆ ದರ್ಶಕ 2023* ಅಪ್ಲಿಕೇಶನ್ ನಲ್ಲಿ ಪರಿಶೀಲಿಸಿಕೊಳ್ಳಿ. 👇

*https://play.google.com/store/apps/details?id .crop.offcskharif_2023*

https://drive.google.com/file/d/1BMliO5N8g3eJYOQ7wb6k4jdi3IbHKZoH/view

 

ಆತ್ಮೀಯ ರೈತ ಬಾಂಧವರೇ, ನೀವು ಬೆಳೆ ಸಮೀಕ್ಷೆ ಮಾಡಿದರೆ ಮಾತ್ರ ನಿಮ್ಮ ಕೆಲಸ ಮುಗಿಯಿತು ಎಂದು ತಿಳಿದುಕೊಳ್ಳಬೇಡಿ, ನೀವು ಮಾಡಿದಂತಹ ಬೆಳೆ ಸಮೀಕ್ಷೆ ಅಪ್ರೂವ್ ಆಗಿದೆಯೋ ಇಲ್ಲವೋ ಎಂಬುದನ್ನು ಆನ್ಲೈನ್ ಮೂಲಕ ನೀವು ಚೆಕ್ ಮಾಡಿಕೊಂಡು ದೃಢಪಡಿಸಿಕೊಳ್ಳಬೇಕು.

ನೀವು ಮಾಡಿದಂತ ಬೆಳೆ ಸಮೀಕ್ಷೆ ಅಪ್ರೂವಾದರೆ ಮಾತ್ರ ನಿಮ್ಮ ಖಾತೆಗಳಿಗೆ ಬೆಳೆ ವಿಮೆ ಜಮೆಯಾಗುತ್ತದೆ, ಒಂದು ವೇಳೆ ನೀವು ಮಾಡಿದಂತಹ ಬೆಳೆ ಸಮೀಕ್ಷೆ ಅಪ್ರೂವಲ್ ಆಗದಿದ್ದರೆ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗಳಿಗೆ ಬೆಳೆ ವಿಮೆಯ ಹಣ ಜಮಯ ಆಗುವುದಿಲ್ಲ.

ಹಾಗಾದ್ರೆ ಬನ್ನಿ ಆನ್ ಲೈನ್ ಮೂಲಕ ನಮ್ಮ ಮೊಬೈಲ್ ನಲ್ಲಿ ನಾವು ಮಾಡಿದಂತಹ ಬೆಳೆ ಸಮೀಕ್ಷೆ ಅಪ್ರೂವ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ:

ಮೊಟ್ಟಮೊದಲು ನಿಮ್ಮ ಮೊಬೈಲಲ್ಲಿ ಬೆಳೆದರ್ಶಕ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ

https://play.google.com/store/apps/details?id=com.crop.offcskharif_2021

App ಅನ್ನು ಇನ್ಸ್ಟಾಲ್ ಮಾಡಿ ಓಪನ್ ಮಾಡಿ.

ನಂತರ ಮುಖ್ಯ ಪೇಜ್ ನಲ್ಲಿ ಕಾಣುವಂತಹ ಎಲ್ಲ ಮಾಹಿತಿಗಳನ್ನು ನಮೂದಿಸಿ

ಜಿಲ್ಲೆ

ತಾಲೂಕ

ಹೋಬಳಿ

ಗ್ರಾಮ

ಸರ್ವೇ ನಂಬರ್

ಹಿಸ್ಸಾ ನಂಬರ್

ಮಾಲೀಕರ ವಿವರವನ್ನು ಆಯ್ಕೆ ಮಾಡಿ

ಆನಂತರ ಅಲ್ಲಿ ಸಮೀಕ್ಷೆ ವಿವರನು ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಆಗ ನಿಮಗೆ ಕೆಳಗಡೆ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಯಾರು ಮಾಡಿದ್ದಾರೋ ಅವರ ಹೆಸರು ಮೊಬೈಲ್ ನಂಬರ್ ಹಾಗೂ ದಿನಾಂಕ ನಿಮಗೆ ಅಲ್ಲಿ ಕಾಣುತ್ತದೆ

ಸಮೀಕ್ಷೆಗಾರರ ಹೆಸರಿನ ಮೇಲೆ ಕ್ಲಿಕ್ ಮಾಡಿ, ಬೆಳೆ ವಿವರ ವೀಕ್ಷಿಸಿ ಎಂಬ ಆಯ್ಕೆಯನ್ನು ಆಯ್ಕೆ ಮಾಡಿ

ಆಗ ನೀವು ಷರ ವಿಭಾಗದಲ್ಲಿ ನಿಮ್ಮ ಸಮೀಕ್ಷೆ approve ಆಗಿದೆಯೋ ಇಲ್ಲವೋ ಎಂದು.

ಹಾಗಾಗಿ ಎಲ್ಲ ರೈತರು ಬೆಳೆ ಸಮೀಕ್ಷೆ ಮಾಡಿದ ಮೇಲೆ approve ಆಗಿದೆಯೋ ಇಲ್ಲವೋ ಎಂಬುದನ್ನು ನೋಡಬೇಕಾಗಿ ವಿನಂತಿ.

ಯಾರು approve ಮಾಡಲಿದ್ದಾರೆ?

ಅದನ್ನು ನಿಮ್ಮ ಹೋಬಳಿಯ ಕೃಷಿ ಇಲಾಖೆ ಅಥವಾ ನಿಮ್ಮ ಗ್ರಾಮದ ಲೆಕ್ಕಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಿರಲಾಗುತ್ತದೆ.

Approve ಯಾವಾಗ ಆಗುತ್ತದೆ?

ನೀವು ಬೆಳೆ ಸಮೀಕ್ಷೆ ಮಾಡಿದ ತಕ್ಷಣ approve ಆಗುವುದಿಲ್ಲ, ಅದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಅಧಿಕಾರಿಗಳು ಚೆಕ್ ಮಾಡಿದ ಮೇಲೆ ಎಲ್ಲ ಸರಿ ಇದ್ದರೆ approve ಕೊಡುತ್ತಾರೆ.

Approve ಆಗದಿದ್ದರೆ ಏನು ಮಾಡಬೇಕು?

ಒಂದು ವೇಳೆ ನೀವು ಮಾಡಿದಂತಹ ಬೆಳೆ ಸಮೀಕ್ಷೆಯಲ್ಲಿ ತಪ್ಪಿದ್ದರೆ ಅದನ್ನು reject ಮಾಡಿ sent for resurvey ಎಂದು ಬರುತ್ತದೆ, ಆಗ ನೀವು ನಿಮ್ಮ ಗ್ರಾಮದ PR ಅಪ್ಪನಲ್ಲಿ ಬೆಳೆ ಸಮೀಕ್ಷೆ ಮಾಡಿಸಬೇಕಾಗುತ್ತದೆ.

 ಬೆಳೆ ಸಮೀಕ್ಷೆ ಬಗ್ಗೆ ಏನಾದರೂ ತೊಂದರೆಗಳಿದ್ದಲ್ಲಿ ನಿಮ್ಮ ಗ್ರಾಮದ PR,  ಗ್ರಾಮ ಲೆಕ್ಕಾಧಿಕಾರಿ ಅಥವಾ ನಿಮ್ಮ ಹೋಬಳಿಯ ಅಥವಾ ತಾಲೂಕಿನ ಅಥವಾ ಜಿಲ್ಲೆಯ ಕೃಷಿ ಅಧಿಕಾರಿಗಳು ಅಥವಾ ತೋಟಗಾರಿಕೆ ಅಧಿಕಾರಿಗಳು ಅಥವಾ ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ನಿಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

 ಇನ್ನು ನಿಮಗೆ ಸರ್ಕಾರದ ವತಿಯಿಂದ ಬೆಳೆ ಸಮೀಕ್ಷೆ ಹೆಲ್ಪ್ಲೈನ್ ನಂಬರನ್ನು ಕೂಡ ಬಿಡುಗಡೆ ಮಾಡಲಾಗಿದೆ ಈ ನಂಬರ್ಗೆ ಕರೆ ಮಾಡುವ ಮೂಲಕ ನೀವು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

krishisuddi whatsapp group

 

 

Leave a Comment