ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡದಲ್ಲಿ ಕುಡಿಯುವ ನೀರು ಪೂರೈಕೆ ಸಮಸ್ಯೆ, ಸೋರಿಕೆ, ಮೀಟರ್ ರೀಡಿಂಗ್ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾದಲ್ಲಿ ಸಹಾಯವಾಣಿ 7996666247 ಸಂಖ್ಯೆಗೆ ದೂರು ನೀಡಲು ಕೋರಲಾಗಿದೆ.

ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದು, ನೀರಿನ ಗುಣಮಟ್ಟ, ನೀರು ಪೂರೈಕೆ, ಸೋರಿಕೆ, ಮೀಟರ್ ನಿರ್ವಹಣೆ, ಗ್ರಾಹಕರ ಹೆಸರು ಮತ್ತು ದೂರವಾಣಿ ಬದಲಾವಣೆ, ಹೊಸ ಸಂಪರ್ಕ, ತಾತ್ಕಾಲಿಕ ಸಂಪರ್ಕ, ಸಂಪರ್ಕ ಕಡಿತ, ರಸ್ತೆಯಲ್ಲಿ ನೀರಿನ ಸೋರಿಕೆ ಹಾಗೂ ನೀರು ಪೂರೈಕೆಗೆ ಸಂಬಂಧಿಸಿದ ದೂರುಗಳನ್ನು ಸಹಾಯವಾಣಿಗೆ ದಾಖಲಿಸಬೇಕೆಂದು ಮನವಿ ಮಾಡಲಾಗಿದೆ.

By Raju

Leave a Reply

Your email address will not be published. Required fields are marked *