VILLAGE MAP IN MOBILE

ಅನೇಕ ರೈತರು ಹೊಲಗಳಿಗೆ ಹೋಗಲು ಕಾಲುದಾರಿ ಇಲ್ಲದೆ ಪರಿದಾಡುತ್ತಾರೆ. ನಿಮ್ಮ ಹೊಲಗಳಿಗೆ ಹೋಗಲು ಸರ್ಕಾರದ ಈ ಅನುಕೂಲದ ಮುಖಾಂತರ ನಿಮ್ಮ ಹೊಲದ ಸುತ್ತಮುತ್ತ ಎಲ್ಲಿ ಕಾಲುದಾರಿ ಇದೆ ಮತ್ತು ನಿಮ್ಮ ಹೊಲದ ಗಡಿರೆಕೆ ಹೀಗೆ ಹಲವಾರು ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿಯೆ ಹೇಗೆ ತಿಳಿದುಕೊಳ್ಳಬೇಕೆಂಬ ಮಾಹಿತಿಯನ್ನು ಈಗಲೇ ತಿಳಿಯಿರಿ.

ಆಧುನಿಕ ತಂತ್ರಜ್ಞಾನದ ಯುಗದಲ್ಲಿ, ಜನರಿಗೆ ಪ್ರತಿಯೊಂದು ಮಾಹಿತಿಯನ್ನು ಕುಳಿತುಕೊಂಡಲ್ಲೇ ತಿಳಿದುಕೊಳ್ಳಲು ಹೊಸ ಹೊಸ ತಂತ್ರಜ್ಞಾನದ ಆಯುಷ್ಕಾರವಾಗುತ್ತಲೇ ಇವೆ.

ಇದೇ ರೀತಿ ರೈತರಿಗೆ ನಮ್ಮ ಕೃಷಿ ದಾಸ್ತಾನುಗಳನ್ನು ಸಾಗಿಸಲು ಮತ್ತು ಎತ್ತಿನ ಬಂಡಿ ಟ್ರ್ಯಾಕ್ಟರ್ ಲಾರಿ ಹೋಗಲು ಇರುವ  ಬಂಡಿ ದಾರಿ, ತಮ್ಮ ಹೊಲದ ಸುತ್ತಮುತ್ತ ಎಲ್ಲಿದೆ ಎಂದು ರೈತರಿಗೆ ನಿಖರವಾದ ಮಾಹಿತಿ ಗೊತ್ತಿರುವುದಿಲ್ಲ.

ಈ ನಿಖರವಾದ ಮಾಹಿತಿಯನ್ನು ತಿಳಿದುಕೊಳ್ಳಲು, ರೈತರು ಸರ್ಕಾರದ ಕಚೇರಿಗೆ ( Government office ) ಅಲೆದಾಡದೆ ತಮ್ಮ ಮೊಬೈಲ್ ನಲ್ಲಿ ಹೊಲದ ಕಾಲುದಾರಿ, ಬಂಡಿ ದಾರಿಯನ್ನು ಹೀಗೆ ತಿಳಿದುಕೊಳ್ಳಬಹುದು.

ಕಾಲುದಾರಿ, ಬಂಡಿ ದಾರಿಯ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ಕಾಲುದರಿಯನ್ನು check ಚೆಕ್ ಮಾಡುವುದು ಹೇಗೆ?

 ಕಾಲುದಾರಿಯ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

Direct link to check your land records –

https://www.landrecords.karnataka.gov.in/service3/

ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ, ಮೇಲುಗಡೆಯ ಭಾಗದಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಮತ್ತು ನಕ್ಷೆಯ ಪ್ರಕಾರವನ್ನು ಎಂಟರ್ ಮಾಡಲು ಕೇಳುತ್ತದೆ. ನಿಮಗೆ ಬೇಕಾಗಿರುವ ನಕ್ಷೆಯನ್ನು ತಿಳಿದುಕೊಳ್ಳಲು, ನಿಮ್ಮ ಹೊಲವಿರುವ ಜಿಲ್ಲಾ ತಾಲೂಕು ಹೋಬಳಿಯನ್ನು ಆಯ್ಕೆ ಮಾಡಿಕೊಂಡು ನಂತರ ಸರ್ಚ್ ( Search ) ಎಂಬ ಆಪ್ಶನ್ ಮೇಲೆ ಕ್ಲಿಕ್ click ಮಾಡಿ.

ನಂತರ ಅಲ್ಲಿ ನಿಮಗೆ ನಿಮ್ಮ ಹೋಬಳಿ ಅಡಿಯಲ್ಲಿ ಬರುವ ಎಲ್ಲಾ ಊರುಗಳ ಹೆಸರನ್ನು ತೋರಿಸಲಾಗುತ್ತದೆ. ಅಲ್ಲಿ ನಿಮ್ಮ ಊರಿನ ಹೆಸರಿನ ಮುಂದೆ ಕಾಣುವ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಒಂದು ಫೈಲ್ ಡೌನ್ಲೋಡ್ ( File download ) ಆಗುತ್ತದೆ.

 ಆ ಫೈಲ್ ನಲ್ಲಿ ನಿಮ್ಮ ಊರಿನ ಭೂಮಿ ನಕ್ಷೆ ಯನ್ನು ಕಾಣಬಹುದು.

 ಆ ನಕ್ಷೆಯಲ್ಲಿ ಹಳದಿ ಬಣ್ಣದ ಗೆರೆಯಲ್ಲಿ ಕಾಣಿಸುತ್ತದೆಯೋ, ಅದೇ ನಿಮ್ಮ ಹೊಲದ ಕಾಲುದಾರಿಯಾಗಿರುತ್ತದೆ. ಇದೇ ರೀತಿ ಈ ನಕ್ಷೆಯಲ್ಲಿ ಇನ್ನೂ ನಿಮಗೆ ಬೇಕಾಗಿರುವ ಅನೇಕ ಮಾಹಿತಿಗಳಿವೆ.

ನಾವು ದಿನನಿತ್ಯ ರೈತರಿಗೆ ಉಪಯೋಗವಾಗುವಂತಹ ಮಾಹಿತಿಯನ್ನು ನೀಡುತ್ತೇವೆ ಮತ್ತು  ನಾವು ನೀಡುತ್ತಿರುವ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ

READ THIS ALSO:

1.ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?

ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ? ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

2.Mailara Lingeshwar Karnika 2023: ರೈತರ ಕಷ್ಟದ ಬಗ್ಗೆ ಭವಿಷ್ಯ ಹೇಳಿದ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಕಾರ್ಣಿಕ.

“ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣಿ ಕಟ್ಟಿತಲೇ ಪರಾಕ್”! ಎಂಬ ನುಡಿಯನ್ನು ಐತಿಹಾಸಿಕ ಸ್ಥಳವಾದ ದೇವರಗುಡ್ಡದ ಗೊರವಜ್ಜನ ಕಾರ್ಣಿಕ ಇದಾಗಿದೆ. ಈ ನುಡಿಯು ರೈತರ ಬರಗಾಲದ ಸಂಕಷ್ಟದ ಬಗ್ಗೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿದವರು ಹೇಳಿದ್ದಾರೆ.

3.Gruhalakshmi :ಗೃಹಲಕ್ಷ್ಮಿ ಹಣ ಇನ್ನೂ ನಿಮ್ಮ ಖಾತೆಗೆ ಜಮೆ ಆಗಿಲ್ಲವೇ? ರೇಷನ್ ಕಾರ್ಡ್ ನೊಂದಿಗೆ ಕೂಡಲೇ ಈ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ – ಯಾವ ಇಲಾಖೆ ಗೊತ್ತಾ?

ತ್ಮೀಯ ಬಾಂಧವರೇ,ಗೃಹಲಕ್ಷ್ಮಿ(Gruhalakshmi) ಯೋಜನೆಯ(Scheme) ಎರಡು ಕಂತುಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು ಇನ್ನೂ ಕೂಡ ಹಣವನ್ನು ಪಡೆಯದಂತಹ ಫಲಾನುಭವಿಗಳು ಯಾವ ಇಲಾಖೆಗೆ ಭೇಟಿಯಾಗಬೇಕು ಇಲ್ಲಿದೆ ನೋಡಿ ಮಾಹಿತಿ.

ಆತ್ಮೀಯ ರೈತ ಬಾಂಧವರೇ,  ಮಳೆಗಾಗಿ  ಕಾದು ಕುಳಿತಿರುವಂತಹ ರೈತರಿಗೆ  ಹವಾಮಾನ ಇಲಾಖೆಯು(IMD)  ದಸರಾ(DASARA) ಹಬ್ಬಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದು,  ಅದೇನೆಂದರೆ ರಾಜ್ಯದಲ್ಲಿ ಭಾರಿ ಮಳೆ(HEAVY RAIN) ನಿರೀಕ್ಷೆ  ಎಂದು ಹವಾಮಾನ ಇಲಾಖೆಯು(IMD) ಮುನ್ಸೂಚನೆಯನ್ನು(FORECAST) ನೀಡಿದೆ.

5.Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ  ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು,  ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

6.crop insurance: 2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು .

ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.

 

 

 

 

By Raju

Leave a Reply

Your email address will not be published. Required fields are marked *