tomato

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಕಳೆದ ಎರಡು ಮೂರು ತಿಂಗಳುಗಳಲ್ಲಿ ಗಗನಕ್ಕೇರಿದ ಟೊಮ್ಯಾಟೋ ಬೆಲೆ ಇದೀಗ ದಿಢೀರ್ ಕುಸಿತಗೊಂಡಿದ್ದು, ಎರಡು ನೂರು ರೂಪಾಯಿಗಳಿಗೆ ಪ್ರತಿ ಕೆಜಿ ಮಾರಾಟವಾಗಿದ್ದ ಟೊಮೆಟೊ ಇದೀಗ 20 ರೂಪಾಯಿಗೆ ಇಳಿದಿದೆ.

ನಾವೆಲ್ಲ ಗಮನಿಸಿದ ಹಾಗೆ ಹಲವಾರು ರೈತರು ಟೊಮೇಟೊ ಬೆಳೆದು ಕೋಟ್ಯಾಧಿಪತಿಗಳಾಗಿದ್ದನ್ನು ನಾವು ಕಳೆದ ಎರಡು ಮೂರು ತಿಂಗಳುಗಳಲ್ಲಿ ಗಮನಿಸಿದ್ದೆವು, ಟೊಮ್ಯಾಟೋ ಒಂದು ತರ ಅದೃಷ್ಟದ ಬೆಳೆಯಾಗಿದ್ದು ಕೆಲ ಒಮ್ಮೆ ಕೈ ಹಿಡಿದರೆ ಕೆಲವೊಮ್ಮೆ ಕೈ ಕೊಡುವುದು.

ಶನಿವಾರ ಮೈಸೂರಿನ ಎಪಿಎಂಸಿಯಲ್ಲಿ ರೂ.20 ಗಳಿಗೆ ಕೆಜಿ ಮಾರಾಟವಾಗಿದ್ದ ಟೊಮೆಟೊ, ಭಾನುವಾರ ಮತ್ತೆ ಕುಸಿತಕೊಂಡು 14 ರೂಪಾಯಿಗಳಿಗೆ ಪ್ರತಿ ಕೆಜಿ ಮಾರಾಟವಾಗಿದೆ. ಇನ್ನು ಬೆಂಗಳೂರಿನಲ್ಲಿ ನಾವು ನೋಡುವುದಾದರೆ ರಿಟೇಲ್ ದರ 30 ರಿಂದ 35 ಪ್ರತಿ ಕೆಜಿಗೆ ಇದೆ.

ದೈನಂದಿನ ಎಪಿಎಂಸಿ ಮಾರುಕಟ್ಟೆಯ ದರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ :

https://www.krishimaratavahini.kar.nic.in/

ಪ್ರತಿ ಕೆಜಿ ಟೊಮ್ಯಾಟೋ ಬೆಳೆಯಲು 10 ರಿಂದ 12 ರೂಪಾಯಿಗಳು ಖರ್ಚಾಗುತ್ತದೆ, ಇನ್ನು ಅವುಗಳನ್ನು ಪ್ಯಾಕ್ ಮಾಡಲು ಹಾಗೂ ಮಾರಲು ಮೂರು ರೂಪಾಯಿಗಳು ಅಂದರೆ ಪ್ರತಿಯೊಂದು ಕೆಜಿ ಟೊಮೇಟೊಗೆ 13-15 ರೂಪಾಯಿಗಳು ಖರ್ಚಾಗುತ್ತವೆ, ಆದರೆ ಈ ರೀತಿ ರೈತರಿಗೆ ಕೆಜಿಗೆ 14 ರೂಪಾಯಿ ಸಿಕ್ಕರೆ ರೈತರಿಗೆ ಬಹಳ ನಷ್ಟವಾಗುತ್ತದೆ.

ಮಾರುಕಟ್ಟೆಗೆ ಅಧಿಕ ಪ್ರಮಾಣದ ಟೊಮ್ಯಾಟೋ ಬರುವ ಕಾರಣಗಳಿಂದಾಗಿ ಬೆಲೆಕುಸಿತವಾಗಿದೆ ಎಂದು ಮೈಸೂರು ಎಪಿಎಂಸಿ ಸೆಕ್ರೆಟರಿ ಆದಂತಹ ಎಂಆರ್ ಕುಮಾರಸ್ವಾಮಿ ಅವರು ಮಾಹಿತಿಯನ್ನು ನೀಡಿದರು. ಪ್ರತಿದಿನ 40 ಕ್ವಿಂಟಲ್ ಟೊಮೆಟೊ ಮಾರುಕಟ್ಟೆಗೆ ಬರುತ್ತಿದೆ ಎಂಬುದನ್ನು ಕೂಡ ಅವರು ಹೇಳಿದರು.

ಅಧಿಕಾರಿಗಳ ಮಾಹಿತಿಯ ಪ್ರಕಾರ ಉತ್ತರ ಕರ್ನಾಟಕದಲ್ಲಿ ಟೊಮೇಟೊ ಬೆಲೆ ಧೀಡಿರ್ ಉಸಿತವಾಗಲು ಪ್ರಮುಖ ಕಾರಣವೇನೆಂದರೆ ಟೊಮೆಟೊವನ್ನು ನೇಪಾಳದಿಂದ ಇಂಪೋರ್ಟ್ ಮಾಡಲಾಗುತ್ತಿದ್ದು, ಹಾಗಾಗಿ ದರ ಕುಸಿದಿದ್ದು ಮುಂದಿನ ದಿನಗಳಲ್ಲಿ ಐದರಿಂದ ಹತ್ತು ರೂಪಾಯಿಗಳವರೆಗೂ ಹೋಗಬಹುದು ಎಂದು ಮಾಹಿತಿಯನ್ನು ನೀಡಿದರು.

ಮತ್ತೊಂದಡೆ ಟೊಮ್ಯಾಟೋ ದರ ಏರಿಕೆಯಾದ ಕಾರಣಗಳಿಂದಾಗಿ ರಾಜ್ಯದ ಬಹುತೇಕ ರೈತರು ಟೊಮೇಟೊ ಬೆಳೆಯನ್ನು ಬೆಳೆಯುತ್ತಿದ್ದು ಇದು ಕೂಡ ಅದಕ್ಕೆ ಒಂದು ಕಾರಣವಾಗಿರಬಹುದು ಎಂದು ಹೇಳಿದರು.

Read this also:

1.ನನ್ನ ಖಾತೆಗೆ ಇಂದು ಎರಡನೇ ತಿಂಗಳ ಅನ್ನಭಾಗ್ಯ ಯೋಜನೆಯ 510 ರೂಪಾಯಿಗಳು ಜಮೆ? ನಿಮ್ಮ ಖಾತೆಗೂ ಜಮೆಯಾಗಿದೆಯೇ ಈಗಲೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ಘೋಷಿಸಿದಂತಹ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ.

ಈಗಾಗಲೇ ಶಕ್ತಿ ಯೋಜನೆ, ಗೃಹಜೋತಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಈಗ ಅನ್ನ ಭಾಗ್ಯ ಯೋಜನೆಯ ಹಣವು ಕೂಡ ಖಾತೆಗಳಿಗೆ ಜಮಯಾಗುತ್ತಿವೆ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :https://ahara.kar.nic.in/

2.Karnataka gruhalakshmi yojana: ಇದೆ ತಿಂಗಳ 30 ರಂದು ರಾಜ್ಯದ ಮಹಿಳೆಯರ ಖಾತೆಗೆ 2000 ರೂಪಾಯಿಗಳು ಬಿಡುಗಡೆ

ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರ  ತಾವು ಘೋಷಿಸಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ karnataka gruhalakshmi yojana ಜಾರಿಗೆ ತರುವ ಮೂಲಕ  ನುಡಿದಂತೆ ನಡೆದಿದೆ.

ಈ ಯೋಜನೆಯಲ್ಲಿ ನೋಂದಾಯಿಸಿಕೊಂಡಂತಹ  ಅರ್ಹ ಮಹಿಳೆಯರಿಗೆ  ಪ್ರತಿ ತಿಂಗಳು 2000ಗಳನ್ನು ಅವರ ಖಾತೆಗಳಿಗೆ Direct benefit transfer ಮೂಲಕ ಜಮೆ ಮಾಡಲಾಗುವುದು.

Gruhalakshmi scheme official website

https://sevasindhugs.karnataka.gov.in/

3.Gruhalakshmi ಯೋಜನೆಯಡಿ 2000 ರೂಪಾಯಿ ಪಡೆಯುವವರ ಪಟ್ಟಿ ಬಿಡುಗಡೆ : ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಘೋಷಿಸಿದಂತಹ ಗ್ಯಾರಂಟಿಗಳಲ್ಲಿ  ಒಂದಾದಂತಹ Gruhalakshmi ಯೋಜನೆಯು ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದ್ದು, ಈ ಯೋಜನೆಯಡಿ ಈಗಾಗಲೇ ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

https://ahara.kar.nic.in/WebForms/Show_Village_List.aspx

4.ಬೆಳ ಸಮಿಕ್ಷೆ ಮತ್ತೆ ಪ್ರಾರಂಭ: ಬೆಳೆ ವಿಮೆ ಬರಬೇಕೆಂದರೆ ಕೂಡಲೇ ನೀವು ಬೆಳೆದಂತಹ ಬೆಳೆಯನ್ನು ಬೆಳೆ ಸಮೀಕ್ಷೆ ಮಾಡಿ

ಆತ್ಮೀಯ ರೈತ ಬಾಂಧವರೇ, ಈಗಾಗಲೇ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಪೂರ್ಣಗೊಂಡಿದ್ದು ಇದೀಗ ಮುಂಗಾರು ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು, ಇನ್ನು ಕೂಡ ಬೆಳೆ ಸಮೀಕ್ಷೆ ಮಾಡದಂತಹ ರೈತರು ಆದಷ್ಟು ಬೇಗ ಬೆಳೆ ಸಮೀಕ್ಷೆ ಮಾಡಬೇಕಾಗಿ ವಿನಂತಿ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳು, ಕಂದಾಯ/ಕೃಷಿ/ ರೈತರು ಬೆಳೆ ವಿವರಗಳನ್ನು ತೋಟಗಾರಿಕೆ/ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಮೇಲೆ ತಿಳಿಸಿದ ಸಂಪರ್ಕಿಸಬಹುದು ಮೊ/8448447715 ಗೆ ಕರೆ ಮಾಡಲು ಕೋರಿದೆ.

✳️ *ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಿ*. 👇

https://play.google.com/store/apps/details?id=com.csk.farmer23_24.cropsurvey

🎥 *ರೈತರ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಅನ್ನು ಬಳಸುವ ವಿಧಾನಕ್ಕಾಗಿ ಈ ಕೆಳಗಿನ ಮಾರ್ಗದರ್ಶಿ ವಿಡಿಯೋ ನೋಡಿ.* 👇

*https://youtu.be/12y0D8uyTMs*

👉 *ಬೆಳೆ ಸಮೀಕ್ಷೆ ಪ್ರಕಾರ ನಿಮ್ಮ ಜಮೀನಿನಲ್ಲಿ ದಾಖಲಾದ ಬೆಳೆ ವಿವರದ ಮಾಹಿತಿಯನ್ನು *ಬೆಳೆ ದರ್ಶಕ 2023* ಅಪ್ಲಿಕೇಶನ್ ನಲ್ಲಿ ಪರಿಶೀಲಿಸಿಕೊಳ್ಳಿ. 👇

*https://play.google.com/store/apps/details?id .crop.offcskharif_2023*

👉 ಬೆಳೆ ಸಮೀಕ್ಷೆಗೆ ಬಳಸುವ *ಬೆಳೆ ಕೋಡ್* ಗಳನ್ನು ಈ ಕೆಳಗಿನ ಲಿಂಕ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಿ.👇https://drive.google.com/file/d/1BMliO5N8g3eJYOQ7wb6k4jdi3IbHKZoH/view

 

5.ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾಡ್ ೯ದಾರರ ಖಾತೆಗೆ 2ನೇ ಕಂತಿನ ಹಣ :ನಿಮ್ಮ ಖಾತೆಗೂ ಜಮೆಯಾಗಿದೆಯೋ ಈಗಲೇ ಚೆಕ್ ಮಾಡಿಕೊಳ್ಳಿ

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾಡ್ ೯ದಾರರ ಖಾತೆಗೆ 2ನೇ ಕಂತು ಹಣ ಸಂದಾಯವಾಗುತ್ತಿದೆ. ರಾಜ್ಯಾದ್ಯಂತ 1.03 ಕೋಟಿ ಕಾರ್ಡ್‌ಗಳಿದ್ದು, 3.69 ಕೋಟಿ ಫಲಾನುಭವಿಗಳಿಗೆ 605 ಕೋಟಿ ರೂ. ಪಾವತಿಸಬೇಕಿದೆ.

31 ಜಿಲ್ಲೆಗಳ ಪೈಕಿ ಬೀದರ್, ಚಿತ್ರದುರ್ಗ, ದಾವಣಗೆರೆ ಹಾಗೂ ರಾಮನಗರ ಫಲಾನುಭವಿಗಳಿಗೆ ಹಣ ಪಾವತಿಸಲಾಗಿದ್ದು, ಮುಂದಿನ ಐದು ದಿನಗಳಲ್ಲಿ ಉಳಿದ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವುದಾಗಿ ಆಹಾರ ಇಲಾಖೆಮಾಹಿತಿ ನೀಡಿದೆ.

 

By Raju

Leave a Reply

Your email address will not be published. Required fields are marked *