ಬೆಳೆ ಸಮೀಕ್ಷೆ(crop survey) ಮಾಡಲು ಇಂದು ಕೊನೆಯ ದಿನಾಂಕ: ಇಂದು ಬೆಳೆ ಸಮೀಕ್ಷೆ ಮಾಡಿದಿದ್ದರೆ ನಿಮಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರದ ಹಣ ನಿಮಗೆ ಸಿಗುವುದಿಲ್ಲ

 ಆತ್ಮೀಯ ರೈತ ಬಾಂಧವರೇ, ಬೆಳೆ ಸಮೀಕ್ಷೆ (crop survey) ಮಾಡಲು ಇಂದು ಅಂದರೆ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದು, ಇಂದು ಬೆಳೆ ಸಮೀಕ್ಷೆ ಮಾಡದಂತಹ ರೈತರಿಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರದ ಹಣ ರೈತರ ಖಾತೆಗಳಿಗೆ  ಜಮೆ ಆಗುವುದಿಲ್ಲ.

 ತಮಗೆಲ್ಲ ತಿಳಿದಿರುವ ಹಾಗೆ ಸರ್ಕಾರವು ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಪಡೆಯಲು ಬೆಳೆ ಸಮೀಕ್ಷೆಯನ್ನು ಕಡ್ಡಾಯಗೊಳಿಸಿದ್ದು, ರೈತರು ತಮ್ಮ ಹೊಲದಲ್ಲಿ ಬೆಳೆದಂತಹ ಬೆಳೆಗಳನ್ನು ತಾವೇ ಸ್ವತಃ ಅಥವಾ ತಮ್ಮ ಗ್ರಾಮದ ಪಿ ಆರ್ ಗಳ ಮೂಲಕ ಬೆಳೆ ಸಮೀಕ್ಷೆ ಮಾಡಿಸುವುದು ಕಡ್ಡಾಯವಾಗಿದೆ.

 ಹೀಗಾಗಿ ಬೆಳೆ ಸಮೀಕ್ಷೆ ಮಾಡಲು ಇಂದು ಅಂದರೆ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದು ಇನ್ನೂ ಬೆಳೆ ಸಮೀಕ್ಷೆ ಮಾಡಿದಂತಹ ರೈತರು ಆದಷ್ಟು ಬೇಗ ಇಂದು ಸಂಜೆ ಒಳಗೆ ಬೆಳೆ ಸಮೀಕ್ಷೆ ಮಾಡಬೇಕಾಗಿ ವಿನಂತಿ.

ಬೆಳೆ ಸಮೀಕ್ಷೆ ಮಾಡುವುದು ಹೇಗೆ?

2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಾವೇ ಖುದ್ದಾಗಿ ಗೂಗಲ್ ಪ್ಲೇಸ್ಟೋರ್ ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ 2023″ ಹಾಗೂ ಆಯಾ ಗ್ರಾಮದ ಖಾಸಗಿ ನಿವಾಸಿಗಳ “ಮುಂಗಾರು ಬೆಳೆ ಸಮೀಕ್ಷೆ 2023-24″ ನ್ನು Download ಮಾಡಿಕೊಂಡು ಬೆಳೆ ವಿವರಗಳನ್ನು ದಾಖಲಿಸಬೇಕಾಗಿದೆ.

“ಮುಂಗಾರು ರೈತರ ಬೆಳೆ ಸಮೀಕ್ಷೆ 2023″: ಡೈರೆಕ್ಟ್ ಲಿಂಕ್:

https://play.google.com/store/apps/details?id=com.csk.farmer23_24.cropsurvey

“ಮುಂಗಾರು ಬೆಳೆ ಸಮೀಕ್ಷೆ 2023-24″:ಡೈರೆಕ್ಟ್ ಲಿಂಕ್

https://play.google.com/store/apps/details?id=com.csk.PR_Kharif_2023.cropsurvey

ಹೀಗೆ ವಿವರಗಳನ್ನು ದಾಖಲಿಸುವದರಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ ಯೋಜನೆ, ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ಬೆಳೆಸಾಲ ಪಡೆಯುವಲ್ಲಿ ರೈತರಿಗೆ ಅನುಕೂಲವಾಗುವದರಿಂದ ಎಲ್ಲ ರೈತರು ಬೆಳೆ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಗ್ರಾಮದ ಖಾಸಗಿ ನಿವಾಸಿಗಳು, ಕಂದಾಯ/ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು ಹಾಗೂ 18004253553 ಗೆ ಕರೆ ಮಾಡಲು ಕೋರಿದೆ.

ಬೆಳೆ ಸಮೀಕ್ಷೆ ಮಾಡುವುದರಿಂದ ನಮಗೆ ಸಿಗುವ ಲಾಭಗಳೇನು?

ಕನಿಷ್ಠ ಬೆಂಬಲ ಬೆಲೆ ಯೋಜನೆ,

ಬೆಳೆ ಪರಿಹಾರ,

ಬೆಳೆ ವಿಮೆ ಯೋಜನೆ,

ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು

ಬೆಳೆಸಾಲ ಅನುಕೂಲವಾಗುವದರಿಂದ

ಎಲ್ಲ ವಿವರಗಳನ್ನು ತ್ವರಿತವಾಗಿ ಬೆಳೆ ಸಮೀಕ್ಷೆ ದಾಖಲಿಸಿ ಪಡೆದುಕೊಳ್ಳಬೇಕಿದೆ.

Leave a Comment