annabhagya

ಆತ್ಮೀಯ ಬಾಂಧವರೇ, ಈಗಾಗಲೇ ಎರಡು ಕಂತಿನ ಅನ್ನಭಾಗ್ಯ(Annabhagya) ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಸೇರಲಿದೆ, ಇದೀಗ ಮೂರನೇ ಕಂತಿನ ಹಣ ಪಡೆಯುವವರ  ಲಿಸ್ಟ್ ಬಿಡುಗಡೆಯಾಗಿದ್ದು ಈ ಲಿಸ್ಟ್ ನಲ್ಲಿ ಇರುವವರಿಗೆ ಮಾತ್ರ ಮೂರನೇ ಕಂತಿನ ಹಣ ಜಮೆಯಾಗಲಿದೆ.

 ಹಾಗಾದರೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಆನ್ಲೈನ್ ಮೂಲಕ ನಿಮ್ಮ ಮೊಬೈಲ್ ನಲ್ಲಿಯೇ ನೀವು ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಬಹುದಾಗಿದೆ ಬನ್ನಿ ಹೇಗೆ ಅಂತ ತಿಳಿದುಕೊಳ್ಳೋಣ.

ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?

https://ahara.kar.nic.in/WebForms/Show_Village_List.aspx

ಮೇಲೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆಗ ನೀವು ಡೈರೆಕ್ಟಾಗಿ ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ವೆಬ್ ಸೈಟಿಗೆ ಬರಲಿದ್ದೀರಿ.

 ಅಲ್ಲಿ ಕೆಳಗಡೆ ನಿಮ್ಮ ಜಿಲ್ಲೆ, ತಾಲೂಕು, ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ Go ಬಟನ್ ಮೇಲೆ ಕ್ಲಿಕ್ ಮಾಡಿ.

 ಆಗ ನೀವು ನಿಮ್ಮ ಹಳ್ಳಿಯಲ್ಲಿ ಯಾರ್ಯಾರಿಗೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಬರುತ್ತದೆ ಎಂಬುದನ್ನು ಗಮನಿಸಬಹುದಾಗಿದೆ.

ಆತ್ಮೀಯ ಬಾಂಧವರೇ, ಅನ್ನಭಾಗ್ಯ ಯೋಜನೆಯ ಎರಡನೇ ಕಂತಿನ ಹಣ ಸುಮಾರು ಒಂದು ಕೋಟಿ ಫಲಾನುಭವಿಗಳಿಗೆ ಈಗಾಗಲೇ ಜಮೆಯಾಗಿದ್ದು,ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಆದಂತಹ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡಲು ಘೋಷಿಸಿತ್ತು, ಆದರೆ ಅಕ್ಕಿ ಅಭಾವದಿಂದ ಇದೀಗ ಐದು ಕೆಜಿ ಅಕ್ಕಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ.

ಈಗಾಗಲೇ ಎರಡು ತಿಂಗಳ ಹಣ ಜಮೆಯಾಗಿದ್ದು, ಮೊದಲ ತಿಂಗಳ ಅಂದರೆ ಜೂನ್ ನಲ್ಲಿ 97,27,160 ರೇಷನ್ ಕಾರ್ಡ್ ಗಳಿಗೆ 3.45 ಕೋಟಿ ಫಲಾನುಭವಿಗಳಿಗೆ ಸುಮಾರು 566 ಕೋಟಿ ರೂಪಾಯಿಗಳನ್ನು ನೇರವಾಗಿ ಕುಟುಂಬದ ಮುಖ್ಯಸ್ಥರ ಖಾತೆಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ಜಮೆ ಮಾಡಲಾಗಿತ್ತು.

ಇನ್ನೂ ಆಗಸ್ಟ್ ತಿಂಗಳಲ್ಲಿ ಅಂದರೆ ಎರಡನೇ ಕಂತಿನಲ್ಲಿ ರಾಜ್ಯದ್ಯಂತ ಸುಮಾರು 1.03 ಕೋಟಿ ಕಾಡುಗಳಿಗೆ ಅಂದರೆ 3.69 ಕೋಟಿ ಫಲಾನುಭವಿಗಳ ಖಾತೆಗೆ 606 ಕೋಟಿ ರೂಪಾಯಿಗಳನ್ನು ಜಮೆ ಮಾಡಲಾಗಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರದಿಂದಎನ್‌ಐಸಿ) ಫಲಾನುಭವಿಗಳ ಮಾಹಿತಿಯನ್ನು ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಹಾಗೂ ಖಜಾನೆ ಇಲಾಖೆಯ ಕೆ2 ಪೋರ್ಟಲ್ ಮೂಲಕ ಬಿಪಿಎಲ್‌ ಕಾರ್ಡ್‌ನಲ್ಲಿರುವ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ. ಡಿಬಿಟಿ ಮುಖೇನ ಕಾರ್ಡ್ ಮುಖ್ಯಸ್ಥರ ಖಾತೆಗೆ ಜಮೆ ಮಾಡಲಾಗುತ್ತಿದೆ.

ಅದೇರೀತಿ, ಅಂತ್ಯೋದಯ ಕಾರ್ಡ್‌ನಲ್ಲಿ ನಾಲ್ಕು ಸದಸ್ಯರಿದ್ದರೆ 170 ರೂ., ಐದು ಸದಸ್ಯರಿದ್ದರೆ 510 ರೂ., ಆರು ಸದಸ್ಯರಿದ್ದರೆ 850 ರೂ. ಹಣ ಹಾಕಲಾಗುತ್ತಿದೆ. ಬ್ಯಾಂಕ್‌ ಖಾತೆ ಹೊಂದಿಲ್ಲದಿದ್ದರೆ, ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿರದಿದ್ದರೆ, ಖಾತೆ ಲಭ್ಯ ಇಲ್ಲದಿದ್ದಲ್ಲಿ ಹಣ ಜಮೆ ಆಗುವುದಿಲ್ಲ. ಮುಖ್ಯಸ್ಥರನ್ನು ಕುಟುಂಬದವರೇ ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಖಾತೆಗೆ ಎರಡು ಕಂಚನ ಹಣಗಳು ಜಮೆಯಾಗದಿದ್ದಲ್ಲಿ ಕೂಡಲೇ ಕೆಳಗಡೆ ನೀಡುವ ಸ್ಟೆಪ್ಗಳನ್ನು ಅನುಸರಿಸುವ ಮೂಲಕ ನೀವು ಯಾಕೆ ಜಮೆಯಾಗಿಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

Annabhagya

ಚೆಕ್ ಮಾಡಲು ಬೇಕಾದ ದಾಖಲೆಗಳು :

ರೇಷನ್ ಕಾರ್ಡ್

ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಗೂಗಲ್ ನಲ್ಲಿ AHARA ಎಂದು ಸರ್ಚ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :https://ahara.kar.nic.in/

ನಂತರ ಎಡಗಡೆ ಕಾಣುವಂತಹ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, ಈ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಆಗ ಅದರಲ್ಲಿ ಇರುವಂತಹ ಡಿಬಿಟಿ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ನಂತರ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯ ಆಯ್ಕೆಯನ್ನು ಆಯ್ಕೆ ಮಾಡಿ

ನಂತರ ಓಪನ್ ಆಗುವಂತಹ ಮತ್ತೊಂದು ಹೊಸ ಪೇಜ್ ನಲ್ಲಿ ನೇರ ವರ್ಗಾವಣೆ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಮೇಲೆಯದ್ದು ತಿಳಿಯಲಿಲ್ಲವೆಂದರೆ ಕೆಳಗಡೆ ನೀಡಿರುವಂತಹ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/status2/status_of_dbt.aspx

ಜುಲೈ ತಿಂಗಳನ್ನು ಆಯ್ಕೆ ಮಾಡಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ನಮೂದಿಸಿ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ನಿಮಗೆ ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗುತ್ತದೆ ಎಂಬ ಮಾಹಿತಿ ಸಿಗುತ್ತದೆ.

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

ಹಾಗೂ ಈ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ

krishisuddi whatsapp group

 

By Raju

Leave a Reply

Your email address will not be published. Required fields are marked *