ಹೊಲಿಗೆ ತರಬೇತಿಗಗಾಗಿ ಮಹಿಳೆಯರಿಂದ ಅರ್ಜಿ ಆಹ್ವಾನ

ಹಾವೇರಿ: ದೇವಗಿರಿಯ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ೩೦ ದಿನಗಳ “ಮಹಿಳೆಯರ ಹೊಲಿಗೆ ತರಬೇತಿಗೆ ಜಿಲ್ಲೆಯ ನಿರುದ್ಯೋಗಿ ಯುವತಿಯರಿಂದಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ೧೮ ರಿಂದ ೪೫ ವರ್ಷದೊಳಗಿರಬೇಕು.

ಜಾತಿ ಮತ್ತು ಆದಾಯ,

ಆಧಾರ ಕಾರ್ಡ್

ಬ್ಯಾಂಕ್ ಪಾಸ್ ಬುಕ್,

ಬಿಪಿಎಲ್ ಕಾರ್ಡ್ಇತ್ತೀಚಿನ ಭಾವಚಿತ್ರ,

ಜನ್ಮ ದಿನಾಂಕ ದೃಢೀಕರಣಪ್ರಮಾಣ ಪತ್ರದ ಝರಾಕ್ಸ್ ಪ್ರತಿಗಳನ್ನು ತರಬೇಕು.

ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ.

ಆಸಕ್ತರು ದಿನಾಂಕ ೧೫-೦೬-೨೦೨೩ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ

ನಿರ್ದೇಶಕರು, ಬ್ಯಾಂಕ ಆಫ್ ಬರೋಡ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಡಿ.ಸಿ. ಆಫೀಸ್ ಕಟ್ಟಡದ ಹಿಂಭಾಗ,ದೇವಗಿರಿ, ಹಾವೇರಿ ಮೊ. ೯೬೧೧೬೪೫೯೦೭ ಸಂಪರ್ಕಿಸಲು ಕೋರಲಾಗಿದೆ.

Leave a Comment