ತೋಟಗಾರಿಕೆ ಇಲಾಖೆ ; ಸಹಾಯಧನ ಸೌಲಭ್ಯಕ್ಕಾಗಿ ರೈತರಿಂದ ಅರ್ಜಿ ಆಹ್ವಾನ

ಧಾರವಾಡ : ಜಿಲ್ಲೆಯ ತೋಟಗಾರಿಕೆ ಇಲಾಖೆಯಲ್ಲಿ ೨೦೨೩-೨೪ ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಹೊಸಪ್ರದೇಶ ವಿಸ್ತರಣೆಯಡಿ ಹಣ್ಣುಗಳಾದ ಬಾಳೆ, ಮಾವು, ಡ್ರಾಗನ್, ಸ್ಟ್ರಾಬೆರಿ ಮತ್ತು ಹೂವುಗಳಾದ ಗುಲಾಬಿ, ಸುಗಂಧರಾಜ, ಗ್ಲಾಡಿಯೋಲಸ್, ಆಸ್ಟರ್, ಚೆಂಡು ಹೂ, ಸೇವಂತಿಗೆ, ತರಕಾರಿಗಳ ಪ್ರದೇಶ ವಿಸ್ತರಣೆ, ಗೋಡಂಬಿ ಪ್ರದೇಶ ವಿಸ್ತರಣೆ, ಮಾವು ಪನಶ್ವೇತನ, ನೀರು ಸಂಗ್ರಹಣಾ ಘಟಕಗಳು, ಸಂರಕ್ಷಿತ ಬೇಸಾಯದಡಿ ಹಸಿರುಮನೆ, ನೆರಳುಪರದೆ, ಪ್ಲಾಸ್ಟಿಕ ಮಲ್ಟಿಂಗ್, ಕೊಲ್ಲೋತ್ತರ ನಿರ್ವಹಣೆ ಅಡಿ ಪ್ಯಾಕ್‌ ಹೌಸ್, ಹಣ್ಣು ಮಾಗಿಸುವ ಘಟಕ, ಈರುಳ್ಳಿ ಶೇಖರಣಾ ಘಟಕ ಮತ್ತು ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆಗಾಗಿ ತಳ್ಳುವ ಗಾಡಿ ಘಟಕಗಳಿಗಾಗಿ ರೈತರಿಗೆ ಸಹಾಯಧನ ಸೌಲಭ್ಯ ನೀಡುವುದಕ್ಕಾಗಿ ಅರ್ಜಿ ಆಹ್ವಾನಿಸಿದೆ.

 ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಗೆ ಬಂದು ಭೇಟಿಯಾಗಬೇಕಾಗಿ ವಿನಂತಿ.

 

Leave a Comment