ತೋಟಗಾರಿಕೆ ಇಲಾಖೆಯಿಂದ ಗೋಡಂಬಿ ಬೆಳೆಗೆ ಪ್ರೋತ್ಸಾಹ:ಇಂದೇ ಅರ್ಜಿ ಸಲ್ಲಿಸಿ 

ಗದಗ: ಗೋಡಂಬಿ ಮತ್ತು ಕೋಕೋ ನಿರ್ದೆಶನಾಲಯ ಕೋಚ್ಚಿನ್ ಅವರ ವತಿಯಿಂದ ಶಿರಹಟ್ಟಿ ತಾಲೂಕಿನ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಶಿರಹಟ್ಟಿ ತಾಲೂಕಿನಲ್ಲಿ ಗೋಡಂಬಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.

ಶಿರಹಟ್ಟಿ ಮತ್ತು ಲಕ್ಷ್ಮೀಶ್ವರ ತಾಲೂಕು, ಗೋಡಂಬಿ ಬೆಳೆಯಲು ಸೂಕ್ತ ಮಣ್ಣು ನೀರು ಹವಾಗುಣವಿದ್ದು,

ಆಸಕ್ತ ರೈತರು

ಪಹಣಿ ಪತ್ರ,

ಬ್ಯಾಂಕ್ ಪಾಸ್ ಪುಸ್ತಕ,

ಆಧಾರ ಕಾರ್ಡ್,

ಫೋಟೋ

ಹಾಗೂ ಮಣ್ಣು ಮತ್ತು ನೀರಿನ ಪರೀಕ್ಷಾ ವರದಿಯೊಂದಿಗೆ

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕು ಶಿರಹಟ್ಟಿ ಈ ಕಛೇರಿಗೆ ಜುಲೈ ೩೧ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಭೂಮಿಯನ್ನು ಆಳವಾಗಿ ಉಳಮೆ ಮಾಡಿ, ಶಿಫಾರಸ್ಸು ಮಾಡಿದ ೭ ಮೀ ಘಿ ೭ ಮೀ ಅಂತರದಲ್ಲಿ, ತಗ್ಗು ತೆಗೆದು, ಗೊಬ್ಬರ ಮಿಶ್ರಣ ತುಂಬಿ ಸಸಿಗಳನ್ನು ನಾಟಿ ಮಾಡಬೇಕು. ನಾಟಿ ಮಾಡಿದ ನಂತರ ಊರುಗೋಲು ಕೊಟ್ಟು ಪ್ರತಿ ನಿತ್ಯ ನೀರು ಕೊಡುವುದು. ಗೋಡಂಬಿ ಒಂದು ಉತ್ತಮ ಭವಿಷ್ಯದ ಬೆಳೆಯಾಗಿದ್ದು, ರೈತರಿಗೆ ಒಂದು ಉತ್ತಮ ಆದಾಯ ನೀಡುವ ಬೆಳೆಯಾಗಿದ್ದು, ಇದರ ಲಾಭವನ್ನು ಪಡೆಯಬೇಕೆಂದು ಶಿರಹಟ್ಟಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸುರೇಶ ವೀ ಕುಂಬಾರ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.

 

Leave a Comment