ಕೃಷಿ ಇಲಾಖೆ ಗದಗ ರೈತ ಸಂಪರ್ಕ ಕೇಂದ್ರ ಬೆಟಗೇರಿ ಕಾರ್ಯಾಲಯದಿಂದ 2023-24 ನೇ ಸಾಲಿಗೆ ತುಂತುರು ನೀರಾವರಿ ಘಟಕದಡಿ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ರೈತರು ಕೂಡಲೇ ಆಧಾರ್ ಕಾರ್ಡ್ ಪ್ರತಿ, ಪಹಣಿ, ನೀರಾವರಿ ಪ್ರಮಾಣ ಪತ್ರ, ಪಾಸ್ ಪೋರ್ಟ್ ಸೈಜ್ ಫೋಟೋ -2, 20 ರೂ. ಬಾಂಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ ( ಪಜಾ, ಪಪಂ ವರ್ಗದವರಿಗೆ ಮಾತ್ರ ) ಸಲ್ಲಿಸಬೇಕು.

ಒಂದು ಹೆಕ್ಟೆರ್ ಗೆ 63 ಎಂಎಂ (2 ಇಂಚು ) ರೈತರ ವಂತಿಕೆ 4139 ರೂ., 75 ಎಂಎಂ (2.5 ಇಂಚು ) ರೈತರ ವಂತಿಕೆ 4667 ರೂ. ಇರುತ್ತದೆ ಎಂದು ಕೃಷಿ ಅಧಿಕಾರಿ ವೀರಣ್ಣ ಗಡಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Raju

Leave a Reply

Your email address will not be published. Required fields are marked *