ಕುರಿ ಹಾಗೂ ಮೇಕೆ ಘಟಕಗಳ ಸ್ಥಾಪನೆಗಾಗಿ subsidy ಗಾಗಿ ಅರ್ಜಿ ಆಹ್ವಾನ:ಅರ್ಜಿ ಸಲ್ಲಿಸಲು ಆಗಸ್ಟ್ 19 ಕೊನೆಯ ದಿನಾಂಕ

 ಆತ್ಮೀಯ ರೈತ ಬಾಂಧವರೇ, ನೀವೇನಾದರೂ ಕುರಿ ಹಾಗೂ ಮೇಕೆಗಳನ್ನು ಸಾಕಲು ವಿಚಾರ ಮಾಡುತ್ತಿದ್ದೀರಾ, ಸರ್ಕಾರದಿಂದ ಸಹಾಯಧನಕ್ಕಾಗಿ(Subsidy)  ಯೋಜನೆಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ನೋಡಿ ನಿಮಗೆ ಒಂದು ಸುವರ್ಣ ಅವಕಾಶ,  ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ ಹಾಗೂ ಮೇಕೆ ಘಟಕಗಳ ಸ್ಥಾಪನೆಗಾಗಿ subsidy  ನೀಡಲಾಗುತ್ತಿದೆ.

 ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವತಿಯಿಂದ 2023 24ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ ಅಡಿಯಲ್ಲಿ6+1  ಕುರಿ ಹಾಗೂ ಮೇಕೆ  ಘಟಕ ಅನುಷ್ಠಾನಗೊಳಿಸಲು subsidyಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಮ್ಮ ಬಳಿ ಬೆಳಗಾವಿ ಜಿಲ್ಲೆಯ ಮಾಹಿತಿ ಇದ್ದು ಅದನ್ನು ಕೆಳಗೆ ನೀಡುತ್ತಿದ್ದೇವೆ.

 ಬೆಳಗಾವ್ ಜಿಲ್ಲೆಯಲ್ಲಿ ಒಟ್ಟು ಎಂಟು ಘಟಕಗಳ ಗುರಿಯನ್ನು ಹೊಂದಿದ್ದು,  ಅದರಲ್ಲಿ ಪರಿಶಿಷ್ಟ ಜಾತಿಯ ಆರು ಹಾಗೂ ಪರಿಶಿಷ್ಟ ಪಂಗಡದ ಎರಡು ಪಟ್ಟು ಎಂಟು ಘಟಕಗಳನ್ನು ನಿಗದಿಪಡಿಸಲಾಗಿದ್ದು.

 ಕಳೆದ ಮೂರು ವರ್ಷಗಳಲ್ಲಿ ಈ ಸೌಲಭ್ಯವನ್ನು ಪಡೆಯದ ಸಂಘದ ಸದಸ್ಯರುಗಳಿಗೆ ಮಾತ್ರ ಆದ್ಯತೆಯನ್ನು ನೀಡಲಾಗುವುದು 

ನಿಗಮದ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಸದಸ್ಯತ್ವವನ್ನು ಹೊಂದಿರುವ ಎಸ್ ಸಿ ಎಸ್ ಟಿ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ.

ಅರ್ಜಿಗಳು ಯಾವಾಗ ಪ್ರಾರಂಭವಾಗುತ್ತವೆ?

ಅರ್ಹ ಫಲಾನುಭವಿಗಳು ಸದರಿ ಯೋಜನೆಯ ಅರ್ಜಿಗಳನ್ನು ಅಗಸ್ಟ್ 5 ರಿಂದ ತಾಲೂಕು ಮುಖ್ಯ ಪಶು ವೈದಾಧಿಕಾರಿಗಳು, ಪಶು ಆಸ್ಪತ್ರೆಗಳಲ್ಲಿ, ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಮೇಲೆ ತಿಳಿಸಿದಂತಹ ಇಲಾಖೆಗಳಲ್ಲಿ ಅರ್ಜಿಗಳನ್ನು ಪಡೆದು ಅವುಗಳನ್ನು ಭರ್ತಿ ಮಾಡಿ ಎರಡು ಪ್ರತಿಗಳೊಂದಿಗೆ ಅವಶ್ಯಕ ದೃಢೀಕರಿಸಿದ ದಾಖಲೆಗಳನ್ನು ಅದರೊಂದಿಗೆ ಆಗಸ್ಟ್ 19 ರ ಒಳಗಾಗಿ ಸಲ್ಲಿಸಬೇಕಾಗಿ ಕೋರಲಾಗಿದೆ.

 ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?

 ಹೆಚ್ಚಿನ ವಿವರ ಪಡೆಯಲು ನೀವು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಇಂತಿವೆ:

0831-2431294 

Subsidy

 

2 thoughts on “ಕುರಿ ಹಾಗೂ ಮೇಕೆ ಘಟಕಗಳ ಸ್ಥಾಪನೆಗಾಗಿ subsidy ಗಾಗಿ ಅರ್ಜಿ ಆಹ್ವಾನ:ಅರ್ಜಿ ಸಲ್ಲಿಸಲು ಆಗಸ್ಟ್ 19 ಕೊನೆಯ ದಿನಾಂಕ”

Leave a Comment