ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಟ್ಟದ ನೆಲ್ಲಿ, ಬಾರೆ, ಅಂಜೂರ, ಹಲಸು, ನೇರಳೆ, ಬೆಣ್ಣೆಹಣ್ಣು, ಡ್ರಾಗನ್ ಹಣ್ಣು, ಹುಣಸೆ, ಸೀತಾಫಲ, ಕಿರುನೆಲ್ಲಿ ಹಣ್ಣು ಬೆಳೆಗಳನ್ನು ಬೆಳೆಯಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಗದಗ ೨: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸ್ತುತ ೨೦೨೩-೨೪ ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಜಿಲ್ಲಾ ಪಂಚಾಯತ್‌ ತೋಟಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ಮಟ್ಟದ ಸಂಜೀವಿನಿ ಒಕ್ಕೂಟಗಳ (ಓಖಐಒ) ಜಂಟಿ ಸಹಯೋಗದೊಂದಿಗೆ ಅಭಿಯಾನ ರೂಪದಲ್ಲಿ ಅಪ್ರಧಾನ ಹಣ್ಣಿನ ಬೆಳೆಗಳಾದ ಬೆಟ್ಟದ ನೆಲ್ಲಿ, ಬಾರೆ, ಅಂಜೂರ, ಹಲಸು, ನೇರಳೆ, ಬೆಣ್ಣೆಹಣ್ಣು, ಡ್ರಾಗನ್ ಹಣ್ಣು, ಹುಣಸೆ, ಸೀತಾಫಲ, ಕಿರುನೆಲ್ಲಿ ಹಣ್ಣು ಬೆಳೆಗಳನ್ನು ಕ್ಲಸ್ಟರ್ ರೂಪದಲ್ಲಿ ಪ್ರದೇಶ ವಿಸ್ತರಣೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಜಿಲ್ಲೆಯ ರೈತ ಬಾಂದವರಿಗೆ ಸದರಿ ಬೆಳೆಗಳನ್ನು ಬೆಳೆದು ಉತ್ತಮ ಇಳುವರಿ ಪಡೆಯಲು ಅವಕಾಶವಿದ್ದು ಎಲ್ಲ ತಾಲ್ಲೂಕುಗಳ ಗ್ರಾಮೀಣ ಭಾಗದ ಆಸಕ್ತ ರೈತ ಬಾಂಧವರು ಅರ್ಜಿ ಸಲ್ಲಿಸಲು ಸಮೀಪದ ಗ್ರಾಮ ಪಂಚಾಯತ್ ಅಥವಾ ತೋಟಗಾರಿಕೆ ಕವೇರಿಗೆ ಸಂಪರ್ಕಿಸಬಹುದಾಗಿದೆ.

ಹಾಗೂ ಈ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ

krishisuddi whatsapp group

 

 

 

Leave a Comment