ದ್ವಿಚಕ್ರ ವಾಹನ ಖರೀದಿಗಾಗಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ:ಕೂಡಲೇ ಅಜಿ ಸಲ್ಲಿಸಿ

ಆತ್ಮೀಯ ಬಂದವರೇ, ನೀವೇನಾದರೂ ದ್ವಿಚಕ್ರ(bike) ಖರೀದಿಸುತ್ತಿದ್ದೀರಾ, ಹಾಗಾದರೆ ನಿಮಗಾಗಿ ಇಲ್ಲಿದೆ ನೋಡಿ ಸಿಹಿ ಸುದ್ದಿ. ದ್ವಿಚಕ್ರ ಖರೀದಿಸಲು ಸಹಾಯಧನವನ್ನು (subsidy for bike) ನೀಡುತ್ತಿದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

ಗದಗ, ೪ : ಮೀನುಗಾರಿಕೆ ಇಲಾಖೆಯಿಂದ ಪ್ರಸಕ್ತ ಆರ್ಥಿಕ ಸಾಲಿಗೆ ಜಿಲ್ಲಾವಲಯ ಯೋಜನೆಯಡಿ ಮೀನುಗಾರರಿಗೆ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೀನುಗಾರರ ಸಹಕಾರಿ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಮೀನುಗಾರರಿಗೆ ಮೀನು ಮಾರಾಟಕ್ಕಾಗಿ ದ್ವಿಚಕ್ರ ವಾಹನ ಹಾಗೂ ಪ್ಲಾಸ್ಟಿಕ ಕ್ರೇಟ್ಸ್ ಖರೀದಿಗೆ ಸಹಾಯಧನ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವೃತ್ತಿಪರ ಮೀನುಗಾರರಿಗೆ ಮೀನುಗಾರಿಕೆ ಸಲಕರಣೆ ಕಿಟ್ಟು ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಫಲಾನುಭವಿಗಳು ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗದಗ, ರೋಣ, ನರಗುಂದ, ಗಜೇಂದ್ರಗಡ ತಾಲ್ಲೂಕಿನ ಅರ್ಹ ಫಲಾನುಭವಿಗಳು ಮೀನುಗಾರಿಕೆ ಸಹಾಯಕ ನಿರ್ದೇಶಕರು ಗದಗ (ಮೊ. ಸಂ: ೯೮೮೦೨೧೦೫೦೫ ಅವರನ್ನು ಸಂಪರ್ಕಿಸಲು ಹಾಗೂ ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷ್ಮೀಶ್ವರ ತಾಲ್ಲೂಕಿನ ಅರ್ಹ ಫಲಾನುಭವಿಗಳು ಮೀನುಗಾರಿಕೆ ಸಹಾಯಕ ನಿರ್ದೇಶಕರು ಮುಂಡರಗಿ (ಮೊ.ಸಂ:೮೦೯೫೭೯೨೫೩೦) ರವರನ್ನು ಸಂಪರ್ಕಿಸ ಬಹುದಾಗಿದೆ ಎಂದು ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ಇದು ಗದಗ್ ಜಿಲ್ಲೆಯ ಮಾಹಿತಿಯಾಗಿದ್ದು, ಇನ್ನು ಉಳಿದ ಜಿಲ್ಲೆಯ ರೈತರು ಹೆಚ್ಚಿನ ಮಾಹಿತಿಗಳಿಗಾಗಿ ತಮ್ಮ ತಮ್ಮ ಸಂಬಂಧ ಪಟ್ಟ ಜಿಲ್ಲೆ ಹಾಗೂ ತಾಲೂಕುಗಳ ಮೀನುಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಈ ಸೌಲಭ್ಯವು ಆ ಜಿಲ್ಲೆಯಲ್ಲೂ ಕೂಡ ಇದ್ದರೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

13 thoughts on “ದ್ವಿಚಕ್ರ ವಾಹನ ಖರೀದಿಗಾಗಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ:ಕೂಡಲೇ ಅಜಿ ಸಲ್ಲಿಸಿ”

Leave a Comment