ಮಳೆಯ ವರದಿ :ಇನ್ನು ಎಷ್ಟು ದಿನ ಮಳೆಯಾಗಲಿದೆ? ಇಲ್ಲಿದೆ ಮಾಹಿತಿ

ಒಳಹರಿವು ಹೆಚ್ಚಾಗಿ ಸಏತುವೆಗಳು ಕೊಚ್ಚಿ ಹೋಗಿವೆ. ಕಣಕುಂಬಿ – ಚಿಗಳೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕುಸಿಯುತ್ತಿದ್ದು, ಗ್ರಾಮಗಳ ಸಂಪರ್ಕ ಕಡಿತವಾಗುವ ಭೀತಿ ಇದೆ. ಮಹಾರಾಷ್ಟ್ರದಲ್ಲೂ ಸುರಿಯುತ್ತಿರುವ ಮಳೆಯಿಂದಾಗಿ ವೇದಗಂಗಾ ನದಿ ಉಕ್ಕಿಹರಿಯುತ್ತಿದೆ. ಮಹಾರಾಷ್ಟ್ರದ ಕೃಷ್ಣ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕೃಷ್ಣನದಿಗೆ ಬರುತ್ತಿರುವ ಒಳಹರಿವು ಹೆಚ್ಚಾಗಿದ್ದು, ತಿಪ್ಪರಗಿ ಬ್ಯಾರೇಜ್‌ಗೆ 91,200 ಕ್ಯೂಸೆಕ್ ಒಳಹರಿವಿದ್ದು.ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ.

ಕಲಬುರಗಿಯಲ್ಲಿ ಭಾರಿ ಮಳೆಯಿಂದಾಗಿ ಉಲ್ಲಾಮಾರಿ ಅಣೆಕಟ್ಟುಭರ್ತಿಯಾಗಿದೆ. ಮಳೆಯಿಂದಾಗಿ ಜಿಲ್ಲೆಯ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮಳಖೇಡದಲ್ಲಿ ಜಯತೀರ್ಥರಮೂಲ ಬೃಂದಾವನಕ್ಕೂ ಮಳೆ ನೀರು ಆವರಿಸಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಇನ್ನೂ ಒಂದು ವಾರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ನೂ ಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ಹೈ ಅಲರ್ಟ್ ಘೋಸಿಸಲಾಗಿದೆ.

ಮತ್ತೊಂದೆಡೆ ಬೀದರ್ ತಾಲ್ಲೂಕಿನ ಸಿಂಧೋಲ್ ಸೇತುವೆ ಸೂಚಿಸಿದೆ. ಮುಳುಗಡೆಯಾಗಿದ್ದು,ಖಾನಾಪುರ ಬಳಿಯ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲೂ ಇಂದು ಬೆಳಿಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಹಾರಂಗಿ ಜಲಾಶಯಕ್ಕೆ ಹೆಚ್ಚಿನ ಹಾನಿಯಾಗಿದೆ. ನೀರು ಹರಿದು ಬರುವ ನಿರೀಕ್ಷೆಇದೆ. ಇದರಿಂದಾಗಿ ನದಿಗೆ ನೀರು ಬಿಡಲು ಕಾವೇರಿ ನೀರಾವರಿ ನಿಗಮ ಮುಂದಾಗಿದೆ.

ಕೊಡಗಿನಘಟ್ಟಪ್ರದೇಶಗಳಲ್ಲಿ ಭಾರಿ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಯಾವುದೇ ಕ್ಷಣದಲ್ಲೂ ನದಿಗೆ ಧ ಹೆಚ್ಚು ನೀರು ಬರುವ ಭೀತಿ ಇದ್ದು, ನದಿಪಾತ್ರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ

ಮಡಿಕೇರಿ ನಗರದ ಅರಣ್ಯಭವನ ಸಮೀಪ ಮರ ವಿದ್ಯುತ್‌ ತಂತಿ ಮೇಲೆ ಬಿದ್ದು, ಸುತ್ತಮುತ್ತಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಿದೆ. ಚಂಬುಗ್ರಾಮದ ಇಬ್ರಾಹಿಂ ಅವರ ಮನೆ ಮೇಲೆ ರಬ್ಬರ್ ಮರ ಬಿದ್ದುಹಾನಿಯಾಗಿದೆ.

 

Leave a Comment