ಸೆಪ್ಟೆಂಬರ್ 30 ರೊಳಗೆ ಎಲ್ಲರು ಕೂಡಲೇ ಈ ಕೆಲಸ ಮಾಡಿ:ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ

ಆತ್ಮೀಯರೇ, ಗರಿಷ್ಠ ಮುಖಬೆಲೆಯ 2 ಸಾವಿರ ರೂಪಾಯಿ ನೋಟುಗಳನ್ನು ಬ್ಯಾಂಕ್‌ನಲ್ಲಿ ಜಮೆ ಮಾಡಲು ಅಥವಾ ಬದಲಾಯಿಸಿಕೊಳ್ಳಲು ಇನ್ನು ಕೆಲವೇ ದಿನ ಬಾಕಿ ಉಳಿದಿದೆ.

ಸೆಪ್ಟೆಂಬರ್ 30ಕ್ಕೆ ದೇಶಾದ್ಯಂತ ನೋಟು ಸ್ವೀಕಾರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರೂ ಇದುವರೆಗೂ ಯಾರೆಲ್ಲಾ 2000 ರೂಪಾಯಿ ನೋಟು ಬದಲಾವಣೆ ಮಾಡಿಕೊಂಡಿಲ್ಲವೋ ಅವರೆಲ್ಲಾ ಇನ್ನೂ ನಾಲ್ಕು ದಿನದಲ್ಲಿ ಬದಲಾವಣೆ ಮಾಡಿಕೊಳ್ಳಿ ಆ ನಂತರ 2000 ರೂಪಾಯಿ ನೋಟು ಇದ್ದರೂ ಅದಕ್ಕೆ ಕಾನೂನಿನ ಯಾವುದೇ ಮಾನ್ಯತೆ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

RBI ಸ್ವಚ್ಛ ನೋಟು ನೀತಿ’ಯಭಾಗವಾಗಿ ಮೇ ತಿಂಗಳಲ್ಲಿ ಚಲಾವಣೆಯಿಂದ 2,000ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು.

ಅಲ್ಲಿಂದ ಸೆಪ್ಟೆಂಬರ್ 30ರ ತನಕ ನೋಟು ಬದಲಾವಣೆ ಅಥವಾ ಬ್ಯಾಂಕ್‌ನಲ್ಲಿ ಠೇವಣಿಗೆ ಅವಕಾಶ ಮಾಡಿಕೊಟ್ಟಿದೆ.

ಗಡುವು ಮುಗಿದ 2,000 ನಂತರ ನೋಟುಗಳು ಕಾನೂನುಬದ್ಧವಾಗಿರುವುದಿಲ್ಲ ಈ ನೋಟುಗಳನ್ನು ಆದಷ್ಟು ಬೇಗ ಚಲಾವಣೆಯಿಂದ ಹಿಂಪಡೆಯಲು ಕೇಂದ್ರೀಯ ಬ್ಯಾಂಕ್‌ ಉದ್ದೇಶಿಸಿದೆ ಎಂಬುದು ಸ್ಪಷ್ಟವಾಗಿದೆ.

“ಆಗಸ್ಟ್ 31ರ ವರೆಗೆ ಬ್ಯಾಂಕ್‌ಗಳಲ್ಲಿ ಠೇವಣಿಯಾದ ಒಟ್ಟು 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯ 3.32 ಲಕ್ಷ ಕೋಟಿ ರೂಪಾಯಿಗಲಾಗಿದೆ, ಚಲಾವಣೆಯಲ್ಲಿದ್ದ 2 ಸಾವಿರ ರೂಪಾಯಿ ಯಲ್ಲಿ ಶೇಕಡಾ 93 ರಷ್ಟು ವಾಪಸ್ ಬಂದಿದೆ ಎಂದು ಹೇಳಿತ್ತು.

Leave a Comment