second installment

ಆತ್ಮೀಯ  ರೈತ ಬಾಂಧವರೇ, ನಿಮಗೆ ಮೊದಲನೇ ಕಂತಿನ ಬರ ಪರಿಹಾರದ ಹಣ ಜಮೆಯಾಗಿದೆ? ಆದರೆ ಇನ್ನೂ ಕೂಡ ಎರಡನೇ ಕಂತಿನ ಬರ ಪರಿಹಾರದ ಹಣ ಜಮೆಯಾಗಿಲ್ಲವೇ?  ಹಾಗಾದರೆ ಇಲ್ಲಿದೆ ನೋಡಿ ಉತ್ತರ.

ತಮಗೆಲ್ಲ ತಿಳಿದಿರುವ ಹಾಗೆ ರಾಜ್ಯ ಸರ್ಕಾರವು ಮೊದಲನೇ ಕಂತಿನಲ್ಲಿ ಅರ್ಹ ರೈತರ ಖಾತೆಗಳಿಗೆ 2000 ಜಮಾ ಮಾಡಲಾಗಿತ್ತು.

ಇದಾದ ನಂತರ ಕೇಂದ್ರ ಸರ್ಕಾರವು ಇನ್ಪುಟ್ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಿದ ನಂತರ ರಾಜ್ಯ ಸರ್ಕಾರವು  ಮಳೆಯಾಶ್ರಿತ ಪ್ರದೇಶದ ರೈತರಿಗೆ ಗರಿಷ್ಠ 15000 ವರೆಗೆ ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತಿದೆ.

ಈಗಾಗಲೇ ಬಹುತೇಕ ರೈತರಿಗೆ ಖಾತೆಗಳಿಗೆ ಹಣ ಜಮಾ ಆಗಿದ್ದು, ಇನ್ನೂ ಸರಿ ಸುಮಾರು ಎರಡು ಲಕ್ಷ ರೈತರ  ಖಾತೆಗಳಿಗೆ ಬರ ಪರಿಹಾರದ ಹಣ ಜಮಾ ಆಗಬೇಕಿದೆ.

ಆ ಎರಡು ಲಕ್ಷ ರೈತರ ಖಾತೆಗಳಿಗೆ ಬರ ಪರಿಹಾರದ ಹಣ ಜಮಾ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇದೀಗ ದಾಖಲೆ ಪರಿಶೀಲನೆ ಹಂತದಲ್ಲಿದೆ, ಹಾಗೂ ಸದ್ಯದಲ್ಲಿಯೇ ಆ ಎರಡು ಲಕ್ಷ ರೈತರ ಖಾತೆಗಳಿಗೂ ಕೂಡ ಬರ ಪರಿಹಾರದ ಹಣ ಜಮಾ ಮಾಡಲಾಗುವುದು.

ಮೊದಲನೇ ಕಂತಿನ ಹಣ ನಿಮಗೆ ಬಂದಿದ್ದರೆ ಖಂಡಿತವಾಗಿಯೂ ಕೂಡ ಎರಡನೇ ಕಂತಿನ ಹಣ ನಿಮ್ಮ ಖಾತೆಗಳಿಗೆ ಬರುತ್ತದೆ, ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಸ್ವಲ್ಪ ದಿನಗಳ ಬಿಟ್ಟು ನೋಡಿ ಆಗಲು ಕೂಡ ನಿಮ್ಮ ಖಾತೆಗಳಿಗೆ ಹಣ ಜಮಾ ಆಗದಿದ್ದರೆ ಆಗ ನಿಮ್ಮ ಜಿಲ್ಲೆಯಲ್ಲಿ ಪ್ರಾರಂಭವಾಗಿರುವಂತಹ   ಹೆಲ್ಪ್ ಡೆಸ್ಕ್ ಅನ್ನು ಸಂಪರ್ಕಿಸಿ ಪರಿಹಾರದ ಹಣವನ್ನು ಪಡೆಯಿರಿ.

Read this also:

ನನ್ನ ಖಾತೆಗೆ 16,000  ರೂಪಾಯಿಗಳ ಬರ ಪರಿಹಾರ ಜಮಾ : ಮೊದಲ ಕಂತಿನಲ್ಲಿ1000 ರೂಪಾಯಿ ಜಮಾ ಆಗಿದ್ದವು

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ಇನ್ಪುಟ್ ಸಬ್ಸಿಡಿಯ ಹಣವನ್ನು ರಾಜ್ಯ ಸರ್ಕಾರವು ರೈತರ ಖಾತೆಗಳಿಗೆ ಸೋಮವಾರದಿಂದ ಜಮಾ ಮಾಡಲು ಪ್ರಾರಂಭ ಮಾಡಿದೆ.

ನಮ್ಮ ತಮ್ಮನ ಖಾತೆಗೆ ಮೊದಲನೇ  ಕಂತಿನಲ್ಲಿ ಜನವರಿ ತಿಂಗಳಲ್ಲಿ 1000 ಮಾತ್ರ ಜಮಾ ಆಗಿತ್ತು, ಇದೀಗ ಎರಡನೇ ಕಂತಿನಲ್ಲಿ 16 ಸಾವಿರ ರೂಪಾಯಿಗಳು ಜಮಾ ಆಗಿವೆ.

ಸರ್ವೇ ನಂಬರ್ ಮೂಲಕ ಬೆಳೆ ಪರಿಹಾರ ಜಮೆ ಆಗಿರುವುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಆತ್ಮೀಯ ರೈತ ಬಾಂಧವರೇ,ತಮಗೆಲ್ಲ ತಿಳಿದಿರುವ ಹಾಗೆ ಈ ಬಾರಿ ಮುಂಗಾರಿನಲ್ಲಿ ಅನಾವೃಷ್ಟಿಯ ಕಾರಣದಿಂದಾಗಿ ರಾಜ್ಯದ ತುಂಬಾ ಬರ ಆವರಿಸಿದ್ದು, ಸರ್ಕಾರ ರೈತರ ನೆರವಿಗಾಗಿ ಬೆಳೆ ಪರಿಹಾರವನ್ನು ಘೋಷಿಸಿದ್ದು, ಮೊದಲ ಕಂತಿನ ಎರಡು ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.

ಹಾಗಾದರೆ ನಿಮ್ಮ ಸರ್ವೇ ನಂಬರ್ ಮೂಲಕ ಆನ್ಲೈನ್ ನಲ್ಲಿ ಯಾವ ಖಾತೆಗೆ ಹಣ ಯಾವಾಗ ಎಷ್ಟು ಜಮೆಯಾಗಿದೆ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ನೋಡೋಣ ಬನ್ನಿ.

ಮೊಟ್ಟ ಮೊದಲು ಗೂಗಲ್ ನಲ್ಲಿ PARIHARA ಎಂದು ಸರ್ಚ್ ಮಾಡಿ.

ಆಗ ನಿಮಗೆ ಕಾಣುವಂತಹ ಮೊದಲ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಒತ್ತಿ :

https://parihara.karnataka.gov.in/Pariharahome/

ಆಗ ಅಲ್ಲಿ ಕಾಣುವಂತಹ NEW REPORT =2023 kharif drought season ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಒತ್ತಿ :

https://parihara.karnataka.gov.in/service92/

ಆಗ ಅಲ್ಲಿ

ವರ್ಷ =2023-24

ವೃತು =ಮುಂಗಾರು

ವಿಪತ್ತಿನ ವಿಧ = ಬರ ಆಯ್ಕೆ ಮಾಡಿ

ಮುಂದೆ ಬರುವಂತಹ ಹಲವಾರು ಆಯ್ಕೆಗಳಲ್ಲಿ search by survey number ಮೇಲೆ ಕ್ಲಿಕ್ ಮಾಡಿ.

ಇಲ್ಲಿ ನಿಮ್ಮ survey number ಹಾಕುವ ಮೂಲಕ ನೀವು ಯಾವ ಖಾತೆಗೆ ಯಾವಾಗ ಎಷ್ಟು ಹಣ ಜಮೆಯಾಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

READ THIS ALSO:

ಗದಗ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿದ್ದು, ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.

ಪ್ರಸ್ತುತ ಅಳಿದುಳಿದಿರುವ ಮೆಣಸಿನಕಾಯನ್ನು ಬ್ಯಾಡಗಿ, ಹುಬ್ಬಳ್ಳಿ, ಗದಗ ಮಾರುಕಟ್ಟೆಗೆ ಒಯ್ದರೆ, ಕ್ವಿಂಟಾಲ್‌ಗೆ 20ರಿಂದ 35 ಸಾವಿರ ರೂ.ಗಳಿಗೆ ಆವಕವಾಗುತ್ತಿದೆ. ಕಳೆದ ವರ್ಷ ಕ್ವಿಂಟಾಲ್ ಒಂದಕ್ಕೆಗರಿಷ್ಠ 75 ಸಾವಿರ ರೂ.ಗಳಿಗೆ ಮಾರಾಟವಾಗಿತ್ತು.

ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ಅತ್ಯಂತ ಮಹತ್ವ ಹೊಂದಿರುವ ಮೆಣಸಿನಕಾಯಿ ಬೆಳೆಗೆ ಈ ವರ್ಷದ ಬರಗಾಲ ತೀವ್ರ ನಷ್ಟ ತಂದೊಡ್ಡಿದ್ದು, ಸಾಲ- ಸೋಲ ಮಾಡಿ ಬಿತ್ತನೆ ಮಾಡಿದ ರೈತ ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷ ಹೆಚ್ಚಿನ ಮಳೆಯಾಗಿ ಬೆಳೆ ಹಾನಿಗೊಳಗಾಗಿತ್ತು.

ಈ ವರ್ಷ ಮಳೆ ಕೈಕೊಟ್ಟು ಬರಗಾಲಆವರಿಸಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣವನ್ನು ಮಧ್ಯಂತರ ಪರಿಹಾರವಾಗಿ ಜಮಾವಣೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ ಎನ್ನುತ್ತಾರೆ ರೈತರು.

ಪೂರ್ಣ ಪ್ರಮಾಣದ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಆಗ್ರಹಿಸಿದ್ದಾರೆ.

 

 

By Raju

Leave a Reply

Your email address will not be published. Required fields are marked *