(veerashaiva lingayat)

ಆತ್ಮೀಯ ಬಾಂಧವರೇ, ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಷಿಪಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಹಾಗಾಗಿ ಆದಷ್ಟು ಬೇಗ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆಯಬೇಕಾಗಿ ವಿನಂತಿ.

ಡಾ.ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ವತಿಯಿಂದ ರಾಜ್ಯದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಡಾ.ಅಥಣಿ ವೀರಣ್ಣ ತಿಳಿಸಿದ್ದಾರೆ.

ಟ್ರಸ್ಟ್‌ನಿಂದ ಕಳೆದ 11 ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಹಿಂದಿನ ವರ್ಷ ಆರ್ಥಿಕವಾಗಿ ಹಿಂದುಳಿದ ಸುಮಾರು 900 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ.

ಈ ಬಾರಿ ಐ.ಟಿ.ಐ, ಡಿಪ್ಲೊಮಾ, ಪದವಿ ಕಾಲೇಜು, ವೃತ್ತಿ ಶಿಕ್ಷಣ ಕಾಲೇಜು, ಕಾನೂನು ಕಾಲೇಜು, ಮ್ಯಾನೇಜ್‌ಮೆಂಟ್‌ ಮತ್ತು ಇತರೆ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ 2023-24ರ ಶೈಕ್ಷಣಿಕ ಅವಧಿಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆಯಾ ಕಾಲೇಜುಗಳ ವಾರ್ಷಿಕ ಶುಲ್ಕಕ್ಕೆ ಅನುಗುಣವಾಗಿ ವಿದ್ಯಾರ್ಥಿ ವೇತನ ನೀಡಲಾಗುವುದು.

ವಿದ್ಯಾರ್ಥಿ ವೇತನವನ್ನು ನಿರೀಕ್ಷಿಸುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರ ಕ್ರಮಬದ್ಧವಾದ ಮೂಲ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ನಿಗದಿತ ಅರ್ಜಿಯನ್ನು ಆನ್‌ಲೈನ್‌ ಮುಖಾಂತರ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಟ್ರಸ್ಟ್‌ನ ಅಂತರ್ಜಾಲ ತಾಣ www.ssjanakalyantrust.org ವನ್ನು ಮಾತ್ರ ಸಂಪರ್ಕಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 16 ಕೊನೆ ದಿನ ಎಂದು ಡಾ.ಅಥಣಿ ವೀರಣ್ಣ ತಿಳಿಸಿದ್ದಾರೆ.

Read this also :

1.ಇದುವರೆಗೂ ಗೃಹಜೋತಿ ಯೋಜನೆ ಅಡಿ ನೋಂದಣಿ ಮಾಡಿದವರು ಎಷ್ಟು ಜನ ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ? ನೀವು ಬೇಗ ಬೇಗ ನೋಂದಣಿ ಮಾಡಿ

ಆತ್ಮೀಯ ಬಾಂಧವರೇ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ನೀಡಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಗೃಹ ಜ್ಯೋತಿ ಯೋಜನೆ ಅಡಿ ಎರಡು ನೂರು ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವಂತಹ ಯೋಜನೆ ಯಾದ ಈ ಯೋಜನೆಯಲ್ಲಿ ಇದುವರೆಗೆ ಎಷ್ಟು ಜನ ನೋಂದಣಿ ಮಾಡಿದ್ದಾರೆ ನಿಮಗೆ ಗೊತ್ತಾ.

ಕೇಳಿದರೆ ಶಾಕ್ ಆಗ್ತೀರಾ, ನಿನ್ನೆ ರಾತ್ರಿ 8 ಗಂಟೆಯವರೆಗೆ ಅಂದರೆ ಜೂನ್ 23 ರಾತ್ರಿ 8 ಗಂಟೆಗಳವರೆಗೆ 32.45 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ.

2.ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಮ್ಮ ಮೊಬೈಲ್ ಮೂಲಕವೇ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆತ್ಮೀಯ ಬಾಂಧವರೇ, ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕ ಗೃಹಜೋತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

3.ಪಿಎಂ ಕಿಸಾನ 14 ನೇ ಕಂತಿನ ಹಣ ಬರಬೇಕೆಂದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇ ಬೇಕು :ಇಲ್ಲದಿದ್ದರೆ ನೀವು 2000 ರೂಪಾಯಿ ಕಳೆದುಕೊಳ್ಳುತ್ತಿರಾ

ಆತ್ಮೀಯ ರೈತ ಬಾಂಧವರೇ ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ನೀವು ಪಡೆಯಬೇಕೆಂದರೆ ನೀವು ಕಡ್ಡಾಯವಾಗಿ e-kyc ಮಾಡಿಸಲೇಬೇಕಾಗಿದೆ

4.ಯಾವ ಬೆಳೆಗಳಿಗೆ ಬೆಳೆ ವಿಮೆ ಮಾಡಿದರೆ ಹಣ ಬರುತ್ತದೆ ಎಂದು ತಿಳಿಯುತ್ತಿಲ್ಲವೇ? ಹಾಗಾದರೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

ಆತ್ಮೀಯ ರೈತ ಬಾಂಧವರೇ, ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಕಾರ್ಯಗಳು ಪ್ರಾರಂಭವಾಗಿದ್ದು,

5.ಪ್ರತಿಯೊಬ್ಬ ರೈತರು 27,000 ರೂಪಾಯಿ ಬೆಳೆ ಪರಿಹಾರ ಪಡೆಯಬೇಕೆಂದರೆ ಬೆಳೆ ಸಮೀಕ್ಷೆ ಕಡ್ಡಾಯ :ಈ ಕೂಡಲೇ ಈ ಕೆಲಸ ಮಾಡಿ

ಆತ್ಮೀಯ ರೈತ ಬಾಂಧವರೇ, ಕಳೆದ ವರ್ಷ ಅತಿವೃಷ್ಟಿಯ ಕಾರಣಗಳಿಂದಾಗಿ ಬಹುತೇಕ ರೈತರ ಬೆಳೆದಂತ ಬೆಳೆಗಳು ಹಾನಿಯಾಗಿದ್ದವು ಅದಕ್ಕಾಗಿ ಸರ್ಕಾರವು ರೈತರಿಗೆ ಬೆಳೆ ಪರಿಹಾರವನ್ನು ಅಂದರೆ ಒಬ್ಬ ರೈತನಿಗೆ ಗರಿಷ್ಠ 27 ಸಾವಿರ ರೂಪಾಯಿಗಳನ್ನು ( ಮಳೆಯಾಶ್ರಿತ ) ಭೂಮಿಗಳಿಗೆ ನೀಡಲಾಗಿತ್ತು.

 

By Raju

Leave a Reply

Your email address will not be published. Required fields are marked *