ಆಧಾರ್ ಕಾರ್ಡ್ ನಂಬರ್ ಮೂಲಕ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ನಿಮ್ಮ mobile ಮೂಲಕ ನೀವೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ಆಧಾರ್ ಕಾರ್ಡ(aadhar card) ನಂಬರ್ ಮೂಲಕ ನೀವು ನಿಮ್ಮ crop insurance  status ಅನ್ನು ಚೆಕ್ ಮಾಡಿಕೊಳ್ಳಬಹುದು, ಅದು ಕೂಡ ನಿಮ್ಮ mobileಲಲ್ಲಿ ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಬಹುದು. ಬನ್ನಿ ಹೇಗೆ ಅಂತ ತಿಳಿದುಕೊಳ್ಳೋಣ.

ಮೊಟ್ಟ ಮೊದಲು googleನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ : https://samrakshane.karnataka.gov.in/

samrakshane

ನಂತರ ವರ್ಷ ಹಾಗೂ ಋತು ಆಯ್ಕೆ ಮಾಡಿ.

ವರ್ಷ :2023-24

ಋತು-ಮುಂಗಾರು

ನಂತರ ನೀವು ಈಗ ಸಂರಕ್ಷಣೆಯ(samrakshane.karnataka.gov.in) ಮುಖ್ಯ ಪೇಜ್ನಲ್ಲಿ ಇದ್ದೀರಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ ಮಾಡಿ : https://samrakshane.karnataka.gov.in/publichome.aspx

samrakshane

ಅದರಲ್ಲಿ ಕಾಣುವಂತಹ farmers corner ನಲ್ಲಿ ಚೆಕ್ ಸ್ಟೇಟಸ್ ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ :

https://samrakshane.karnataka.gov.in/Premium/CheckStatusMain_aadhaar.aspx

samrakshane

ಆಗ ಅಲ್ಲಿ ಕಾಣುವಂತಹ 3 ಆಯ್ಕೆಗಳಲ್ಲಿ aadhar card ನಂಬರ್ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿ, ನಂತರ ಕೆಳಗೆ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ ಕ್ಯಾಚಪ್ಪ ಕೋಡ್ ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.

ನೀವು ಯಾವ ಯಾವ ಬೆಳೆಗಳಿಗೆ ಬೆಳೆವಿಮೆ ಮಾಡಿಸಿದ್ದೀರಿ, ಆ ಎಲ್ಲಾ ಬೆಳೆ ವಿಮೆಗಳ ಅರ್ಜಿಗಳು ನಿಮಗೆ ಅಲ್ಲಿ ಸಿಗುತ್ತವೆ, ಆಗ ನೀವು ಯಾವ ಅರ್ಜಿ ನಂಬರ್ ಬೇಕು ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಅದರ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.