ಜಿಲ್ಲೆಯ ೧,೬೯,೯೧೪ ರೈತರಿಗೆ ರೂ.೪೪೩.೦೯ ಕೋಟಿ ಬೆಳೆ ವಿಮೆ ಮಂಜೂರು:ನಿಮ್ಮ ಖಾತೆಗಳಿಗೂ ಜಮೆ ಆಗಿದೆಯೋ ಚೆಕ್ ಮಾಡಿಕೊಳ್ಳಿ

ಹಾವೇರಿ, ೨೪ : ಕಳೆದ ೨೦೨೨-೨೩ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ೨೦೨.೪೩೬ ರೈತರು ಬೆಳೆ ಎಮೆ ನೊಂದಣಿಮಾಡಿದ್ದರು. ಈ ಪೈಕಿ ೧,೬೯,೯೧೪ ರೈತರಿಗೆ ರೂ.೪೪೩.೦೯ ಕೋಟಿ ಬೆಳೆ ವಿಮೆ ಮಂಜೂರಾಗಿದೆ. ೧.೫೯.೯೯೨ ರೈತರಿಗೆ ರೂ. ೪೨೭.೦೪ ಕೋಟಿ ಈಗಾಗಲೇ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದೆ. ಉಳಿಕೆ ವಿಮಾ ಪರಿಹಾರ ಮೊತ್ತ ಮಾಡುವ ಪ್ರಗತಿಯಲ್ಲಿರುತ್ತದೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು ೨೦೨೨-೨೩ ಮುಂಗಾರು ಹಂಗಾಮಿನಲ್ಲಿ ಮುಖ್ಯವಾಗಿ ಗೋವಿನಜೋಳ, ಹತ್ತಿ, ಭತ್ತ, ಶೇಂಗಾ ಮತ್ತು ಸೋಯಾ ಅವರೆ ಬೆಳೆಗಳನ್ನು ೩.೩೦ ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಗೆ ೩.೨೭ ಲಕ್ಷ ಹೆಕ್ಟೇರ್‌ ಸಾಧನೆಯಾಗಿದ್ದು ಶೇಕಡಾ ೯೯.೦ ರಷ್ಟು ಬಿತ್ತನೆಯಾಗಿರುತ್ತದೆ.

ಆನ್ಲೈನ್ ಮೂಲಕ ನಿಮ್ಮ ಖಾತೆಗೆ ಬೆಳೆವಿಮೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?

ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

– ಮೊಟ್ಟಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ :https://www.samrakshane.karnataka.gov.in/

– ಮುಖ್ಯ ಪೇಜ್ ನಲ್ಲಿ ಬರುವಂತಹ ಆಪ್ಷನ್ ಗಳನ್ನು ಆಯ್ಕೆ ಮಾಡಿ

ವರ್ಷ :2022-23

ವೃತು :ಮುಂಗಾರು

– ಮೇಲೆ ತಿಳಿಸಿದಂತೆ ಆಯ್ಕೆಗಳನ್ನು ಆಯ್ಕೆ ಮಾಡಿ ಮುಂದೆ ಬಟನ್ ಕ್ಲಿಕ್ ಮಾಡಿ.

– ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

– ಅಲ್ಲಿ ಫಾರ್ಮರ್ಸ್ ವಿಭಾಗದಲ್ಲಿ ಕಾಣುವಂತಹ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

– ಆಗೋಪನಾಗುವಂತ ಹೊಸ ಪೇಜ್ ನಲ್ಲಿ ನಿಮಗೆ ಮೂರು ಆಯ್ಕೆಗಳಿರುತ್ತವೆ

:proposal number

:mobile number

:aadhar number

– ಅದರಲ್ಲಿ ಪ್ರಪೋಸಲ್ ನಂಬರನ್ನು ಆಯ್ಕೆ ಮಾಡಿ

– ಕೆಳಗಡೆ ನಿಮ್ಮ ಅಪ್ಲಿಕೇಶನ್ ನಂಬರನ್ನು ನಮೂದಿಸಿ

– ಕ್ಯಾಚ್ ಪಕೋಡನು ಟೈಪ್ ಮಾಡಿ

– ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ

ಹೀಗೆ ಮಾಡುವ ಮೂಲಕ ನೀವು ಬೆಳೆ ವಿಮೆ ಮಾಡಿಸಿದಂತಹ ಬೆಳಗೆ ಎಷ್ಟು ವಿಮೆಯ ಹಣ ಜಮಯಾಗಿದೆ ಎಂಬುದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮುಖಾಂತರ ಚೆಕ್ ಮಾಡಿಕೊಳ್ಳಬಹುದಾಗಿದೆ.

ಸಂರಕ್ಷಣೆ ಪೋರ್ಟಲ್ಲಿ ಪೇಮೆಂಟ್ ಇನ್ನೂ ಪ್ರೋಗ್ರೆಸ್ ಅಂತ ಇದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅದು ಅಪ್ಡೇಟ್ ಆಗಲಿ

ಪ್ರಪೋಸಲ್ ನಂಬರ್ ಎಂದರೆ ಏನು?

ನೀವು ಬೆಳೆ ವಿಮೆಯನ್ನು ತುಂಬುವಾಗ ಅರ್ಜಿಯನ್ನು ಸಲ್ಲಿಸಿದ ಕ್ಷಣ, ಆಗ ನೀಡುವಂತಹ ಸ್ವೀಕೃತ ಕಾಫಿಯಲ್ಲಿ ಇರುವಂತಹ ಅಪ್ಲಿಕೇಶನ್ ನಂಬರಿಗೆ ಪ್ರಪೋಸಲ್ ನಂಬರ್ ಎಂದು ಕರೆಯುತ್ತಾರೆ.

೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾವೇರಿ ತಾಲೂಕಿನಲ್ಲಿ ೨೧೭೧೯.೨೦ ಹೆಕ್ಟೇರ್ ಪ್ರದೇಶಕ್ಕೆ ೨೪೩೧೪ ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು, ೨೧.೧೫೦ ಫಲಾನುಭವಿಗಳಿಗೆ ರೂ.೫೮೧೯.೫೦ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ

ಹಾನಗಲ್ ತಾಲೂಕಿನಲ್ಲಿ ೨೭೩೨೬.೨೮ ಹೆಕ್ಟೇರ್ ಪ್ರದೇಶಕ್ಕೆ ೪೫೦೯೯ ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು,೨೫,೧೦೪ ಫಲಾನುಭವಿಗಳಿಗೆರೂ. ೪೩೬೭.೫೬ ಲಕ್ಷ ಬೆಳೆ ವಿಮೆಪರಿಹಾರ ಮೊತ್ತ ಜಮೆಯಾಗಿರುತ್ತದೆ.

ಸವಣೂರು ತಾಲೂಕಿನಲ್ಲಿ ೧೬೪೧೮.೨೬ ಹೆಕ್ಟೇರ್ ಪ್ರದೇಶಕ್ಕೆ ೧೫.೮೬೦ ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು, ೧೩.೯೪೫ ಫಲಾನುಭವಿಗಳಿಗೆ ರೂ. ೪೩೪೮.೬೭ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ. ಶಿಗ್ಗಾಂವ ತಾಲೂಕಿನಲ್ಲಿ ೨೦೯೫೧.೧೦ ಹೆಕ್ಟೇರ್ ಪ್ರದೇಶಕ್ಕೆ ೨೫.೧೨೯ ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು. ಪರಿಹಾರ ಮೊತ್ತ ಜಮೆಯಾಗಿರುತ್ತದೆ. ೧೭,೮೩೮ ಫಲಾನುಭವಿಗಳಿಗೆ ರೂ. ೪೬೩೩.೯೧ ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ.

ಬ್ಯಾಡಗಿ ತಾಲೂಕಿನಲ್ಲಿ ೧೮೭೫೧.೩೧ ಹೆಕ್ಟೇರ್ ಪ್ರದೇಶಕ್ಕೆ ೨೩.೩೬೪ ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು, ೨೦.೯೭೮ ಫಲಾನುಭವಿಗಳಿಗೆ ರೂ. ೬೪೪೮.೮೬ ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ. ಹಿರೇಕೆರೂರು ತಾಲೂಕಿನಲ್ಲಿ ೧೧೯೬೬.೯೮ ಹೆಕ್ಟೇರ್ ಪ್ರದೇಶಕ್ಕೆ . ೧೯೦೨೧ ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು. ೧೬,೯೪೨ ಫಲಾನುಭವಿಗಳಿಗೆ ರೂ. ೪೭೯೮.೫೧ ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ.

ರಾಣೇಬೆನ್ನೂರು ತಾಲೂಕಿನಲ್ಲಿ ರೂ. ೪೩೬೭.೫೬ ಲಕ್ಷ ಬೆಳೆ ವಿಮೆ ೨೬೩೦೩೬೨ ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ. ೩೧೪೮೬ ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು, ೨೬,೮೩೧ ಫಲಾನುಭವಿಗಳಿಗೆ ರೂ. ೭೦೩೩.೪೮ ಲಕ್ಷ ಬೆಳೆ ವಿಮೆ ಪರಿಹಾರ ಮೊತ್ತ ಜಮೆಯಾಗಿರುತ್ತದೆ. ರಟ್ಟಿಹಳ್ಳಿ ತಾಲೂಕಿನಲ್ಲಿ ೧೨೯೧೩.೭೪ ಹೆಕ್ಟೇರ್ ಪ್ರದೇಶಕ್ಕೆ ೧೮,೧೬೩ ರೈತರು ಬೆಳೆ ವಿಮೆ ನೊಂದಣಿ ಮಾಡಿಸಿದ್ದು, ೧೭೨೦೪ ಫಲಾನುಭವಿಗಳಿಗೆ ರೂ. ೫೨೫೩೬೧ ಲಕ್ಷ ಬೆಳೆ ವಿಮೆ.

ಬೆಳೆ ವಿಮೆ ಜಮೆಯಾದ ರೈತರ ವಿವರಗಳ ಮಾಹಿತಿಯನ್ನು ಈಗಾಗಲೇ ರೈತ ಕೇಂದ್ರಗಳಿಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

Leave a Comment