ಉಚಿತ ಆರೋಗ್ಯ ತಪಾಸಣಾ ಶಿಬಿರ: ಇಂದೇ ಹೆಸರು ನೋಂದಾಯಿಸಿಕೊಳ್ಳಿ

ಗದಗ, ೨೯ : ಗದಗ-ಬೆಟಗೇರಿ ಲಯನ್ಸ್ ಕ್ಲಬ್, ನವೋದಯ ಹಾರ್ಟ್ ಮತ್ತು ಸ್ಕಿನ್‌ ಕೇರ್‌ದಿಂದ ಅ.೧ ರಂದು ರವಿವಾರ ವಿಶ್ವ ಹೃದಯ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಎರ್ಪಡಿಸಿದೆ.

ಗದುಗಿನ ಹಳೇ ಡಿ.ಸಿ.ಆಫೀಸ್ ಹತ್ತಿರದ ಎ.ಪಿ.ಎಂ.ಸಿ ಮಾರುಕಟ್ಟೆ ಡಬಲ್ ರೋಡದಲ್ಲಿರುವ ನವೋದಯ ಹಾರ್ಟ್ ಮತ್ತು ಸ್ಕಿನ್ ಕೇರ್‌ದಲ್ಲಿ ಮುಂಜಾನೆ ೮-೩೦ ಗಂಟೆಯಿಂದ ಮಧ್ಯಾಹ್ನ ೨ * ಗಂಟೆಯವರೆಗೆ ಹೃದಯ ತಜ್ಞ ವೈದ್ಯರಾದ ಡಾ.ಮಂಜುನಾಥ ಹಿರೇಮಠ, ಚರ್ಮ ರೋಗ ತಜ್ಞೆ ಡಾ.ಅಮೂಲ್ಯ ಹಿರೇಮಠ ತಪಾಸಣೆ ನಡೆಸಿ ಸಲಹೆ ನೀಡುವರು.

ತಪಾಸಣೆ ಮಾಡಲಿಚ್ಚಿಸುವ ಗದಗ-ಬೆಟಗೇರಿಯ ಸಾರ್ವಜನಿಕರು ೭೨೦೪೦೮೫೨೩೭ ಅಥವಾ ೯೯೭೨೧೪೬೩೧೭ ನಂಬರ್‌ಗೆ ಫೋನ್ ಮಾಡಿ ಮುಂಚಿತವಾಗಿ ಹೆಸರು ನೋಂದಾಯಿಸಬೇಕು ಎಂದು ಕ್ಲಬ್ ಪದಾಧಿಕಾರಿಗಳು ತಿಳಿಸಿದ್ದಾರೆ.

Leave a Comment