Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

 ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ  ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು,  ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

ಪ್ರಮುಖವಾಗಿ ಈ ಬಾರಿ ಬರ ಪರಿಹಾರವನ್ನು ನೀವು ಪಡೆಯಬೇಕಾದರೆ ಹಲವು ಅರ್ಹತೆಗಳಿವೆ:

  • ರೈತರ ಹೆಸರಿನಲ್ಲಿ ಕಡ್ಡಾಯವಾಗಿ  ಫ್ರೂಟ್ ಐಡಿ (FID)  ಹೊಂದಿರಲೇಬೇಕು.
  • ನೀವು ನಿಮ್ಮ ಎಲ್ಲಾ ಜಮೀನಿನ ಸರ್ವೆ ನಂಬರ್ ಗಳನ್ನುFID   ಜೊತೆ ಜೋಡಿಸಬೇಕು.

 ಉದಾರಣೆಗೆ ಬಸಪ್ಪ ಎಂಬ ರೈತನಿಗೆ ಒಟ್ಟು ಎರಡು ಹೊಲಗಳಿದ್ದು,  ಸರ್ವೇ ನಂಬರ್ 65 (2.0 acre) ಹಾಗೂ ಸರ್ವೇ ನಂಬರ್ 74 (3 acre),  ಒಂದು ವೇಳೆ ಬಸಪ್ಪ ರೈತ ಕೇವಲ ತನ್ನ ಎಫ್ ಐ ಡಿ ಯೊಂದಿಗೆ ಸರ್ವೆ ನಂಬರ್ 65 ಮಾತ್ರ ಜೋಡಿಸಿದ್ದರೆ ಅವನಿಗೆ ಕೇವಲ ಎರಡು ಎಕರೆಗೆ ಮಾತ್ರ ಬರ ಪರಿಹಾರದ ಹಣ ಬರುತ್ತದೆ.

 ಹೀಗಾಗಿ ಅವನು ಸಂಪೂರ್ಣ ಐದು ಎಕರೆಯ ಬರ ಪರಿಹಾರವನ್ನು ಪಡೆದುಕೊಳ್ಳಬೇಕಾದರೆ ತನ್ನ ಹೆಸರಿನಲ್ಲಿರುವಂತಹ ಎಲ್ಲಾ ಜಮೀನಿನ ಸರ್ವೇ ನಂಬರ್ ಗಳನ್ನು ತನ್ನ ಎಫ್ ಐ ಡಿ ಯೊಂದಿಗೆ ಜೋಡಿಸುವುದು ಕಡ್ಡಾಯವಾಗಿದೆ. 

  • ಪ್ರತಿಯೊಬ್ಬ ರೈತನಿಗೆ ಗರಿಷ್ಠ ಎರಡು ಹೆಕ್ಟರ್ಗಳವರೆಗೆ ಮಾತ್ರ ಬರ ಪರಿಹಾರದ ಹಣವನ್ನು ನೀಡಲಾಗುವುದು.

 ಆನ್ಲೈನ್ ಮೂಲಕ ಬರ ಪರಿಹಾರದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ ಪರಿಹಾರ ಪೇಮೆಂಟ್ ಎಂದು ಸರ್ಚ್ ಮಾಡಿ

 ಡೈರೆಕ್ಟ್ ಲಿಂಕ್: https://landrecords.karnataka.gov.in/PariharaPayment/

ಅಲ್ಲಿ ನಿಮಗೆ ಎರಡು ಆಯ್ಕೆಗಳಿರುತ್ತವೆ,  ನಿಮ್ಮ ಬಳಿ ಪರಿಹಾರ ಐಡಿ ಇದ್ದರೆ ಪರಿಹಾರ ಐಡಿ ಮೇಲೆ ಕ್ಲಿಕ್ ಮಾಡಿ ಅಥವಾ ಆಧಾರ್ ನಂಬರ್ ಮೇಲೆ ಕ್ಲಿಕ್ ಮಾಡಿ

parihara

ಅಲ್ಲಿ ಕೇಳುವಂತ ಎಲ್ಲ ಮಾಹಿತಿಯನ್ನು ನಮೂದಿಸಿ ಹೆಚ್ಚು ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

 ಆಗ ಅಲ್ಲಿ ನೀವು ನಿಮ್ಮ ಯಾವ ಖಾತೆಗೆ ಎಷ್ಟು ಪರಿಹಾರದ ಹಣ ಯಾವಾಗ ಜಮೆಯಾಗಿದೆ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.

 ಇನ್ನು ಕೂಡ ಈ ವರ್ಷದ ಬರ ಪರಿಹಾರದ ಹಣ ಬಿಡುಗಡೆಯಾಗಿಲ್ಲ .

ಹಾಗಾಗಿ ನೀವು ಈ ಲಿಂಕ್ ಮೂಲಕ ಹೋದ ವರ್ಷ ನಿಮ್ಮ ಖಾತೆಗಳಿಗೆ ಎಷ್ಟು ಹಣ ಬಂದಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು ಆನಂತರ ನೀವು ಈ ಲಿಂಕ್ ಅನ್ನು ಬಳಸಿಕೊಳ್ಳುವ ಮೂಲಕ ಪರಿಹಾರದ ಕುರಿತು ಚೆಕ್ ಮಾಡಿಕೊಳ್ಳಬಹುದಾಗಿದೆ.

 ಬರ ಪರಿಹಾರದ ಹಣ ಯಾವಾಗ ಬಿಡುಗಡೆಯಾಗುತ್ತದೆ?

 ತಮಗೆಲ್ಲ ಗೊತ್ತಿರುವ ಹಾಗೆ ಈಗಾಗಲೇ ರಾಜ್ಯ ಸರ್ಕಾರವು ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಮುಟ್ಟಿಸಿತ್ತು ಇದಕ್ಕೆ ಪ್ರತ್ಯುತ್ತರವಾಗಿ ಕೇಂದ್ರ ಸರ್ಕಾರವು ಕೇಂದ್ರದಿಂದ ರಾಜ್ಯಕ್ಕೆ ತಂಡವನ್ನು ಕಳಿಸಿತ್ತು.

ಆ ತಂಡಗಳು ರಾಜ್ಯದುದ್ದಕ್ಕೂ ಪ್ರಯಾಣಿಸಿ ರಾಜ್ಯದ ಪರಿಸ್ಥಿತಿಯ ಕುರಿತು ಒಂದು ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ನೀಡಿದ್ದು ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾದ ತಕ್ಷಣವೇ ರೈತರ ಖಾತೆಗಳಿಗೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುವುದು.

Read this also:

1.crop insurance: 2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು .

ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.