parihara

ಆತ್ಮೀಯ ರೈತ ಬಾಂಧವರೇ, ಮುಂಗಾರಿ ಹಂಗಾಮಿನಲ್ಲಿ ನೀವು ನಿಮ್ಮ ಹೊಲದಲ್ಲಿ ಬೆಳೆದಂತಹ ಬೆಳೆಯನ್ನು ಬೆಳೆ ಸಮೀಕ್ಷೆ ಆಪ್ ಮೂಲಕ ಸಮೀಕ್ಷೆ ಮಾಡಿದ್ದರು ಕೂಡ ನಿಮಗೆ ಬೆಳೆ ಪರಿಹಾರದ ಹಣ ಬಂದಿಲ್ಲವೇ ಹಾಗಾದರೆ ನಿಮಗೆ ಬೆಳೆ ಪರಿಹಾರ ಬರದೇ ಇರಲು ಈ ಕೆಳಗಿನ ಕಾರಣಗಳು ಇರಬಹುದು.

1. ನಿಮ್ಮ FID ಸಂಖ್ಯೆ ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ.
ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಪಡೆಯಲು FID ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿದೆ.

2. ಆಧಾರ್ ಕಾರ್ಡ್ ಗೆ ಪಹಣಿ ಲಿಂಕ್ ಆಗಿದೆಯ ಎಂದು ಪರಿಶೀಲಿಸಿ
ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಹಲವು ದಿನಗಳ ಹಿಂದೆ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಲಿಂಕ್ ಮಾಡುವ ಅಭಿಯಾನವನ್ನು ಕರ್ನಾಟಕ ರಾಜ್ಯದ ಕಂದಾಯ ಸರ್ಕಾರವು ಪ್ರಾರಂಭಿಸಿತ್ತು, ಹಾಗಾಗಿ ನೀವೆಲ್ಲರೂ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಪಹಣಿಯನ್ನು ಲಿಂಕ್ ಮಾಡ ಬೇಕು.

3. ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ NPCI ಆಗಿದೆಯ ಎಂದು ಪರಿಶೀಲಿಸಿ

ಈಗ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ರೈತರಿಗೆ ಬರುವಂತಹ ಸರ್ಕಾರದ ನೇರವಾಗಿ ಅವರ ಖಾತೆಗಳಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ಜಮಾ ಮಾಡಲಾಗುವುದು.

4. ಮುಂಗಾರಿ ಹಂಗಾಮಿನಲ್ಲಿ ಬೆಳೆ ಸಮೀಕ್ಷೆ ಮಾಡುವಾಗ ಪಾಳು ಅಥವಾ ಬೆಳೆ ಕಟಾವು ಎಂದು ಮಾಡಿದ್ದರು ಕೂಡ ಬೆಳೆ ಪರಿಹಾರದ ಹಣ ಬರುವುದಿಲ್ಲ.

ಮೇಲೆ ತಿಳಿಸಿದಂತಹ ಎಲ್ಲಾ ಕಾರಣಗಳು ಸರಿಯಾಗಿದ್ದು ಇನ್ನು ನಿಮ್ಮ ಖಾತೆಗಳಿಗೆ ಪರಿಹಾರದ ಹಣ ಜಮಾ ಆಗಿಲ್ಲವೇ ?

1. ತಮಗೆಲ್ಲ ಗೊತ್ತಿರುವ ಹಾಗೆ ಜನವರಿ ತಿಂಗಳಲ್ಲಿ ಮೊದಲನೇ ಕಂತಿನ 2000 ರೂಪಾಯಿಗಳ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿತ್ತು, ಒಂದು ವೇಳೆ ಆಗ ನಿಮ್ಮ ಖಾತೆಗೆ ಬರ ಪರಿಹಾರದ ಹಣ ಬಂದಿಲ್ಲವೆಂದರೆ ಕೂಡಲೇ ನಿಮ್ಮ ಜಿಲ್ಲೆಯಲ್ಲಿ ಪ್ರಾರಂಭವಾಗಿರುವಂತಹ ಸಹಾಯವಾಣಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.

2.. ನಿಮ್ಮ ಖಾತೆಗೆ ಈಗಾಗಲೇ ಮೊದಲನೇ ಕಂತಿನ ಹಣ ಬಂದು ಜಮೆಯಾಗಿದ್ದು, ಎರಡನೇ ಕಂತಿನ ಹನ ಜಮೆಯಾಗಿಲ್ಲವೇ? ಹಾಗಾದರೆ ಈಗಾಗಲೇ ರಾಜ್ಯ ಸರ್ಕಾರವು ಸುಮಾರು 32 ಲಕ್ಷ ರೈತರ ಖಾತೆಗಳಿಗೆ ಎರಡನೇ ಕಂತಿನ ಪರಿಹಾರದ ಹಣವನ್ನು ಜಮೆ ಮಾಡಲಾಗಿದ್ದು ಇನ್ನೂ ಸರಿ ಸುಮಾರು 2 ಲಕ್ಷ ರೈತರ ದಾಖಲೆ ಪರಿಶೀಲನೆ ನಡೆಯುತ್ತಿದ್ದು ಸದ್ಯದಲ್ಲೇ ಅವರ ಖಾತೆಗಳಿಗೂ ಕೂಡ ಜಮಾ ಆಗಲಿದೆ.

ಮೊದಲ ಕಂತಿನ ಹಣ ಜಮಾ ಆದವರು ಸ್ವಲ್ಪ ದಿನಗಳವರೆಗೆ ಕಾಯಿರಿ, ನಿಮ್ಮ ಖಾತೆಗಳಿಗೂ ಜಮಾ ಆಗುತ್ತದೆ ಒಂದು ವೇಳೆ ಜಮಾ ಆಗದಿದ್ದಲ್ಲಿ ಆಗ ನೀವು ಕೂಡ ಸಹಾಯವಾಣಿಗೆ ಭೇಟಿ ಮಾಡಬಹುದಾಗಿದೆ.

Read this also:

ನನ್ನ ಖಾತೆಗೆ 16,000  ರೂಪಾಯಿಗಳ ಬರ ಪರಿಹಾರ ಜಮಾ : ಮೊದಲ ಕಂತಿನಲ್ಲಿ1000 ರೂಪಾಯಿ ಜಮಾ ಆಗಿದ್ದವು

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ಇನ್ಪುಟ್ ಸಬ್ಸಿಡಿಯ ಹಣವನ್ನು ರಾಜ್ಯ ಸರ್ಕಾರವು ರೈತರ ಖಾತೆಗಳಿಗೆ ಸೋಮವಾರದಿಂದ ಜಮಾ ಮಾಡಲು ಪ್ರಾರಂಭ ಮಾಡಿದೆ.

ನಮ್ಮ ತಮ್ಮನ ಖಾತೆಗೆ ಮೊದಲನೇ  ಕಂತಿನಲ್ಲಿ ಜನವರಿ ತಿಂಗಳಲ್ಲಿ 1000 ಮಾತ್ರ ಜಮಾ ಆಗಿತ್ತು, ಇದೀಗ ಎರಡನೇ ಕಂತಿನಲ್ಲಿ 16 ಸಾವಿರ ರೂಪಾಯಿಗಳು ಜಮಾ ಆಗಿವೆ.

ಸರ್ವೇ ನಂಬರ್ ಮೂಲಕ ಬೆಳೆ ಪರಿಹಾರ ಜಮೆ ಆಗಿರುವುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಆತ್ಮೀಯ ರೈತ ಬಾಂಧವರೇ,ತಮಗೆಲ್ಲ ತಿಳಿದಿರುವ ಹಾಗೆ ಈ ಬಾರಿ ಮುಂಗಾರಿನಲ್ಲಿ ಅನಾವೃಷ್ಟಿಯ ಕಾರಣದಿಂದಾಗಿ ರಾಜ್ಯದ ತುಂಬಾ ಬರ ಆವರಿಸಿದ್ದು, ಸರ್ಕಾರ ರೈತರ ನೆರವಿಗಾಗಿ ಬೆಳೆ ಪರಿಹಾರವನ್ನು ಘೋಷಿಸಿದ್ದು, ಮೊದಲ ಕಂತಿನ ಎರಡು ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.

ಹಾಗಾದರೆ ನಿಮ್ಮ ಸರ್ವೇ ನಂಬರ್ ಮೂಲಕ ಆನ್ಲೈನ್ ನಲ್ಲಿ ಯಾವ ಖಾತೆಗೆ ಹಣ ಯಾವಾಗ ಎಷ್ಟು ಜಮೆಯಾಗಿದೆ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ನೋಡೋಣ ಬನ್ನಿ.

ಮೊಟ್ಟ ಮೊದಲು ಗೂಗಲ್ ನಲ್ಲಿ PARIHARA ಎಂದು ಸರ್ಚ್ ಮಾಡಿ.

ಆಗ ನಿಮಗೆ ಕಾಣುವಂತಹ ಮೊದಲ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಒತ್ತಿ :

https://parihara.karnataka.gov.in/Pariharahome/

ಆಗ ಅಲ್ಲಿ ಕಾಣುವಂತಹ NEW REPORT =2023 kharif drought season ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಒತ್ತಿ :

https://parihara.karnataka.gov.in/service92/

ಆಗ ಅಲ್ಲಿ

ವರ್ಷ =2023-24

ವೃತು =ಮುಂಗಾರು

ವಿಪತ್ತಿನ ವಿಧ = ಬರ ಆಯ್ಕೆ ಮಾಡಿ

ಮುಂದೆ ಬರುವಂತಹ ಹಲವಾರು ಆಯ್ಕೆಗಳಲ್ಲಿ search by survey number ಮೇಲೆ ಕ್ಲಿಕ್ ಮಾಡಿ.

ಇಲ್ಲಿ ನಿಮ್ಮ survey number ಹಾಕುವ ಮೂಲಕ ನೀವು ಯಾವ ಖಾತೆಗೆ ಯಾವಾಗ ಎಷ್ಟು ಹಣ ಜಮೆಯಾಗಿದೆ ಎಂದು ತಿಳಿದುಕೊಳ್ಳಬಹುದಾಗಿದೆ.

READ THIS ALSO:

ಗದಗ ಜಿಲ್ಲೆಯಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿದ್ದು, ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ.

ಪ್ರಸ್ತುತ ಅಳಿದುಳಿದಿರುವ ಮೆಣಸಿನಕಾಯನ್ನು ಬ್ಯಾಡಗಿ, ಹುಬ್ಬಳ್ಳಿ, ಗದಗ ಮಾರುಕಟ್ಟೆಗೆ ಒಯ್ದರೆ, ಕ್ವಿಂಟಾಲ್‌ಗೆ 20ರಿಂದ 35 ಸಾವಿರ ರೂ.ಗಳಿಗೆ ಆವಕವಾಗುತ್ತಿದೆ. ಕಳೆದ ವರ್ಷ ಕ್ವಿಂಟಾಲ್ ಒಂದಕ್ಕೆಗರಿಷ್ಠ 75 ಸಾವಿರ ರೂ.ಗಳಿಗೆ ಮಾರಾಟವಾಗಿತ್ತು.

ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ಅತ್ಯಂತ ಮಹತ್ವ ಹೊಂದಿರುವ ಮೆಣಸಿನಕಾಯಿ ಬೆಳೆಗೆ ಈ ವರ್ಷದ ಬರಗಾಲ ತೀವ್ರ ನಷ್ಟ ತಂದೊಡ್ಡಿದ್ದು, ಸಾಲ- ಸೋಲ ಮಾಡಿ ಬಿತ್ತನೆ ಮಾಡಿದ ರೈತ ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷ ಹೆಚ್ಚಿನ ಮಳೆಯಾಗಿ ಬೆಳೆ ಹಾನಿಗೊಳಗಾಗಿತ್ತು.

ಈ ವರ್ಷ ಮಳೆ ಕೈಕೊಟ್ಟು ಬರಗಾಲಆವರಿಸಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣವನ್ನು ಮಧ್ಯಂತರ ಪರಿಹಾರವಾಗಿ ಜಮಾವಣೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ ಎನ್ನುತ್ತಾರೆ ರೈತರು.

ಪೂರ್ಣ ಪ್ರಮಾಣದ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಆಗ್ರಹಿಸಿದ್ದಾರೆ.

 

 

 

By Raju

Leave a Reply

Your email address will not be published. Required fields are marked *