ನನ್ನ ಖಾತೆಗೆ ಪಿಎಂ ಕಿಸಾನ್(pmkisan) ಯೋಜನೆಯ ರಾಜ್ಯದ ಕಂತಿನ ಎರಡು ಸಾವಿರ ರೂಪಾಯಿಗಳು ಜಮೆ: ನಿಮ್ಮ ಖಾತೆಗು ಜಮೆಯಾಗಿದೆಯೋ ಚೆಕ್ ಮಾಡಿಕೊಳ್ಳಿ

Pmkisan

ಇಂದು ನನ್ನ ಖಾತೆಗೆ ಪಿಎಂ ಕಿಸಾನ್ ಯೋಜನೆಯ ರಾಜ್ಯದ ಕಂತಿನ ಎರಡು ಸಾವಿರ ರೂಪಾಯಿಗಳು ಜಮೆ: ನಿಮ್ಮ ಖಾತೆಗು ಜಮೆಯಾಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ಇಂದು ನನ್ನ ಖಾತೆ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವಂತಹ ಪಿಎಂ ಕಿಸಾನ್ ಯೋಜನೆಯ ಒಂದು ಕಂತಿನ ಹಣ ನನ್ನ ಖಾತೆಗಳಿಗೆ ಬಂದು ಜಮೆಯಾಗಿದೆ.

ಜಮೆಯಾಗಿರುವ ಪ್ರೂಫ್ ನಿಮಗಾಗಿ :

Krishisuddi

ತಮಗೆಲ್ಲಾ ಗೊತ್ತಿರುವ ಹಾಗೆ ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ವರ್ಷವೂ ಕೇಂದ್ರ ಸರ್ಕಾರವು ಮೂರು ಕಂತುಗಳಲ್ಲಿ 6,000ಗಳನ್ನು ರೈತರ ಖಾತೆಗಳಿಗೆ ನೀಡಲಿದೆ,

ಇದರೊಂದಿಗೆ ಕೈಜೋಡಿಸಿರುವಂತಹ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ 6000 ರೂಪಾಯಿಗಳ ಜೊತೆಯಲ್ಲಿ ರಾಜ್ಯ ಸರ್ಕಾರವು ಕೂಡ ನಾಲ್ಕು ಸಾವಿರ ರೂಪಾಯಿಗಳನ್ನು ಹೆಚ್ಚಿಸಿ ಒಟ್ಟು ರೈತರಿಗೆ ಪ್ರತಿ ವರ್ಷ ಪಿಎಮ್ ಕಿಸಾನ್ ಯೋಜನೆ ಅಡಿಯಲ್ಲಿ 10 ಸಾವಿರ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಿದೆ.

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಒಟ್ಟು ಕೇಂದ್ರ ಸರ್ಕಾರದಿಂದ ಮೂರು ಕಂತುಗಳಲ್ಲಿ ಆರು ಸಾವಿರ ರೂಪಾಯಿಗಳು, ಹಾಗೂ ರಾಜ್ಯ ಸರ್ಕಾರದ ವತಿಯಿಂದ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ರೂಪಾಯಿಗಳನ್ನು ಒಟ್ಟು 5 ಕಂತುಗಳಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಪ್ರತಿ ವರ್ಷ ರೈತರ ಖಾತೆಗಳಿಗೆ ಜಮೆಯಾಗಲಿದೆ.

Pmkisan

ನಿಮ್ಮ ಖಾತೆಗೂ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ.

– ಮೊಟ್ಟ ಮೊದಲು ಪ್ರಮುಖವಾಗಿ ಹೇಳಬೇಕೆಂದರೆ ನಿಮ್ಮ ಖಾತೆಗಳಿಗೆ ಹಣ ಜಮೆಯಾಗಿದ್ದರೆ ನೀವು ಲಿಂಕ್ ಮಾಡಿಸಿರುವಂತಹ ಮೊಬೈಲ್ ಸಂಖ್ಯೆಗೆ ಒಂದು ಮೆಸೇಜ್ ಬಂದಿರುತ್ತದೆ.

ಅಥವಾ ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆಂದರೆ :

– ಮೊಟ್ಟಮೊದಲು ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್:https://pmkisan.gov.in/

ಆಗ ಓಪನ್ ಆಗುವಂತಹ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪುಟದಲ್ಲಿ FARMERS CORNER ವಿಭಾಗದಲ್ಲಿ beneficiary status ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ಆಗ ನಿಮಗೆ ಎರಡು ಆಯ್ಕೆಗಳು ಸಿಗುತ್ತವೆ

ನಿಮಗೆ ಮೊಬೈಲ್ ನಂಬರ್ ಗೊತ್ತಿದ್ದಲ್ಲಿ ಮೊಬೈಲ್ ನಂಬರ್ ಆಪ್ಷನ್ ಅನ್ನು ಆಯ್ಕೆ ಮಾಡಿ, ಮೊಬೈಲ್ ನಂಬರ್ ಹಾಕಿ ಕ್ಯಾಚ್ ಪ ಕೋಡ ಹಾಕಿ ಸಬ್ಮಿಟ್ ಬಟನ್ ಮೇಲೆ ಒತ್ತಿ.

ಅಥವಾ ನಿಮಗೆ ರಿಜಿಸ್ಟ್ರೇಷನ್ ನಂಬರ್ ಗೊತ್ತಿದ್ದಲ್ಲಿ ರಿಜಿಸ್ಟ್ರೇಷನ್ ನಂಬರ್ ಹಾಕಿ ಕ್ಯಾಚ್ ಪ ಕೋಡ ಹಾಕಿ ಸಬ್ಮಿಟ್ ಬಟನ್ ಮೇಲೆ ಒತ್ತಿ.

ಆಗ ನಿಮ್ಮ ಖಾತೆಯ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ, ಇಲ್ಲಿಯವರೆಗೆ ನಿಮಗೆ ಎಷ್ಟು ಕಂತುಗಳು ಜಮೆಯಾಗಿವೆ, ಯಾವ ದಿನದಂದು ಯಾವ ಕಂತು ಜಮೆಯಾಗಿದೆ,

ಯಾವ ಖಾತೆಗೆ ಜಮೆಯಾಗಿದೆ ಎಂಬುದರ ಬಗ್ಗೆ ನೀವು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.

ಇನ್ನು ನಿಮ್ಮ ಪಿಎಂ ಕಿಸಾನ್ ಯೋಜನೆಯ ಹಣ ಬರುವುದು ಯಾವುದೋ ಕಾರಣಕ್ಕಾಗಿ ನಿಂತಿದ್ದರೂ ಕೂಡ ಅಲ್ಲಿ ನಿಮಗೆ ತೋರಿಸುತ್ತದೆ.

ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರದ ಒಂದು ಅತ್ಯದ್ಭುತ ಯೋಜನೆಯಾಗಿದ್ದು, ದೇಶದ ಎಲ್ಲಾ ಸಣ್ಣ ಅತಿ ಸಣ್ಣ ಮಧ್ಯಮ ಹಾಗೂ ದೊಡ್ಡ ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ವಾರ್ಷಿಕವಾಗಿ 6,000ಗಳನ್ನು 3 ಕಂತುಗಳಲ್ಲಿ ಪಡೆಯಬೇಕಾಗಿ ವಿನಂತಿ

krishisuddi whatsapp group

2 thoughts on “ನನ್ನ ಖಾತೆಗೆ ಪಿಎಂ ಕಿಸಾನ್(pmkisan) ಯೋಜನೆಯ ರಾಜ್ಯದ ಕಂತಿನ ಎರಡು ಸಾವಿರ ರೂಪಾಯಿಗಳು ಜಮೆ: ನಿಮ್ಮ ಖಾತೆಗು ಜಮೆಯಾಗಿದೆಯೋ ಚೆಕ್ ಮಾಡಿಕೊಳ್ಳಿ”

Leave a Comment