pmkisan ekyc

 

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ಗೊತ್ತಿರುವ ಹಾಗೆ ಪ್ರಧಾನಮಂತ್ರಿ ಕಿಸಾನ್(pmkisan ekyc) ಯೋಜನೆಯಡಿ ವಾರ್ಷಿಕವಾಗಿ 6,000ಗಳನ್ನು ಪಡೆಯಲು ಈ ಕೆ ವೈ ಸಿ ಯನ್ನು(pmkisan ekyc ) ಕಡ್ಡಾಯಗೊಳಿಸಿದ್ದು, ಈಗಾಗಲೇ ಬಹುತೇಕ ಜನರು ಈಕೆ ವಹಿಸೇಯನ್ನು ಮಾಡಿಸಿಕೊಂಡಿದ್ದು ಇನ್ನೂ ಮಾಡಿಸಿದ ರೈತರು ಆದಷ್ಟು ಬೇಗ ಮಾಡಿಸಬೇಕಾಗಿ ವಿನಂತಿ.

ಪ್ರಮುಖವಾಗಿ ನಾವು ಜಿಲ್ಲಾ ವಾರು ನೋಡುತ್ತಾ ಹೋದರೆ ಗದಗ್ ಜಿಲ್ಲೆಯಲ್ಲಿ, ಶೇಕಡ 84% ರಷ್ಟು ಈಕೆ ವಹಿಸಿ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇನ್ನು 16% ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

ಈಕೆ ವೈಸಿ ಎಂದರೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಮತ್ತು ಫೋನ್ ನಂಬರ್ ಸಂಯೋಜಿಸುವ E-KYC ಪ್ರಕ್ರಿಯೆಯಾಗಿದೆ, ಈಗಾಗಲೇ ಇದು ಮುಕ್ತಾಯ ಹಂತಕ್ಕೆ ತಲುಪಿದ್ದು, ಗದಗ ಜಿಲ್ಲೆಯಲ್ಲಿ ಒಟ್ಟು 1,32,772 ಫಲಾನುಭವಿಗಳಿದ್ದು ಅದರಲ್ಲಿ 1,11,923 ಫಲಾನುಭವಿಗಳು ಈಗಾಗಲೇ E-KYC ಮಾಡಿಸಿದ್ದಾರೆ.

ಆನ್ಲೈನ್ ಮೂಲಕ ನಮ್ಮ ಮೊಬೈಲ್ ನಲ್ಲಿ E-KYC ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ PMKISAN ಎಂದು ಸರ್ಚ್ ಮಾಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ :https://pmkisan.gov.in/

ಅಲ್ಲಿ ಬಲಗಡೆ farmers corner ಅಲ್ಲಿ e-kyc ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ :https://exlink.pmkisan.gov.in/aadharekyc.aspx

ಅಲ್ಲಿ ಕೇಳುವಂತಹ ನಿಮ್ಮ ಆಧಾರ್ number ಅನ್ನು ನಮೂದಿಸಿ ನಂತರ ನಿಮ್ಮ aadhar ನೊಂದಿಗೆ ಲಿಂಕ್ ಆಗಿರುವಂತಹ mobile ಸಂಖ್ಯೆಗೆ ಒಂದು otp ಬರುತ್ತದೆ, ಅದನ್ನು ನಮೂಡಿಸುವ ಮೂಲಕ ನೀವು ಯಶಸ್ವಿಯಾಗಿ ನಿಮ್ಮ mobile ನಲ್ಲಿಯೇ E-kyc ಅನ್ನು ಮಾಡಬಹುದಾಗಿದೆ.

ಆಧಾರ್ ಕಾರ್ಡ್ನೊಂದಿಗೆ mobile ನಂಬರ್ ಲಿಂಕ್ ಇರದಿದ್ದರೆ ಏನು ಮಾಡಬೇಕು?

ಆಧಾರ್ ಕಾರ್ಡ್ ನೊಂದಿಗೆ mobile ನಂಬರ್ ಲಿಂಕ್ ಇರದಿದ್ದರೆ ನಿಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ e-kyc ಅನ್ನು ಮಾಡಿಸಿಕೊಳ್ಳಬಹುದಾಗಿದೆ.

ಬೇಕಾಗುವ ದಾಖಲೆಗಳು:

-ಆಧಾರ್ ಕಾರ್ಡ್

ಆದಷ್ಟು ಬೇಗ E-KYC ಮಾಡಿಸಿಕೊಂಡು ಮುಂದಿನ ಕಂತಿನ ಹಣ ಪಡೆಯಬೇಕಾಗಿ ವಿನಂತಿ.

ಆತ್ಮೀಯ ರೈತ ಬಾಂಧವರೇ, ಪಿ ಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರದ ಒಂದು ಅತ್ಯದ್ಭುತ ಯೋಜನೆಯಾಗಿದ್ದು, ದೇಶದ ಎಲ್ಲಾ ಸಣ್ಣ ಅತಿ ಸಣ್ಣ ಮಧ್ಯಮ ಹಾಗೂ ದೊಡ್ಡ ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ವಾರ್ಷಿಕವಾಗಿ 6,000ಗಳನ್ನು 3 ಕಂತುಗಳಲ್ಲಿ ಪಡೆಯಬೇಕಾಗಿ ವಿನಂತಿ.

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

ಹಾಗೂ ಈ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ

krishisuddi whatsapp group

Read this also:

1.ಆಧಾರ್ ಕಾರ್ಡ್ ನಂಬರ್ ಮೂಲಕ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ನಿಮ್ಮ mobile ಮೂಲಕ ನೀವೇ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ಆಧಾರ್ ಕಾರ್ಡ(aadhar card) ನಂಬರ್ ಮೂಲಕ ನೀವು ನಿಮ್ಮ crop insurance  status ಅನ್ನು ಚೆಕ್ ಮಾಡಿಕೊಳ್ಳಬಹುದು.

ಅದು ಕೂಡ ನಿಮ್ಮ mobileಲಲ್ಲಿ ಕೇವಲ ಎರಡು ನಿಮಿಷದಲ್ಲಿ ಚೆಕ್ ಮಾಡಬಹುದು. ಬನ್ನಿ ಹೇಗೆ ಅಂತ ತಿಳಿದುಕೊಳ್ಳೋಣ.

ಮೊಟ್ಟ ಮೊದಲು googleನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ : https://samrakshane.karnataka.gov.in/

 

 

By Raju

Leave a Reply

Your email address will not be published. Required fields are marked *