ಪಿಎಂ ಕಿಸಾನ್ ಯೋಜನೆಗಾಗಿ ಹೊಸದಾಗಿ ನೀವು ಅರ್ಜಿಯನ್ನು ಸಲ್ಲಿಸಿದ್ದೀರಾ? ಹಾಗಾದರೆ ನಿಮ್ಮ ಅರ್ಜಿ ಅಪ್ರೂವ್ ಆಗಿದೆಯೋ ಅಥವಾ ರಿಜೆಕ್ಟ್ ಎಂಬುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ?

ಆತ್ಮೀಯ ರೈತ ಬಾಂಧವರೇ, ಪಿಎಂ ಕಿಸಾನ್ ಯೋಜನೆಗಾಗಿ ನೀವು ಹೊಸದಾಗಿ ಅರ್ಜಿಯನ್ನು ಸಲ್ಲಿಸಿದ್ದೀರಾ? ಹಾಗಾದರೆ ನೀವು ಸಲ್ಲಿಸಿದಂತಹ ಅರ್ಜಿಯು ಸರ್ಕಾರದಿಂದ ಅಪ್ರೂ ಆಗಿದಿಯೋ ಅಥವಾ ರಿಜೆಕ್ಟ್ ಆಗಿದೆಯೋ ಎಂಬುದನ್ನು ಆನ್ಲೈನ್ ಮೂಲಕ ಕೇವಲ ನಿಮ್ಮ ಆಧಾರ್ ಕಾರ್ಡ್ ನಂಬರ್ ಮೂಲಕ ಚೆಕ್ ಮಾಡುವುದು ಹೇಗೆ ಎಂಬುದನ್ನು ಎಂದು ತಿಳಿದುಕೊಳ್ಳೋಣ ಬನ್ನಿ.

ಚೆಕ್ ಮಾಡಲು ಬೇಕಾಗುವಂತಹ ದಾಖಲೆಗಳು?

ನಿಮ್ಮ ಬಳಿ ಯಾವ ವ್ಯಕ್ತಿಯ ಅರ್ಜಿಯ ಸ್ಥಿತಿಯನ್ನು ನೀವು ಚೆಕ್ ಮಾಡಬೇಕು ಅವರ ಆಧಾರ್ ಕಾರ್ಡ್ ನಂಬರ್ ಇದ್ದರೆ ಸಾಕು.

ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ Fruits pmkisan ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ :https://fruitspmk.karnataka.gov.in/

ಈಗ ನೀವು ಫ್ರೂಟ್ ಪಿಎಂ ಕಿಸಾನ್ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

pmkisan

ನೀವು ಗಮನಿಸುವ ಹಾಗೆ ಮೇಲೆ ಇರುವಂತಹ ಹಲವಾರು ಆಯ್ಕೆಗಳಲ್ಲಿ get details by Aadhar ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ:https://fruitspmk.karnataka.gov.in/MISReport/GetDetailsByAadhaar.aspx

ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವ ಮೂಲಕ, ನೀವು ನಿಮ್ಮ ಫ್ರೂಟ್ಸ್ ಐಡಿ ಹಾಗೂ ಪಿಎಂಕೆ ಐಡಿಯನ್ನು ಪಡೆಯಬಹುದಾಗಿದೆ
ಈ ಎರಡು ಫ್ರೂಟ್ಸ್ ಐಡಿ ಹಾಗೂ ಪಿಎಂಕೆ ಐಡಿಯನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ

pmkisan

ನಂತರ ಮತ್ತೆ ಇನ್ನೊಮ್ಮೆ ಫ್ರೂಟ್ ಪಿಎಂ ಕಿಸಾನ್ ತಂತ್ರಾಂಶದ ಮುಖ್ಯ ಪೇಜ್ಗೆ ಹೋಗಿ

ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ:https://fruitspmk.karnataka.gov.in/

ಅದರಲ್ಲಿ ಕಾಣುವಂತಹ ಸ್ಥಿತಿಪರಿಶೀಲಿಸಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ:https://fruitspmk.karnataka.gov.in/MISReport/CheckStatus.aspx

ಆಗ ಅಲ್ಲಿ ನಿಮ್ಮ ಪಿಎಂಕೆಐಡಿ ಅನ್ನು ಕೇಳಲಾಗುತ್ತದೆ, ನಾವು ಮುಂಚೆ ಹೇಳಿದಂತೆ ನೀವು ಬರೆದಿಟ್ಟುಕೊಂಡಿರುವಂತಹ ಪಿಎಂಕೆ ಐಡಿಯನ್ನು ಇಲ್ಲಿ ಟೈಪ್ ಮಾಡಿ ಹುಡುಕಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

pmkisan

ಆಗ ನಿಮ್ಮ ಪಿಎಂ ಕಿಸಾನ್ ಅರ್ಜಿಯ ಸ್ಥಿತಿಯ ಸಂಪೂರ್ಣ ವಿವರ ನಿಮಗೆ ಸಿಗುತ್ತದೆ.

ಪಿ ಎಂ ಕಿಸಾನ್ ಯೋಜನೆ:

ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ವರ್ಷವೂ ಕೇಂದ್ರ ಸರ್ಕಾರವು ಮೂರು ಕಂತುಗಳಲ್ಲಿ 6,000ಗಳನ್ನು ರೈತರ ಖಾತೆಗಳಿಗೆ ನೀಡಲಿದೆ,

ಇದರೊಂದಿಗೆ ಕೈಜೋಡಿಸಿರುವಂತಹ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ 6000 ರೂಪಾಯಿಗಳ ಜೊತೆಯಲ್ಲಿ ರಾಜ್ಯ ಸರ್ಕಾರವು ಕೂಡ ನಾಲ್ಕು ಸಾವಿರ ರೂಪಾಯಿಗಳನ್ನು ಹೆಚ್ಚಿಸಿ ಒಟ್ಟು ರೈತರಿಗೆ ಪ್ರತಿ ವರ್ಷ ಪಿಎಮ್ ಕಿಸಾನ್ ಯೋಜನೆ ಅಡಿಯಲ್ಲಿ 10 ಸಾವಿರ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಿದೆ.

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಒಟ್ಟು ಕೇಂದ್ರ ಸರ್ಕಾರದಿಂದ ಮೂರು ಕಂತುಗಳಲ್ಲಿ ಆರು ಸಾವಿರ ರೂಪಾಯಿಗಳು, ಹಾಗೂ ರಾಜ್ಯ ಸರ್ಕಾರದ ವತಿಯಿಂದ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ರೂಪಾಯಿಗಳನ್ನು ಒಟ್ಟು 5 ಕಂತುಗಳಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಪ್ರತಿ ವರ್ಷ ರೈತರ ಖಾತೆಗಳಿಗೆ ಜಮೆಯಾಗಲಿದೆ.

Read this also:

1.2023 ರ ಅಂತಿಮ ಮತಪಟ್ಟಿ ಬಿಡುಗಡೆ : ಇದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಈಗಲೇ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಿ

ಆತ್ಮೀಯ ಬಾಂಧವರೇ, ತಮಗೆಲ್ಲ ಗೊತ್ತಿರುವ ಹಾಗೆ ಮುಂದಿನ ತಿಂಗಳು ಅಂದರೆ ಮೇ ಹತ್ತರಂದು ಕರ್ನಾಟಕ ರಾಜ್ಯದ ವಿಧಾನಸಭೆಯ ಚುನಾವಣೆಗಳು ನಡೆಯಲಿದ್ದು, ಅದಕ್ಕಾಗಿ ಸರ್ಕಾರವು 2023 ನೇ ಸಾಲಿನ ಹೊಸ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ ಬನ್ನಿ.

2.2019-23 ವರೆಗಿನ ಬೆಳೆ ವಿಮೆ ನಿಮಗೆ ಬಂದಿಲ್ಲವೇ? ಹಾಗಾದರೆ ಈ ಪಟ್ಟಿಯಲ್ಲಿ ಹೆಸರಿದ್ದರೆ ನಿಮಗೆ ಬರಲಿದೆ ಬೆಳೆ ವಿಮೆಯ ಹಣ

ಆತ್ಮೀಯ ರೈತ ಬಾಂಧವರೆ, 2019 ರಿಂದ 2023 ವರೆಗಿನ ಬೆಳೆ ವಿಮೆ ನಿಮ್ಮ ಖಾತೆಗಳಿಗೆ ಜಮಯಾಗಿಲ್ಲವೇ, ಹಾಗಾದರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ, ಸರ್ಕಾರವು 2019 ರಿಂದ 2023ರ ವರೆಗಿನ ಬೆಳೆ ವಿಮೆ ಜಮಾ ಆಗದವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಾವು ಹೇಳುವ ಕೆಲಸವನ್ನು ಮಾಡುವ ಮೂಲಕ ನೀವು ನಿಮ್ಮ ಬೆಳೆ ವಿಮೆಯ ಹಣವನ್ನು ಪಡೆಯಬಹುದಾಗಿದೆ.

3.ನನ್ನ ಖಾತೆಗೆ ಬೆಳೆ ವಿಮೆಯ ಹಣ ಜಮಾ: ನಿಮ್ಮ ಖಾತೆಗೂ ಜಮಯಿ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ

ಇಂದು ರೈತರಿಗೆ ಸುದಿನ ಎಂದೇ ಹೇಳಬಹುದು, ಯಾಕೆಂದರೆ ಇಂದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹೇಳಿ ಬೆಳೆವಿಮೆ ಮಾಡಿದಂತಹ ರೈತರಿಗೆ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು, ನನ್ನ ಖಾತೆಗೆ ಬೆಳಗಿದ್ದು ನಿಮ್ಮ ಖಾತೆಗೂ ಜಮಯಿ ಆಗಿದೆಯೋ ಇಲ್ಲವೋ ಈಗಲೇ ಚೆಕ್ ಮಾಡಿಕೊಳ್ಳಿ.

For more information visit www.krishisuddi.com

 

 

Leave a Comment