ಆತ್ಮೀಯ ರೈತ ಬಾಂಧವರೇ ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ನೀವು ಪಡೆಯಬೇಕೆಂದರೆ ನೀವು ಕಡ್ಡಾಯವಾಗಿ e-kyc ಮಾಡಿಸಲೇಬೇಕಾಗಿದೆ.

ನಿಮ್ಮ e-kyc ಆಗಿದೆಯೋ ಇಲ್ಲವೋ ಇಲ್ಲಿ ಕ್ಲಿಕ್ ಮಾಡುವ ಮೂಲಕ ದೃಢಪಡಿಸಿಕೊಳ್ಳಿ.

ಈಗಾಗಲೇ ಬಹುತೇಕ ರೈತರು ಇ-ಕೆವೈಸಿ ಮಾಡಿಸಿ ಕೊಂಡಿದ್ದು, ಇನ್ನು ನೋಂದಾಯಿಸದೇ ಇರುವ ಅರ್ಹರೈತರು ಸ್ವಯಂಘೋಷಣಾ ಪತ್ರ, ಎಲ್ಲಾ ಸರ್ವೆ ನಂಬರ್‌ಗಳ ಪಹಣಿ, ಆಧಾರ್‌ಜೆ ರಾಕ್ಸ್ ಪ್ರತಿ ಬ್ಯಾಂಕ್ ಪಾಸ್‌ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಸಲ್ಲಿಸಿ ಇ-ಕೆವೈಸಿಮಾಡಿಸಿ ಕೊಳ್ಳಬಹುದಾಗಿದೆ ಎಂದು ತಾ.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದರು. ಪ್ರಧಾನ ಮಂತ್ರಿಕಿಸಾನ್ ಸಮಾನ್ ನಿಧಿ ಯೋಜನೆಯನ್ನು, ಫೆಬ್ರವರಿ-2019 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ.

ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಗಳವರೆಗೂ ಉಚಿತ ವಿದ್ಯುತ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಉತ್ತಮ ಪರಿಕರಗಳನ್ನು ಬಳಸಿ, ಬೆಳೆಗಳ ಆರೋಗ್ಯ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯಗಳಿಸಲು ರೈತರ ಆರ್ಥಿಕ ಬಲವರ್ಧನೆಗೆ ನೆರವಾಗುವಉದ್ದೇಶದಿಂದ ಎಲ್ಲಾ ವರ್ಗದರೈತರಿಗೆ ಕೇಂದ್ರ ಸರ್ಕಾರದಿಂದ ವಾರ್ಷಿಕ 6000 ರೂ.ಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು ಮೂರು ಸಮಾನ ಕಂತುಗಳಲ್ಲಿ ಹಾಗೂ ರಾಜ್ಯ ಸರ್ಕಾರದಿಂದ 4000 ರೂ.ಗಳನ್ನು ಎರಡು ಕಂತುಗಳಲ್ಲಿ ಒಟ್ಟು 10000 ರೂ.ಗಳನ್ನು ನೀಡಲಾಗುತ್ತಿದೆ.

ಬ್ಯಾಂಕ್‌ ಆಕೌಂಟ್‌ಗೆ ಜೋಡಣೆ ಮಾಡಿಸುವುದು ಹಾಗೂ ಎನ್‌ ಪಿಸಿಐ ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಸದರಿಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರಕುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಲು ಇ-ಕೆವೈಸಿ ಮಾಡಿಸುವುದು ಅವಶ್ಯಕವಾಗಿರುತ್ತದೆ.

ಆನ್ಲೈನ್ ಮೂಲಕ ನಮ್ಮ ಮೊಬೈಲ್ ನಲ್ಲಿ E-KYC ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ PMKISAN ಎಂದು ಸರ್ಚ್ ಮಾಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ :https://pmkisan.gov.in/

ಅಲ್ಲಿ ಬಲಗಡೆ farmers corner ಅಲ್ಲಿ e-kyc ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ :https://exlink.pmkisan.gov.in/aadharekyc.aspx

ಅಲ್ಲಿ ಕೇಳುವಂತಹ ನಿಮ್ಮ ಆಧಾರ್ number ಅನ್ನು ನಮೂದಿಸಿ ನಂತರ ನಿಮ್ಮ aadhar ನೊಂದಿಗೆ ಲಿಂಕ್ ಆಗಿರುವಂತಹ mobile ಸಂಖ್ಯೆಗೆ ಒಂದು otp ಬರುತ್ತದೆ, ಅದನ್ನು ನಮೂಡಿಸುವ ಮೂಲಕ ನೀವು ಯಶಸ್ವಿಯಾಗಿ ನಿಮ್ಮ mobile ನಲ್ಲಿಯೇ E-kyc ಅನ್ನು ಮಾಡಬಹುದಾಗಿದೆ.

ಆಧಾರ್ ಕಾರ್ಡ್ನೊಂದಿಗೆ mobile ನಂಬರ್ ಲಿಂಕ್ ಇರದಿದ್ದರೆ ಏನು ಮಾಡಬೇಕು?

ಆಧಾರ್ ಕಾರ್ಡ್ ನೊಂದಿಗೆ mobile ನಂಬರ್ ಲಿಂಕ್ ಇರದಿದ್ದರೆ ನಿಮ್ಮ ಹತ್ತಿರದ ಕಾಮನ್ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ e-kyc ಅನ್ನು ಮಾಡಿಸಿಕೊಳ್ಳಬಹುದಾಗಿದೆ.

ಬೇಕಾಗುವ ದಾಖಲೆಗಳು:

-ಆಧಾರ್ ಕಾರ್ಡ್

ಆದಷ್ಟು ಬೇಗ E-KYC ಮಾಡಿಸಿಕೊಂಡು ಮುಂದಿನ ಕಂತಿನ ಹಣ ಪಡೆಯಬೇಕಾಗಿ ವಿನಂತಿ.

Read this also :

1.ಇದುವರೆಗೂ ಗೃಹಜೋತಿ ಯೋಜನೆ ಅಡಿ ನೋಂದಣಿ ಮಾಡಿದವರು ಎಷ್ಟು ಜನ ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ? ನೀವು ಬೇಗ ಬೇಗ ನೋಂದಣಿ ಮಾಡಿ

ಆತ್ಮೀಯ ಬಾಂಧವರೇ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ನೀಡಿದಂತಹ ಐದು ಗ್ಯಾರಂಟಿಗಳಲ್ಲಿ ಒಂದಾದಂತಹ ಗೃಹ ಜ್ಯೋತಿ ಯೋಜನೆ ಅಡಿ ಎರಡು ನೂರು ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವಂತಹ ಯೋಜನೆ ಯಾದ ಈ ಯೋಜನೆಯಲ್ಲಿ ಇದುವರೆಗೆ ಎಷ್ಟು ಜನ ನೋಂದಣಿ ಮಾಡಿದ್ದಾರೆ ನಿಮಗೆ ಗೊತ್ತಾ.

ಕೇಳಿದರೆ ಶಾಕ್ ಆಗ್ತೀರಾ, ನಿನ್ನೆ ರಾತ್ರಿ 8 ಗಂಟೆಯವರೆಗೆ ಅಂದರೆ ಜೂನ್ 23 ರಾತ್ರಿ 8 ಗಂಟೆಗಳವರೆಗೆ 32.45 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ.

2.ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಮ್ಮ ಮೊಬೈಲ್ ಮೂಲಕವೇ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಆತ್ಮೀಯ ಬಾಂಧವರೇ, ಉಚಿತವಾಗಿ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕ ಗೃಹಜೋತಿ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 

 

By Raju

One thought on “ಪಿಎಂ ಕಿಸಾನ 14 ನೇ ಕಂತಿನ ಹಣ ಬರಬೇಕೆಂದರೆ ಕಡ್ಡಾಯವಾಗಿ ಈ ಕೆಲಸ ಮಾಡಲೇ ಬೇಕು :ಇಲ್ಲದಿದ್ದರೆ ನೀವು 2000 ರೂಪಾಯಿ ಕಳೆದುಕೊಳ್ಳುತ್ತಿರಾ”

Leave a Reply

Your email address will not be published. Required fields are marked *