parihara

ಆತ್ಮೀಯ ರೈತ ಬಾಂಧವರೇ, ಕರ್ನಾಟಕ ರಾಜ್ಯದಲ್ಲಿ ಅನಾವೃಷ್ಟಿಯ ಕಾರಣಗಳಿಂದಾಗಿ ರೈತರು ಸಂಕಷ್ಟದಲ್ಲಿದ್ದು ಇದಕ್ಕೆ ಸ್ಪಂದಿಸಿರುವಂತಹ ಸರ್ಕಾರವು 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.(parihara)

ಈ ತಾಲೂಕುಗಳಲ್ಲಿ ಇದೀಗ ಬೆಳೆ ಪರಿಹಾರವನ್ನು ರೈತರಿಗೆ ವಿತರಿಸಲಾಗುವುದು, ಹಾಗಾಗಿ ಬನ್ನಿ ಆಧಾರ್ ಕಾರ್ಡ್ ನಂಬರ್ ಮೂಲಕ ನಮ್ಮ ಮೊಬೈಲ್ ನಲ್ಲಿ ನಾವು ಯಾವಾಗ ಬೆಳೆ ಪರಿಹಾರ(parihara) ಹಣ ಜಮಯಾಗುತ್ತದೆ ಎಂದು ಚೆಕ್ ಮಾಡುವುದು ಹೇಗೆ ಎಂದು ನೋಡಿಕೊಳ್ಳೋಣ.

ಈಗಾಗಲೇ ರಾಜ್ಯ ಸರ್ಕಾರವು 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಸಮೀಕ್ಷೆ ಪೂರ್ಣಗೊಂಡು ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಕೇಂದ್ರ ಸರ್ಕಾರದಿಂದ ಸಹಾಯಧನ ಬಂದ ಕೂಡಲೇ ಎಲ್ಲ ರೈತರಿಗೂ ಕೂಡ ಪರಿಹಾರವನ್ನು(parihara) ವಿತರಿಸಲಾಗುವುದು.

ಇನ್ನು ಪರಿಹಾರದ ದಿನಾಂಕದ ಕುರಿತು ಅಧಿಕೃತ ಆದೇಶ ಹೊರ ಬಂದಿಲ್ಲ, ಕೇಂದ್ರ ಸರ್ಕಾರದಿಂದ ಸಹಾಯಧನ ದೊರೆತ ಕೂಡಲೇ ರೈತರಿಗೆ ಪರಿಹಾರವನ್ನು(parihara) ವಿತರಿಸಲಾಗುವುದು.

ಪರಿಹಾರಕ್ಕಾಗಿ ಕರ್ನಾಟಕ ಸರ್ಕಾರದ ಒಂದು ಅಧಿಕೃತ ವೆಬ್ಸೈಟ್ ಇದ್ದು, ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕುವ ಮೂಲಕ ಯಾವ ವರ್ಷ ಯಾವ ಖಾತೆಗೆ ಯಾವ ದಿನದಂದು ಎಷ್ಟು ಪರಿಹಾರ ಜಮೆಯಾಗಿದೆ ಎಂದು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದಾಗಿದೆ.

ಮೊಟ್ಟ ಮೊದಲು ಗೂಗಲ್ ನಲ್ಲಿ ಪರಿಹಾರ ಪೇಮೆಂಟ್ ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:https://landrecords.karnataka.gov.in/PariharaPayment/

ಅಲ್ಲಿ ನಿಮಗೆ ಎರಡು ಆಯ್ಕೆಗಳಿರುತ್ತವೆ,ಒಂದು ಪರಿಹಾರ ಐಡಿ ಇನ್ನೊಂದು ಆಧಾರ್ ಸಂಖ್ಯೆ.

parihara

ನಿಮಗೆ ಪರಿಹಾರ ಐಡಿ ಗೊತ್ತಿದ್ದಲ್ಲಿ ಪರಿಹಾರ ಐಡಿ ಮೇಲೆ ಕ್ಲಿಕ್ ಮಾಡಿ ಇಲ್ಲವಾದಲ್ಲಿ ಆಧಾರ್ ಸಂಖ್ಯೆ ಮೇಲೆ ಕ್ಲಿಕ್ ಮಾಡಿ.

ಆಗ ಅಲ್ಲಿ ನಿಮಗೆ ಹಲವು ಆಯ್ಕೆಗಳು ಇರುತ್ತವೆ

ನಿಮಗೆ ಸೂಕ್ತವಾದ ಅಂತಹ ಆಯ್ಕೆಗಳನ್ನು ಆಯ್ಕೆ ಮಾಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ಪಡೆಯಿರಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

parihara

ಆಗ ನೀವು ಅಲ್ಲಿ ನಿಮ್ಮ ಖಾತೆಗೆ ಯಾವ ದಿನಾಂಕದಂದು ಯಾವ ಖಾತೆಗೆ ಎಷ್ಟು ಹಣ ಜಮಯಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ.

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

ಹಾಗೂ ಈ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ

krishisuddi whatsapp group

By Raju

Leave a Reply

Your email address will not be published. Required fields are marked *