ಈರುಳ್ಳಿಗೆ ಬಂಪರ್ ಬೆಲೆ: ಎಷ್ಟಿದೆ ಗೊತ್ತಾ ಈಗಿನ ಪ್ರಸ್ತುತ ದರ

 ಆತ್ಮೀಯ ರೈತ ಬಾಂಧವರೇ, ಈ ಬಾರಿ ಈರುಳ್ಳಿಗೆ ಬಂಪರ್ ಬೆಲೆ ಬರುವ ನಿರೀಕ್ಷೆಗಳಿದ್ದು ಅದರಂತೆ ಈಗಿನ ಪ್ರಸ್ತುತ ಈರುಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ. ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಈರುಳ್ಳಿ ಬೆಳೆದಂತಹ ರೈತ ಸರಿಯಾದ ಬೆಳೆ ಹಾಗೂ ಸರಿಯಾದ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದು ಆದರೆ ಈ ಬಾರಿ ಈರುಳ್ಳಿ ರೈತರನ್ನು ಕೈ ಹಿಡಿಯುವ  ನೀರಿಕ್ಷೆಗಳಿವೆ.

ಸರಿಯಾದ ಬೆಲೆ ಇಲ್ಲದೆ ಈ ಬಾರಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಉಂಟಾಗಿರುವಂತಹ ಬರಗಾಲದಿಂದ ಈರುಳ್ಳಿ ಪ್ರದೇಶ ಕುಂಠಿತವಾಗಿದ್ದು ಹಾಗಾಗಿ ನಿರೀಕ್ಷಿತ ಮಟ್ಟದ ಪ್ರಮಾಣದ ಈರುಳ್ಳಿ ಇಲ್ಲದ ಕಾರಣ ಈ ಬಾರಿ ಇರುಳಿಗೆ ಬಂಪರ್ ಬೆಲೆ ಬರುವ ನಿರೀಕ್ಷೆಗಳಿವೆ.

 ಇಲ್ಲಿದೆ ನೋಡಿ ಈರುಳ್ಳಿ ದರ:

1600-2000 1 ಪಾಕೆಟ್‌ ಈರುಳ್ಳಿಗೆ

ನಮಗೆಲ್ಲ ಗೊತ್ತಿರುವ ಹಾಗೆ ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಈರುಳ್ಳಿ ಅದು ಮುಂಗಾರಿನಲ್ಲಿ ಬೆಳೆಯುವಂತ ಜಿಲ್ಲೆ ಎಂದರೆ ಚಿತ್ರದುರ್ಗ,  ಈ ಜಿಲ್ಲೆಯಲ್ಲಿ ರೈತರು ಈರುಳ್ಳಿ ಬೆಳೆದು ಕೋಟಿಗಟ್ಟಲೆ   ಸಂಪಾದಿಸಿರುವ ಉದಾಹರಣೆಗಳು ಇವೆ,  ಅದೇ ರೀತಿ ಉಳ್ಳಾಗಡ್ಡಿಗಾಗಿ ಸಾಲವನ್ನು ಮಾಡಿಕೊಂಡ ರೈತರು ಕೂಡ ಇದ್ದಾರೆ.

ಚಿತ್ರದುರ್ಗ ಜಿಲ್ಲೆ ನಮಗೆಲ್ಲಾ ಗೊತ್ತಿರುವ ಹಾಗೆ ಈ ಜಿಲ್ಲೆಯಲ್ಲಿ ಈರುಳ್ಳಿಯನ್ನು ಎರಡು ವಿಧದಲ್ಲಿ  ಅಂದರೆ ಮಳೆ ಆಶ್ರಿತ ಹಾಗೂ ನೀರಾವರಿ ಎರಡು ಪದ್ದತಿಯಲ್ಲೂ ಕೂಡ ಈ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ.

ಕರ್ನಾಟಕದಲ್ಲಿ ಅಡಕೆ ತೆಂಗು ದಾಳಿಂಬೆ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದು ಕೋಟಿಗಟ್ಟಲೆ ಸಂಪಾದಿಸಿರುವವರು ಹಲವಾರು ಜನ ಇದ್ದಾರೆ ಆದರೆ ಉಳ್ಳಾಗಡ್ಡಿ ಬೆಳೆದು ಕೋಟಿ ಸಂಪಾದಿಸಿದವರನ್ನು ನಾವು ನೋಡಬೇಕೆಂದರೆ ಅದು ಚಿತ್ರದುರ್ಗ ಜಿಲ್ಲೆಯಲ್ಲಿ  ಎಂದು ಹೇಳಬಹುದು.

 ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಅತಿವೃಷ್ಟಿ ಹಾಗೂ ರೋಗಗಳ ಬಾಧೆಗಳಿಗೆ ಸಿಕ್ಕಂತಹ ಈರುಳ್ಳಿ ಇಂದ ನಾವು ಬೆಳೆ ನಿರೀಕ್ಷಿತ ಪ್ರಮಾಣದ ಇಳುವರಿಯನ್ನು ಪಡೆಯಲಿಲ್ಲ  ಹಾಗೂ ನಿರೀಕ್ಷಿತ ಪ್ರಮಾಣದ ಬೆಲೆಯನ್ನು ಕೂಡ ಪಡೆಯಲಿಲ್ಲ. ಆದರೆ ಈ ಬಾರಿ ರೈತರಿಗೆ ಒಂದು ಒಳ್ಳೆಯ ಚಾನ್ಸ್ ಇದ್ದು ನಿರೀಕ್ಷಿತ ಮಟ್ಟದ ಬೆಲೆ ಇದ್ದು ಅದೇ ರೀತಿ ಬೆಳೆ ಬಂದರೆ ರೈತನು ಈ  ಈ ಬಾರಿಯೂ ಕೂಡ ಕೋಟ್ಯಾಧಿಪತಿಯಾಗಬಹುದು.

ತಡ ಮುಂಗಾರು ಕಾರಣದಿಂದಾಗಿ ಈ ಬಾರಿ ರೈತರು ಈರುಳ್ಳಿ ಬೆಳೆಯಲು ಹೆಚ್ಚಿನ ಆಸಕ್ತಿಯನ್ನು ತೋರಲಿಲ್ಲ, ವಾಡಿಕೆಗಿಂತ ಈ ಬಾರಿ ಮುಂಗಾರು ಕರ್ನಾಟಕವನ್ನು ತಡವಾಗಿ ಪ್ರವೇಶಿಸಿದ ಕಾರಣದಿಂದಾಗಿ ಈ ಬಾರಿ  ರೈತರು ಈರುಳ್ಳಿಯನ್ನು  ಬೆಳೆಯಲು ಹೆಚ್ಚು ಆಸಕ್ತಿ ತೋರದ ಕಾರಣ  ಈರುಳ್ಳಿಯ ಕ್ಷೇತ್ರ ಕಡಿಮೆಯಾಗಿದೆ.

ಮುಂಗಾರಿ ತಡವಾದ ಕಾರಣಗಳಿಂದಾಗಿ 25,000 ಹೆಕ್ಟರ್ ಈರುಳ್ಳಿ ಪ್ರದೇಶ ಗುರಿ ಹೊಂದಲಗಿದ್ದು ಆದರೆ ಕೇವಲ 18000  ಹೆಕ್ಟರ್ ಪ್ರದೇಶ ಮಾತ್ರ ಬಿತ್ತನೆ ಮಾಡಲಾಗಿದೆ. ಅದರಲ್ಲಿಯೂ ಕೂಡ 4779  ಈರುಳ್ಳಿ ಪ್ರದೇಶವನ್ನು  ಮಳೆಯಾಶ್ರಿತ ಪ್ರದೇಶದಲ್ಲಿ ಹಾಗೂ ಉಳಿದಂತಹ 13000 ಹೆಕ್ಟರ್ ಪ್ರದೇಶವನ್ನು ನೀರಾವರಿ ಆಶ್ರಿತದಲ್ಲಿ ಬಿತ್ತನೆ ಮಾಡಲಾಗಿದೆ.

 ಪ್ರಸ್ತುತ ಈರುಳ್ಳಿಯ ಮಾರುಕಟ್ಟೆ ದರ ಎಷ್ಟಿದೆ?

ಆರಂಭದಲ್ಲಿ ಒಂದು ಪಾಕೆಟ್‌ಗೆ 1000 ರೂ. ನಿಂದ 1200 ರೂ. ತನಕ ರೈತರಿಗೆ ಬೆಲೆ ಸಿಕ್ಕಿದೆ. ಈಗ ಈರುಳ್ಳಿ ಬೆಲೆ 1600 ರೂ. ದಿಂದ 2000 ತನಕ ಏರಿಕೆ ಕಂಡಿದೆ. 

Read this also:

Gruhalakshmi : ಎರಡನೇ ಕಂತಿನ ಹಣ ಬಿಡುಗಡೆ:   ಆಧಾರ್ ಕಾರ್ಡ್ ನಂಬರ್ ಮೂಲಕ ಯಾವ ಖಾತೆಗೆ ಜಮೆಯಾಗಿದೆ ಎಂದು ಈಗಲೇ ಚೆಕ್ ಮಾಡಿಕೊಳ್ಳಿ?

 ಆತ್ಮೀಯ ಬಾಂಧವರೇ,  ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಕರ್ನಾಟಕ ರಾಜ್ಯದ ಮಹಿಳೆಯರ ಖಾತೆಗಳಿಗೆ ಜಮೆಯಾಗಿದ್ದು, ಆಧಾರ್ ಕಾರ್ಡ್ ನಂಬರ್ ಮೂಲಕ ಯಾವ ಖಾತೆಗೆ ಜಮೆಯಾಗಿದೆ ಎಂದು ಕೂಡಲೇ ಚೆಕ್ ಮಾಡಿಕೊಳ್ಳಿ.

 ಕರ್ನಾಟಕ ರಾಜ್ಯದ ರೇಷನ್ ಕಾರ್ಡ್ ಹೊಂದಿರುವಂತಹ ಪ್ರತಿಯೊಂದು ಕುಟುಂಬದ (T&C) ಮುಖ್ಯಸ್ಥರಾದಂತಹ ಮಹಿಳೆಯರಿಗೆಪ್ರತಿ ತಿಂಗಳು 2000ಗಳನ್ನು ನೀಡುವಂತಹ ಯೋಜನೆ ಆದಂತಹ ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳು ಈಗಾಗಲೇ ಮಹಿಳೆಯರ ಖಾತೆಗಳಿಗೆ ಜಮೆಯಾಗಿದ್ದು,  ಎರಡನೇ ಕಂತಿನ ಹಣ ಈಗ ತಾನೆ ಬಿಡುಗಡೆಯಾಗಿದ್ದು ಆಧಾರ್ ಕಾರ್ಡ್ ನಂಬರ್ ಮೂಲಕ ಯಾವ ಖಾತೆಗೆ ಜಮೆಯಾಗಿದೆ ಎಂದು ಕೂಡಲೇ ಚೆಕ್ ಮಾಡಿಕೊಳ್ಳಿ.

ಇದನ್ನು ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕುವ ಮೂಲಕ ಸರಳವಾಗಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಬನ್ನಿ ಹೇಗೆ ಚೆಕ್ ಮಾಡಬಹುದು ಎಂದು ತಿಳಿದುಕೊಳ್ಳೋಣ.

– ಮೊಟ್ಟ ಮೊದಲು ಆಧಾರ್ ಕಾರ್ಡನ್  ಅಧಿಕೃತ ಸ್ಥಾನವಾದಂತಹ UIADI ge ಭೇಟಿ ನೀಡಿ.

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ: https://resident.uidai.gov.in/bank-mapper

ಅಲ್ಲಿ ಕೇಳುವಂತಹ ನಿಮ್ಮ 12 ಸಂಖ್ಯೆಯ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ,  ಕ್ಯಾಚ್ಪಕೋಡನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ

ಆಗ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ  ಜೋಡಣೆ ಆಗಿರುವಂತಹ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ.

ಆ ಒಟಿಪಿಯನ್ನು ನೀವು ಅಲ್ಲಿ ನಮೂದಿಸುವ ಮೂಲಕ  ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಖಾತೆಗೆ ಜಮ ಆಗಲಿದೆ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

ಈ ಖಾತೆ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿದ್ದು, ಸರ್ಕಾರದಿಂದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ಬರುವಂತಹ ಎಲ್ಲಾ ಯೋಜನೆಗಳ ಸಹಾಯಧನ ಈ ಖಾತೆಗಳಿಗೆ  ಜಮೆಯಾಗಲಿವೆ.

 ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ತಾವು ಹೇಳಿರುವಂತಹ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರ ಪಣತೊಟ್ಟಿದ್ದು ಈಗಾಗಲೇ 4 ಯೋಜನೆಗಳನ್ನು ಜಾರಿಗೆ ತಂದಿದ್ದು ಇನ್ನೊಂದು ಯೋಜನೆ ಬಾಕಿ ಇದೆ.

 ಅದರಲ್ಲಿ ಒಂದು ಪ್ರಮುಖ ಯೋಜನೆಯದಂತಹ ಗೃಹಲಕ್ಷ್ಮಿ ಅಂದರೆ ಮನೆಯ ಮುಖ್ಯಸ್ಥ ಮಹಿಳೆಗೆ ಪ್ರತಿ ತಿಂಗಳು 2000ಗಳನ್ನು ನೀಡುವಂತಹ ಒಂದು ಅದ್ಭುತ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ಕರ್ನಾಟಕ ರಾಜ್ಯದ ಸಮಸ್ತ ಜನತೆಗೆ ಅನುಕೂಲಕರವಾಗಿದೆ.

 

Leave a Comment