ಈರುಳ್ಳಿ ಬೆಳೆಗಾರರಿಗೆ ಸಿಹಿ ಸುದ್ದಿ :ಆಗಸ್ಟ್ ಅಂತ್ಯಕ್ಕೆ ಈಗ ಟೊಮ್ಯಾಟೊ ನಂತರ ಈಗ ಈರುಳ್ಳಿ ಬೆಲೆ ಏರಿಕೆ:ಕೆಜಿಗೆ 60-70 ರೂಪಾಯಿ ಆಗುವ ಸಾಧ್ಯತೆ

ಆತ್ಮೀಯ ರೈತ ಬಾಂಧವರೇ, ನೀವೇನಾದರೂ ಈ ಬಾರಿ ಈರುಳ್ಳಿಯನ್ನು(onion) ಬೆಳೆದಿದ್ದರೆ ನಿಮಗಾಗಿ ಸದ್ಯದಲ್ಲೇ ಸಿಹಿ ಸುದ್ದಿ ಕಾದು ಕೊಡುತ್ತಿದೆ, ತಮಗೆಲ್ಲ ಗೊತ್ತಿರುವ ಹಾಗೆ ಈಗ ನಮ್ಮ ದೇಶದಲ್ಲಿ ಟೊಮ್ಯಾಟೋ ಬೆಳೆದಂತಹ ರೈತರು ಕೆಲವೇ ದಿನಗಳಲ್ಲಿ ಕೋಟ್ಯಾಧಿಪತಿಗಳಾಗಿದ್ದಾರೆ.

ಅದೇ ಹಾದಿಯಲ್ಲಿ ಈರುಳ್ಳಿ ಬೆಳೆದಂತಹ ರೈತರು ಸಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ, ಏಕೆಂದರೆ ತಮಗೆ ಗೊತ್ತಿರುವ ಹಾಗೆ ಟೊಮ್ಯಾಟೋ ದರವು ನೂರು ರೂಪಾಯಿಯನ್ನು ದಾಟಿತು, ತಿರಿಗಾ ಟೊಮ್ಯಾಟೋ ದರ ಕೊಂಚ ಇಳಿಕೆ ಆಗುತ್ತಿರುವ ಸಮಯದಲ್ಲಿ ಆಗಸ್ಟ್ ಅಂತ್ಯಕ್ಕೆ ಇರುವೆ ಬೆಲೆ ದುಬಾರಿಯಾಗಲಿದೆ ಎಂದು ಕ್ರಿಸೇಲ್ ಸಂಸ್ಥೆ ಅದೇನೋ ವರದಿ ಎಂದು ಹೇಳಿದೆ.

ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಟೊಮೇಟೊ ಕೆಜಿಗೆ ೨೫೦ ರೂ.ಗೆ ತಲುಪಿದ ಬೆನ್ನಲ್ಲೇ ಈಗ ಆಗಸ್ಟ್ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕ್ರಿಸಿಲ್ ವರದಿ ತಿಳಿಸಿದೆ.

ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಕಡಿಮೆಯಾಗುತ್ತಿರುವ ಕಾರಣ ಮುಂದಿನ ತಿಂಗಳು ಈರುಳ್ಳಿ ಬೆಲೆ ಕೆಜಿಗೆ ೬೦-೭೦ ರೂ. ಗೆ ಏರಬಹುದು ಎಂದು ವರದಿ ಹೇಳಿದೆ. ಆದಾಗ್ಯೂ, ಬೆಲೆಗಳು ೨೦೨೦ ರ ಗರಿಷ್ಠಕ್ಕಿಂತ ಕಡಿಮೆ ಇರುತ್ತದೆ. ಎ೦ದು ಅದು ಹೇಳಿದೆ.

ಈರುಳ್ಳಿಯ ಪುರೈಕೆ ಹಾಗೂ ಬೇಡಿಕೆಯಲ್ಲಿನ ಅಸಮತೋಲನವು ಅಗಸ್ಟ್ ತಿಂಗಳ ಕುಣಿಯಲ್ಲಿ ಹೆಚ್ಚಾಗಲಿದ್ದು ಆ ಕಾರಣಗಳಿಂದಾಗಿ ಆಗಸ್ಟ್ ತಿಂಗಳ ಕೊನೆಯ ವೇಳೆಗೆ ಆಗಲಿದೆ ಎಂದು ಸಂಸ್ಥೆಯ ವರದಿಯೊಂದು ತಿಳಿಸಿದೆ.

ತಳಮಟ್ಟದಲ್ಲಿ ನಡೆಸಿದಂತಹ ಮಾತುಗತೆಗಳ ಪ್ರಕಾರ ರಿಟೇಲ್ ಮಾರುಕಟ್ಟೆಯಲ್ಲಿ ನಾವು ನೋಡುವುದಾದರೆ ಸೆಪ್ಟೆಂಬರ್ ಆರಂಭದಿಂದ ಬೆಲೆ ಹೆಚ್ಚಾಗಲಿದ್ದು ಸರಿ ಸುಮಾರು 60 ರಿಂದ 70 ರೂಪಾಯಿಗಳವರೆಗೆ ತಲುಪಬಹುದು ಎಂದು ಕ್ರಿಶಲ್ ಮಾರ್ಕೆಟ್ ಇಂಟೆಲಿಜೆನ್ಸ್ ಅಂಡ್ ಅನಾಲಿಟಿಕ್ಸ್ ಸಿದ್ದಪಡಿಸಿರುವ ವರದಿಯು ತಿಳಿಸಿದೆ.

ಇನ್ನೊಂದು ಪ್ರಮುಖ ಅಂಶವನ್ನು ನಾವು ಇಲ್ಲಿ ಗಮನಿಸಬೇಕೆಂದರೆ ಆಗಸ್ಟ್ ಆಗೋ ಸೆಪ್ಟೆಂಬರ್ ತಿಂಗಳ ಮಳೆಯ ಪ್ರಮಾಣವೂ ಈರುಳ್ಳಿ ಬೆಳೆಯ ಇದರ ಎಷ್ಟು ಹೆಚ್ಚಾಗಲಿದೆ ಎಂಬುದನ್ನು ತೀರ್ಮಾನಿಸದಲ್ಲಿದೆ ಎಂದು ವರದಿಯು ತಿಳಿಸಿದೆ.

ಪ್ರಸಕ್ತ ಈರುಳ್ಳಿಯ ದರ

ದಪ್ಪ :1400-1800

ಮಾಧ್ಯಮ :1246-1400

ಸಣ್ಣ :800-1200

Leave a Comment