bele parihara

ಗದಗ, ೨ : ಮುಂಡರಗಿ ತಾಲೂಕು ಗ್ರಾಮದ ರೈತರು ೨೦೧೬-೧೭ನೇ ಹಿಂಗಾರು ಹಂಗಾಮಿನಲ್ಲಿ  ಖುಷ್ಕಿ ಜಮೀನುಗಳಲ್ಲಿ ಬೆಳದ ಜೋಳ ಮತ್ತು ಕಡಲೆ ಬೆಳೆಗಳಿಗೆ ವಿಮೆ ಮಾಡಿಸಿದ್ದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಶಾಖೆಯಲ್ಲಿ ವಿಮೆ ಹಣದ ಜೊತೆ ಅರ್ಜಿ ಸಲ್ಲಿಸಿದ್ದರು. ಆ ಅವಧಿಯಲ್ಲಿ ಮಳೆ ಬಾರದೆ ಬೆಳೆಗಳು ವಣಗಿ ಪಸಲು ಬಾರದೆ ನಷ್ಟ ಉಂಟಾಗಿತ್ತು. ಅನೇಕ ಸಲ ಸಂಬಂಧ ಪಟ್ಟ ಇಲಾಖೆಗಳಲ್ಲಿ ವಿಮಾ ಪರಿಹಾರ ಕೊಡಲು ಕೋರಿದರೂ ಪರಿಹಾರ ನೀಡ‌ಲಿಲ್ಲ. ರೈತರು ರಸ್ತೆ ರೊಕ್ ಚಳುವಳಿ ಮಾಡಿದಾಗ ಜಿಲ್ಲಾಡಳಿತ ರೈತರಿಗೆ ಕೊಡಿಸುವುದಾಗಿ ಬರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳು ಆಯುಕ್ತರ ಕೃಷಿ ಇಲಾಖೆ, ಬೆಂಗಳೂರು, ಇವರಿಗೆ ಖುಷಿ ಜಮೀನಿನಲ್ಲಿ ಬೆಳೆದ ಬೆಳೆಗಳು ಮಳೆ ಬಾರದೆ ಹಾನಿಯಾಗಿರುವುದರಿಂದ ರೈತರಿಗೆ ಪರಿಹಾರ ಕೊಡಲು ಪತ್ರ ಬರೆದಿದ್ದರು. ಕೃಷಿ ವಿಮಾದ ಕಂಪನಿಯವರು ಮೂರು ವರ್ಷಗಳ ನಂತರ ೨೦೧೯ರಲ್ಲಿ ರೈತರ ಬ್ಯಾಂಕ ಖಾತೆಗೆ ನೀರಾವರಿ ಬೆಳೆ ನಷ್ಟ ಆದ ಬಗ್ಗೆ ಹಣ ಜಮಾ ಮಾಡಿದ್ದರು. ರೈತರು ಖುಷ್ಕಿ ಜಮೀನಿಗೆ ವಿಮೆ ಹಣ ಪಾವತಿ ಮಾಡಿದ್ದರೂ ಸಹಃ, ಬ್ಯಾಂಕಿನವರು ನೀರಾವರಿ ಬೆಳೆಯ ವಿಮೆ ಹಣ ಅಂತಾ ನಿರ್ಲಕ್ಷದಿಂದ ತಪ್ಪು ದಾಖಲು ಮಾಡಿ ವಿಮಾ ಕಂಪನಿಗೆ ಕಳಿಸಿದ್ದಾರೆ ಮತ್ತು ವಿಮಾ ಕಂಪನಿ ದಾಖಲೆಗಳನ್ನು ಪರಿಶೀಲಿಸದೆ, ನೀರಾವರಿ ಬೆಳೆ ನಷ್ಟ ಅಂತಾ ಕಡಿಮೆ ಹಣ ಜಮಾ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಆಯೋಗದ ಅಧ್ಯಕ್ಷ ಡಿ. ವಾಯ್, ಬಸಾಪುರ, ಸದಸ್ಯ ರಾಜು ನಾಮದೇವ ಮೇತ್ರಿ ಹಾಗೂ ಮಹಿಳಾ ಸದಸ್ಯಣಿ ಶ್ರೀಮತಿ ಯಶೋಧಾ ಭಾಸ್ಕರ ಪಾಟೀಲರವರನ್ನು ಒಳಗೊಂಡ ಪೀಠವು ಸುದೀರ್ಘ ವಿಚಾರಣೆ ಮಾಡಿ, ರೈತರು ಹಾಜರ ಪಡಿಸಿದ ಪಹಣಿಗಳನ್ನು ಹಾಗೂ ಜಿಲ್ಲಾಧಿಕಾರಿ ರೈತರು ಖುಷಿ ಜಮೀನುಗಳಲ್ಲಿ ಬೆಳೆದ ಜೋಳ ಮತ್ತು ಕಡಲೆ ಬೆಳೆಗೆ ಪರಿಹಾರ ನೀಡಲು ಸಲ್ಲಿಸಿದ ವರದಿಯನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನವರು ಮತ್ತು ಕೃಷಿ ವಿಮಾ ಕಂಪನಿಯವರು ಕುಲಂಕುಷವಾಗಿ ಪರಿಶೀಲಿಸಿ ಖುಷ್ಕ ಬೆಳೆಗಳಿಗೆ ವಿಮಾ ಪರಿಹಾರ ನೀಡದೆ, ನೀರಾವರಿ ಬೆಳೆಗೆ ಕಡಮೆ ಹಣ ನೀಡಿ ಸೇವಾ ನ್ಯೂನ್ಯತೆ ಎಸಗಿದ್ದು ಸಾಬೀತಾಗಿದೆ ಅಂತಾ ತೀರ್ಪು ನೀಡಿದ್ದಾರೆ.

 ರೈತರಿಗೆ ಖುಷ್ಕಿ ಬೆಳೆಗಳ ಹಾನಿಯಾದ ಬಗ್ಗೆ ಪರಿಹಾರ ಕೊಡಲು ಆದೇಶಿಸಿದೆ. ರೈತರ ಖಾತೆಗೆ ಈಗಾಲೇ ಜಮಾ ಮಾಡಿದ ಹಣ ವಜಾ ಮಾಡಿ ಉಳಿದ ಹಣವನ್ನು ಎರಡು ತಿಂಗಳ ಒಳಗಾಗಿ ಕೊಡಲು ಆದೇಶಿಸಿದೆ. ದೂರುದಾರರು ಆಯೋಗಕ್ಕೆ ಅಲೆದಾಡಿ ಮಾನಸಿಕ ಹಿಂಸೆ ಅನುಭವಿಸಿದ್ದರಿಂದ, ರೂ.೫,೦೦೦/-ಗಳು ಹೆಚ್ಚಿನ ಪರಿಹಾರ ಹಾಗೂ ಪ್ರಕರಣದ ಖರ್ಚು ರೂ.೨,೦೦೦/-ಗಳನ್ನು ಕೊಡಲು ಆದೇಶ ಮಾಡಿದೆ.

 

By Raju

Leave a Reply

Your email address will not be published. Required fields are marked *