ಕೇರಳ ತಲುಪಿದ ಮುಂಗಾರು : ಇನ್ನು 3-4 ದಿನಗಳಲ್ಲಿ ಕರ್ನಾಟಕಕ್ಕೆ ಪ್ರವೇಶ ಸಾಧ್ಯತೆ

ಆತ್ಮೀಯ ರೈತ ಬಾಂಧವರೇ, ಈಗಾಗಲೇ ಇಷ್ಟೊತ್ತಿಗೆ ಮುಂಗಾರು ಪ್ರಾರಂಭವಾಗಬೇಕಿತ್ತು, ಆದರೆ ಈ ಬಾರಿ ಕುಂಟೆ ತಡವಾಗಿರುವ ಕಾರಣಗಳಿಂದಾಗಿ ಮುಂಗಾರು ತಡವಾಗಿದೆ. ಇದೀಗ ಮುಂಗಾರು ಕೇರಳ ರಾಜ್ಯವನ್ನು ತಲುಪಿದ್ದು, ಇನ್ನು ಮೂರು ನಾಲ್ಕು ದಿನಗಳಲ್ಲಿ ಕರ್ನಾಟಕವನ್ನು ತಲುಪುವ ಸಾಧ್ಯತೆ ಇದೆ.

ನಿನ್ನೆಯವರೆಗೆ ಮುಂಗಾರು ಪ್ರಗತಿ ನಿಧಾನವಾಗಿತ್ತು, ಆದರೆ ಕಳೆದ 48 ಗಂಟೆಗಳಲ್ಲಿ ಮುಂಗಾರು ದಕ್ಷಿಣ ಅರಬ್ಬಿ ಸಮುದ್ರದ ಕೆಲವು ಭಾಗ, ಮಾಲ್ಡಿವ್ / ಕೊಮೊರಿನ್ ಪ್ರದೇಶಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ (ನಕ್ಷೆಯಲ್ಲಿ ದಪ್ಪ ನೀಲಿ ರೇಖೆ ನೋಡಿ). ಜೊತೆಗೆ ದಕ್ಷಿಣ ಬಂಗಾಳ ಕೊಲ್ಲಿ & ಪೂರ್ವ-ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಕೂಡ ಮುಂದುವರೆದಿದೆ.

ಈಗ, ಅರಬ್ಬಿ ಸಮುದ್ರದಲ್ಲಿ ಪರಿಚಲನೆ ವ್ಯವಸ್ಥೆ (cyclonic circulation) ಅಭಿವೃದ್ಧಿ ಹೊಂದುತ್ತಿದೆ, ಆದರೆ ಇದು ಭೂಪ್ರದೇಶದಿಂದ ದೂರ ಸರಿಯುವ ಸಾಧ್ಯತೆ, ಮುಂಗಾರು ಮತ್ತಷ್ಟು ಮುಂದುವರೆದಂತೆ, ಜೂನ್ 5ರ ಸುಮಾರಿಗೆ ಅಗೇಯ ಅರಬ್ಬಿ ಸಮುದ್ರದಲ್ಲಿ ಇದು ಚಂಡಮಾರುತ ಪರಿಚಲನೆಯಾಗಿ ಬೆಳೆಯುವ ಸಾಧ್ಯತೆ & ಅದೇ ಪ್ರದೇಶದಲ್ಲಿ ಇದು ಮುಂದಿನ 48 ಗಂಟೆಗಳಲ್ಲಿ ಕಡಿಮೆ ಒತ್ತಡದ ಪ್ರದೇಶಕ್ಕೆ ತಿರುಗಬಹುದು.

ಸದ್ಯಕ್ಕೆ ಮುಂಗಾರು ಜೂನ್ 4 ರಂದು ಕೇರಳ ತಲುಪುವ ಸಾಧ್ಯತೆ. ನಂತರ ಕರ್ನಾಟಕ ತಲುಪಲು ಇನ್ನೂ 3-4 ದಿನಗಳು ಬೇಕಾಗುತ್ತದೆ.

 

Leave a Comment