ಅ.15ಕ್ಕೆ ಮುಂಗಾರು ಮುಕ್ತಾಯ: ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ

ಅಕ್ಟೋಬರ್ 15ಕ್ಕೆ ಪ್ರಸಕ್ತ ಸಾಲಿನ ಮುಂಗಾರು ಮಳೆ ಅವಧಿ ಮುಕ್ತಯಗೊಳ್ಳಲಿದೆ. ಕರ್ನಾಟಕದ ಲ್ಲಿಯೂ ಸೆ.25ರಿಂದ ಮಳೆ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಾ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.

ಮಧ್ಯ ಭಾರತ ಮತ್ತು ದೇಶದ ವಾಯುವ್ಯ ಹಾಗೂ ಪಶ್ಚಿಮ ಭಾಗದಲ್ಲಿಯಂತೂ ಈಗಾಗಲೇ ಮಳೆ ಪ್ರಮಾಣ ಬಹುತೇಕ ತಗ್ಗಿದೆ.

ರಾಜಸ್ಥಾನ ಭಾಗದಿಂದ ಸೆ.25ರಿಂದ ಇನ್ನಷ್ಟು ಕಡಿಮೆ ಆಗಲಿದೆ ಎಂದು ಐಎಂಡಿ ತಿಳಿಸಿದೆ.ಹೀಗಾದಲ್ಲಿ ಪ್ರಸ್ತುತ ಕೃಷಿ ಭೂಮಿಯಲ್ಲಿರುವ ಬೆಳೆಗಳ ಇಳುವರಿಗೆ ಭಾರೀ ಪೆಟ್ಟು ಬೀಳಲಿದೆ. ಆಹಾರ ಧಾನ್ಯಗಳ ಉತ್ಪಾದನೆ ಕುಸಿಯಲಿದೆ ಎಂಬ ಆತಂಕ ವ್ಯಕ್ತವಾಗಿದೆ.

 

Leave a Comment