Mailara Lingeshwar Karnika 2023

“ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣಿ ಕಟ್ಟಿತಲೇ ಪರಾಕ್”! ಎಂಬ ನುಡಿಯನ್ನು ಐತಿಹಾಸಿಕ ಸ್ಥಳವಾದ ದೇವರಗುಡ್ಡದ ಗೊರವಜ್ಜನ ಕಾರ್ಣಿಕ ಇದಾಗಿದೆ. ಈ ನುಡಿಯು ರೈತರ ಬರಗಾಲದ ಸಂಕಷ್ಟದ ಬಗ್ಗೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿದವರು ಹೇಳಿದ್ದಾರೆ.

 ಈ ಕಾರ್ಣಿಕ ನುಡಿಯನ್ನು ಕೇಳಲು ಕರ್ನಾಟಕ ರಾಜ್ಯದ ವಿವಿಧ ಮೂಲೆಗಳಿಂದ ಅನೇಕ ಭಕ್ತಾದಿಗಳು ಆಗಮಿಸಿದ್ದರು.

ಈ ಕಾರ್ಣಿಕ ನುಡಿಯ ಅರ್ಥವೇನು?

 ಮುಕ್ಕೋಟಿ ಚೆಲ್ಲಿತಲೆ ಅಂದರೆ ಭೀಕರ ಬರಗಾಲದ ಮುನ್ಸೂಚನೆ,

 ರೈತರ ತಮ್ಮ ಬೆಳಗಳಿಗೆ ಹಾಕಿದ ಬಂಡವಾಳ ನಮ್ಮ ಕೈಗೆ ಸಿಗದೇ ಇರುವುದು ಮತ್ತು ಕಲ್ಯಾಣಿ ಕಟ್ಟಿತಲೆ ಎಂದರೆ ಕಲ್ಯಾಣಿ ಎಂದರೆ ಒಬ್ಬ ಹೆಣ್ಣು ಮಹಿಳೆ, ಹೆಣ್ಣು ಮಹಿಳೆಯಿಂದ ಪ್ರಸ್ತುತ ರಾಜಕಾರಣವು ಅಲ್ಲೋಲ ಕಲ್ಲೋಲವಾಗಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. 

 ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐತಿಹಾಸಿಕ ಸ್ಥಳವಾದ ದೇವರಗುಡ್ಡದಲ್ಲಿ ಪ್ರತಿ ವರ್ಷ ನಡೆಯುವಂತೆ ಈ ವರ್ಷವೂ ಕೂಡ ಕಾರ್ಣಿಕೋತ್ಸವ ನಡೆಯಿತು. ಈ ಕಾರ್ಣಿಕೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ  ದೇವರ ಕಾರ್ಣಿಕ ನುಡಿಯನ್ನು ಕೇಳಲು ಭಕ್ತಾದಿಗಳು ಆಗಮಿಸಿದ್ದರು.

 ಈ ವರ್ಷದ ಕಾರ್ಣಿಕ ನುಡಿ ಏನೆಂದರೆ  ” ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣಿ ಕಟ್ಟಿತಲೇ ಪರಾಕ್ ” ಎಂದರೆ ರಾಜ್ಯದಲ್ಲಿ ಎದುರಾಗಿರುವ ಬರಗಾಲದಿಂದ ರೈತರ ಬಾಳು ಹದಗೆಟ್ಟಿದೆ, ರೈತರು ಹಾಕಿದ ಬಂಡವಾಳ ಸಿಗದೇ, ರೈತರ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಗೊರವಜ್ಜನವರು ಕಾರ್ಣಿಕ ನುಡಿಯನ್ನು ಹೇಳಿದ್ದಾರೆ.

 ಮೊನ್ನೆ ಸೋಮವಾರ ದೇವರಗುಡ್ಡದಲ್ಲಿ  ಪ್ರತಿ ವರ್ಷ ನಡೆಯುವಂತೆ ಈ ವರ್ಷವೂ ಕೂಡ ಕಾರ್ಣಿಕೋತ್ಸವ ಅದ್ದೂರಿಯಾಗಿ ನಡೆಯಿತು. ಈ ವರ್ಷದ ಕಾಣಿಕೋತ್ಸವ ನುಡಿಯನ್ನು  ಗೊರವಪ್ಪಜ್ಜ ನಾಗಪ್ಪ ದುರುಗಪ್ಪ ಉರ್ಮಿ ಯವರು ನುಡಿದರು. ಈ ಕಾಣಿಕೋತ್ಸವ ನಡೆಯುವಾಗ ಗೊರವಜ್ಜನವರು

 ಸುಮಾರು 15 ಅಡಿ ಎತ್ತರವಿರುವ ಬಿಲ್ಲನ್ನು ಏರಿ ಕಾರ್ಣಿಕ ನುಡಿಯನ್ನು ನೋಡಿದ ಕೆಳಗೆ ಹಾರುತ್ತಾರೆ. ಅವರ ಕೆಳಗೆ ಹಾರಿದ ಮೇಲೆ ಸಹಸ್ರಾರು ಭಕ್ತಾದಿಗಳು ಅವರನ್ನು ಕೈಯಿಂದ ಹಿಡಿದುಕೊಳ್ಳುತ್ತಾರೆ.

9 ದಿನದ ಕಟ್ಟುನಿಟ್ಟಿನ ಉಪವಾಸ:

 ದೇವರಗುಡ್ಡದ ಮಾಲತೇಶ ದೇವಸ್ಥಾನವು ಅನೇಕ ವರ್ಷಗಳ ಐತಿಹಾಸಿಕ ಇತಿಹಾಸವನ್ನು ಹೊಂದಿದೆ. ದಸರಾ ಹಬ್ಬದ ಸಮಯದಲ್ಲಿ ನಡೆಯುವ ಈ ಕಾರ್ಣಿಕೋತ್ಸವಕ್ಕೆ, ಗೊರವಜ್ಜನವರಾದ ನಾಗಪ್ಪ ದುರುಗಪ್ಪ ಉರ್ಮಿಯವರು ಸುಮಾರು 9 ದಿನಗಳ ಕಟ್ಟುನಿಟ್ಟಿನ ಉಪವಾಸ ವೃತವನ್ನು ಪಾಲಿಸುತ್ತಾರೆ. 

ಕಾರ್ಣಿಕೋತ್ಸವದ ದಿನದಂದು ಅಜ್ಜನವರನ್ನು ಚಾಟಿ ಡಮರುಗ ಡೊಳ್ಳು ತಮಟೆ ಮುಂತಾದ ವಾದ್ಯಗಳಿಂದ ಅಜ್ಜನವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬರುತ್ತಾರೆ. ಕಾರ್ಣಿಕೋತ್ಸವದ ಸ್ಥಳಕ್ಕೆ ಬಂದ ಮೇಲೆ “ಸದ್ದಲೇ ” ಎಂದು ನುಡಿದ ತಕ್ಷಣ, ಭಕ್ತಾದಿಗಳು ಮೌನವಾಗುತ್ತಾರೆ, ನಂತರ ಗೊರವಜ್ಜನವರು ಎತ್ತರದ ಬಿಲ್ಲನ್ನೇರಿ ಕಾರ್ಣಿಕವನ್ನು ನುಡಿಯುತ್ತಾರೆ.

Read these also:

1.Gruhalakshmi :ಗೃಹಲಕ್ಷ್ಮಿ ಹಣ ಇನ್ನೂ ನಿಮ್ಮ ಖಾತೆಗೆ ಜಮೆ ಆಗಿಲ್ಲವೇ? ರೇಷನ್ ಕಾರ್ಡ್ ನೊಂದಿಗೆ ಕೂಡಲೇ ಈ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ – ಯಾವ ಇಲಾಖೆ ಗೊತ್ತಾ?

ತ್ಮೀಯ ಬಾಂಧವರೇ,ಗೃಹಲಕ್ಷ್ಮಿ(Gruhalakshmi) ಯೋಜನೆಯ(Scheme) ಎರಡು ಕಂತುಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು ಇನ್ನೂ ಕೂಡ ಹಣವನ್ನು ಪಡೆಯದಂತಹ ಫಲಾನುಭವಿಗಳು ಯಾವ ಇಲಾಖೆಗೆ ಭೇಟಿಯಾಗಬೇಕು ಇಲ್ಲಿದೆ ನೋಡಿ ಮಾಹಿತಿ.

ಆತ್ಮೀಯ ರೈತ ಬಾಂಧವರೇ,  ಮಳೆಗಾಗಿ  ಕಾದು ಕುಳಿತಿರುವಂತಹ ರೈತರಿಗೆ  ಹವಾಮಾನ ಇಲಾಖೆಯು(IMD)  ದಸರಾ(DASARA) ಹಬ್ಬಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದು,  ಅದೇನೆಂದರೆ ರಾಜ್ಯದಲ್ಲಿ ಭಾರಿ ಮಳೆ(HEAVY RAIN) ನಿರೀಕ್ಷೆ  ಎಂದು ಹವಾಮಾನ ಇಲಾಖೆಯು(IMD) ಮುನ್ಸೂಚನೆಯನ್ನು(FORECAST) ನೀಡಿದೆ.

3.Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ  ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು,  ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

4.crop insurance: 2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು .

ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.

 

By Raju

10 thought on “Mailara Lingeshwar Karnika 2023: ರೈತರ ಕಷ್ಟದ ಬಗ್ಗೆ ಭವಿಷ್ಯ ಹೇಳಿದ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಕಾರ್ಣಿಕ.”

Leave a Reply

Your email address will not be published. Required fields are marked *