fid

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ರಾಜ್ಯದಲ್ಲಿ ಬರ ಘೋಷಿಸಿ ಹಲವಾರು ತಿಂಗಳು ಕಳೆದು ಹೋದರು ಇನ್ನೂ ಕೂಡ ಬೆಳೆ ಪರಿಹಾರದ ಹಣ ರೈತರ ಖಾತೆಗಳಿಗೆ ಸೇರಿಲ್ಲ.

ಒಂದು ಕಡೆ ಕೇಂದ್ರ ಸರ್ಕಾರದಿಂದ ಸಹಾಯಧನಕ್ಕಾಗಿ ಕಾದು ಕುಳಿತಿರುವ ರಾಜ್ಯ ಸರ್ಕಾರ, ಇನ್ನೊಂದೆಡೆ ರೈತರ ಸಂಪೂರ್ಣ ಮಾಹಿತಿ ಇಲ್ಲವಾಗಿರುವಂತಹ ಕಾರಣ.

 ಏಕೆಂದರೆ ರಾಜ್ಯದ ರೈತರ ಎಲ್ಲರೂ FID  ಮಾಡಿಸಿಕೊಂಡಿಲ್ಲ, ಒಂದು ವೇಳೆ ಮಾಡಿಸಿಕೊಂಡರೂ ಕೂಡ ಸಂಪೂರ್ಣವಾಗಿ ತಮ್ಮ ಹೆಸರಿನಲ್ಲಿ ಇರುವಂತಹ ಎಲ್ಲಾ ಜಮೀನುಗಳನ್ನು ಅದರೊಂದಿಗೆ ಲಿಂಕ್ ಮಾಡಿಲ್ಲ ಹೀಗಾಗಿ ಬೆಳೆ ಪರಿಹಾರ ವಿತರಿಸುವುದು ಕೊಂಚ ತಡವಾಗಿದೆ.

ಇದೀಗ ರಾಜ್ಯ ಸರ್ಕಾರ ನವೆಂಬರ್ 29ರ ಒಳಗಾಗಿ ಎಫ್ ಐ ಡಿ ಲಿಂಕ್   ಮಾಡಿಸಬೇಕಾಗಿ ರೈತರಲ್ಲಿ ಕೇಳಿಕೊಂಡಿದೆ. 

ನೀವೇನಾದರೂ ಹೊಸ ಎಫ್ ಐ ಡಿ ಅಥವಾ ಎಫ್ ಐ ಡಿ ಗೆ ಜಮೀನನ್ನು ಸೇರಿಸಬೇಕಾದರೆ ನಿಮ್ಮ ಹತ್ತಿರದ ಗ್ರಾಮವನ್ನು ಅಥವಾ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯಿಂದ ಮಾಡಿಸಿಕೊಳ್ಳಬಹುದಾಗಿದೆ.

 ಒಂದು ವೇಳೆ fid ಯಿಂದ ಜಮೀನನ್ನು ಡಿಲೀಟ್ ಮಾಡಬೇಕಾದರೆ ನೀವು ಕಡ್ಡಾಯವಾಗಿ ಕೃಷಿ ಇಲಾಖೆಗೆ ಭೇಟಿ ನೀಡಿ ಮಾಡಿಸಬೇಕು.

ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಬರ ಪರಿಹಾರದ ಹಣವನ್ನು ರೈತರ ಖಾತೆಗಳಿಗೆ ಜಮೀನು ಮಾಡಲಿದೆ ಹಾಗಾಗಿ ಪ್ರತಿಯೊಬ್ಬ ರೈತರು ಕೂಡಲೇ ತಮ್ಮ ಎಫ್ ಐಡಿ ಮಾಡಿಸಿ ಅದಕ್ಕೆ ತಮ್ಮ ಹೆಸರಿನಲ್ಲಿರುವಂತಹ ಸಂಪೂರ್ಣ ಜಮೀನಿನ ಸರ್ವೆ ನಂಬರ್ ಗಳನ್ನು ಕೂಡಿಸಬೇಕಾಗಿ ವಿನಂತಿ.

Read this also:

ಬರಗಾಲದಿಂದ ಸಂಕಷ್ಟದಲ್ಲಿರುವಂತಹ ರೈತರಿಗೆ ಇದು ಸಿಹಿ ಸುದ್ದಿ ಎಂದೇ ಹೇಳಬಹುದು. ಇಲ್ಲಿಯವರೆಗೂ ಮುಂಗಾರಿನ  ಬೆಳೆ ಇಲ್ಲದೆ ಹಿಂಗಾರಿ  ಬೆಳೆ ಕೂಡ ಅಷ್ಟಕ್ಕೆ ಅಷ್ಟು ಇದ್ದು ರೈತನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ.

ಹಾಗಾಗಿ ಇದೀಗ ಮಧ್ಯಾಂತರ ಬೆಳೆವಿಮೆ ಬಿಡುಗಡೆಯಾಗುತ್ತಿದ್ದು  ಆರ್ಥಿಕ ಸಂಕಷ್ಟದಲ್ಲಿ ಇರುವಂತಹ.. ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಆ ಜಿಲ್ಲೆಗಳಲ್ಲಿ ಬೆಳೆಯುವಂತಹ ಪ್ರಮುಖ ಬೆಳೆಗಳು  ಹಾಗೂ ಅವುಗಳ  ಪರಿಸ್ಥಿತಿಗಳ ಆದರದ ಮೇಲೆ ಮಧ್ಯಾಹ್ನ ಬಿಡುಗಡೆಯಾಗುತ್ತಿದ್ದು  ಬನ್ನಿ ಹಾಗಾದರೆ ಇವತ್ತು ವಿಜಯನಗರ ಜಿಲ್ಲೆಯ ಪರಿಸ್ಥಿತಿಯನ್ನು ನೋಡೋಣ.

 ವಿಜಯನಗರ ಜಿಲ್ಲೆಯಲ್ಲಿ ಬರಗಾಲದ ಹೊಡೆತದಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಂತಹ ರೈತರು ಹಿಂಜರಗದೆ  ಬೆಳೆ ವಿಮೆಯನ್ನು ಮಾಡಿಸಿದ್ದರು,. ಜಿಲ್ಲೆಯ 26,254 ರೈತರು ವಿವಿಧ ಬೆಳೆಗಳಿಗೆ ಬೆಳೆವಿಮೆಯನ್ನು ಮಾಡಿಸಿದ್ದು ಅವರಿಗೆ ಮಧ್ಯಾಹ್ನದ ಬೆಳೆ ವಿಮೆ ಪರಿಹಾರವಾಗಿ 19.27  ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ.

ಆನ್ಲೈನ್ ಮೂಲಕ ನಿಮ್ಮ ಖಾತೆಗಳಿಗೆ ಎಷ್ಟು ಬೆಳೆ ವಿಮೆಯ ಹಣ ಜಮೆಯಾಗಿದೆ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/

ವರ್ಷ ಹಾಗೂ ಋತು ಆಯ್ಕೆ ಮಾಡಿ

ವರ್ಷ:2023-24

ಋತು:kharif /ಮುಂಗಾರಿ

ಆನಂತರ ನೀವು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ

samrakshane crop insurance

ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

ಈ ಪೇಜಿನ ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ :https://samrakshane.karnataka.gov.in/publichome.aspx

ಅಲ್ಲಿ ಮಧ್ಯದಲ್ಲಿ ಕಾಣುವಂತಹ ಫಾರ್ಮರ್ಸ್ ವಿಭಾಗದಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಕ್ಲಿಕ್ ಮಾಡಿ :https://samrakshane.karnataka.gov.in/Premium/CheckStatusMain_aadhaar.aspx

ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ಹಾಕಿ ಕ್ಯಾಚಫಾ ಕೋಡನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.

ಆಗ ನಿಮಗೆ ನಿಮ್ಮ ಖಾತೆಗಳಿಗೆ ಎಷ್ಟು ಹಣ ಯಾವಾಗ ಯಾವ ಖಾತೆಗೆ ಜಮೆಯಾಗಿದೆ ಎಂದು ಅಲ್ಲಿ ನೀವು ವೀಕ್ಷಿಸಬಹುದಾಗಿದೆ.

ಬೆಳೆ ವಿಮೆಯ ಹಣ ನಿನ್ನೆ ತಾನೆ ಬಿಡುಗಡೆಯಾಗಿದ್ದು, ಆನ್ಲೈನ್ ನಲ್ಲಿ ಅಪ್ ಡೇಟ್ ಆಗಲು ಕೆಲವು ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗಾಗಿ ನೀವು ಒಂದೆರಡು ದಿನ ಬಿಟ್ಟು ನೋಡಿದರೆ ನೀವು ಆನ್ಲೈನ್ ನಲ್ಲಿ ಯಾವ ಖಾತೆಗಳಿಗೆ ಯಾವ ದಿನಾಂಕದಂದು ಎಷ್ಟು ಹಣ ಜಮೆಯಾಗಿದೆ ಎಂಬುದರ ಖಚಿತ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ.

READ THIS ALSO:

1.ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?

ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ? ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಸಿಗುವುದು ಖಚಿತವೇ?ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಕೊನೆಯ ದಿನಾಂಕ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

2.Mailara Lingeshwar Karnika 2023: ರೈತರ ಕಷ್ಟದ ಬಗ್ಗೆ ಭವಿಷ್ಯ ಹೇಳಿದ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವಸ್ಥಾನದ ಕಾರ್ಣಿಕ.

“ಮುಕ್ಕೊಟ್ಟಿ ಚೆಲ್ಲಿತಲೇ ಕಲ್ಯಾಣಿ ಕಟ್ಟಿತಲೇ ಪರಾಕ್”! ಎಂಬ ನುಡಿಯನ್ನು ಐತಿಹಾಸಿಕ ಸ್ಥಳವಾದ ದೇವರಗುಡ್ಡದ ಗೊರವಜ್ಜನ ಕಾರ್ಣಿಕ ಇದಾಗಿದೆ. ಈ ನುಡಿಯು ರೈತರ ಬರಗಾಲದ ಸಂಕಷ್ಟದ ಬಗ್ಗೆ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿದವರು ಹೇಳಿದ್ದಾರೆ.

3.Gruhalakshmi :ಗೃಹಲಕ್ಷ್ಮಿ ಹಣ ಇನ್ನೂ ನಿಮ್ಮ ಖಾತೆಗೆ ಜಮೆ ಆಗಿಲ್ಲವೇ? ರೇಷನ್ ಕಾರ್ಡ್ ನೊಂದಿಗೆ ಕೂಡಲೇ ಈ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ – ಯಾವ ಇಲಾಖೆ ಗೊತ್ತಾ?

ತ್ಮೀಯ ಬಾಂಧವರೇ,ಗೃಹಲಕ್ಷ್ಮಿ(Gruhalakshmi) ಯೋಜನೆಯ(Scheme) ಎರಡು ಕಂತುಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು ಇನ್ನೂ ಕೂಡ ಹಣವನ್ನು ಪಡೆಯದಂತಹ ಫಲಾನುಭವಿಗಳು ಯಾವ ಇಲಾಖೆಗೆ ಭೇಟಿಯಾಗಬೇಕು ಇಲ್ಲಿದೆ ನೋಡಿ ಮಾಹಿತಿ.

ಆತ್ಮೀಯ ರೈತ ಬಾಂಧವರೇ,  ಮಳೆಗಾಗಿ  ಕಾದು ಕುಳಿತಿರುವಂತಹ ರೈತರಿಗೆ  ಹವಾಮಾನ ಇಲಾಖೆಯು(IMD)  ದಸರಾ(DASARA) ಹಬ್ಬಕ್ಕೆ ಸಿಹಿ ಸುದ್ದಿಯನ್ನು ನೀಡಿದ್ದು,  ಅದೇನೆಂದರೆ ರಾಜ್ಯದಲ್ಲಿ ಭಾರಿ ಮಳೆ(HEAVY RAIN) ನಿರೀಕ್ಷೆ  ಎಂದು ಹವಾಮಾನ ಇಲಾಖೆಯು(IMD) ಮುನ್ಸೂಚನೆಯನ್ನು(FORECAST) ನೀಡಿದೆ.

5.Bara Parihara: “ಬರ ಪರಿಹಾರದ ಮಹತ್ವಪೂರ್ಣ ಅಪ್ಡೇಟ್:ನಿಮ್ಮ ಬರ ಪರಿಹಾರದ ಹಣ ಯಾವಾಗ ಬರುತ್ತೆ ಗೊತ್ತಾ?

ಆತ್ಮೀಯ ರೈತ ಬಾಂಧವರೇ ಬರ ಪರಿಹಾರದ (bara parihara) ಕುರಿತು ಗ್ರಾಮ ಆಡಳಿತ ಅಧಿಕಾರಿಗಳ  ಕಾರ್ಯಾಲಯದಿಂದ ಆದೇಶವು ಹೊರಬಂದಿದ್ದು,  ಬನ್ನಿ ಅದು ಏನು ಅಂತ ತಿಳಿದುಕೊಳ್ಳೋಣ.

6.crop insurance: 2023-24 ನೇ ಸಾಲಿನ ಮುಂಗಾರಿನ ಬೆಳೆ ವಿಮೆ ಬಿಡುಗಡೆ: ಪ್ರತಿ ಎಕರೆಗೆ 3,634 ರೂಪಾಯಿ ಬಿಡುಗಡೆ

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು .

ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.

By Raju