ಮುಂಗಾರು ಹಂಗಾಮಿನ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ ನೋಂದಣಿಗೆ ಜು.೧೫ ಕೊನೆ ದಿನಾಂಕ

೨೦೨೩-೨೪ನೆ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭಿಮಾ ಯೋಜನೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮಾ ಕಂತು ತುಂಬಲು ಜು.೧೫ ಕೊನೆ ದಿನವಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಸರು ಬೆಳೆಗೆ ವಿಮಾ ಕಂತು ತುಂಬಲು ಜು.೧೫ ಕೊನೆ ದಿನವಾಗಿದೆ, ಜೋಳ, ಮುಸುಕಿನ ಜೋಳ, ಸಜ್ಜೆ, ನವಣೆ, ತೊಗರಿ, ಶೇಂಗಾ, ಎಳ್ಳು, ಹತ್ತಿ, ಹುರುಳಿ ಬೆಳೆಗಳಿಗೆ ವಿಮಾ ಕಂತು ತುಂಬಲು ಅ.೧೬ ಕೊನೆ ದಿನವಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯ ಅಭಾವ, ಕೊರತೆ, ಪ್ರತಿಕೂಲ ಹವಾಮಾನದಿಂದ ಬಿತ್ತನೆ ಕುಂಠಿತವಾಗಿದೆ. ರೈತರು ಬಿತ್ತಿದ ಬೆಳೆಗಳನ್ನು ಪ್ರಕೃತಿ ವಿಕೋಪದಿಂದ ಸಂರಕ್ಷಿಸಲು ದ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಆದ್ದರಿಂದ ಆಸಕ್ತ ರೈತರು ಹತ್ತಿರದ ಬ್ಯಾಂಕ, ಸಹಕಾರಿ ಸಂಘ, ಗ್ರಾಮ ಒನ್ ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ನಿಗಿದ ದಿನಾಂಕದೊಳಗೆ ಬೆಳೆ ವಿಮಾ ಕಂತು ಪಾವತಿಸಲು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆ ಮೂಲಕ ಕೋರಿದ್ದಾರೆ.

ಬೆಳೆ ವಿಮೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ :

https://samrakshane.karnataka.gov.in/

Leave a Comment