ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ :2022-23 ನೇ ಸಾಲಿನ ಹಿಂಗಾರಿ ಹಂಗಾಮಿನ ಬೆಳೆಗಳ ಕ್ಲೇಮ್ ವರದಿ ಬಿಡುಗಡೆ:ನೀವು ಮಾಡಿಸಿದ ಬೆಳೆಗೆ ಬೆಳೆ ವಿಮೆ ಬಿಡುಗಡೆಯಗುತ್ತದೆಯೋ ಇಲ್ಲವೋ ಎಂಬುದನ್ನು ಈಗಲೇ ಚೆಕ್ ಮಾಡಿ.

ಆತ್ಮೀಯ ರೈತ ಬಾಂಧವರೇ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2022 23ನೇ ಸಾಲಿನ ಹಿಂಗಾರಿ ಹಂಗಾಮಿನ ಬೆಳೆಗಳ ಕ್ಲೇಮ್ ವರದಿ ಬಿಡುಗಡೆಯಾಗಿದ್ದು, ಯಾವ ಬೆಳೆಗೆ ಎಷ್ಟು ಪರ್ಸೆಂಟ್ ಬೆಳೆ ಎಂಬುದನ್ನು ನೀವು ಆನ್ಲೈನ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದಾಗಿದೆ.

+ 50 ಎಂದರೆ, ಈ ವರ್ಷದ ಇಳುವರಿ ಮಾಮೂಲಿ ಇಳುವರಿಗಿಂತ ಶೇಕಡ 50ರಷ್ಟು ಕಡಿಮೆ ಇದ್ದು, ನೀವು ಬೆಳೆ ವಿಮೆ ಮಾಡಿಸಿದರೆ ಬೆಳೆ ವಿಮೆಯ ಶೇಕಡ 50ರಷ್ಟು ಹಣ ನಿಮ್ಮ ಖಾತೆಗಳಿಗೆ ಜಮೆಯಾಗಲಿದೆ.

-50 ಎಂದರೆ, ಈ ವರ್ಷದ ಇಳುವರಿ ಮಾಮೂಲಿ ಇಳುವರಿಗಿಂತ ಶೇಕಡ 50ರಷ್ಟು ಹೆಚ್ಚಿದೆ ಎಂದರ್ಥ, ಹಾಗೂ ರೈತರಿಗೆ ಯಾವುದೇ ರೀತಿಯ ಬೆಳೆ ವಿಮೆ ಕ್ಲೇಮ್ ಆಗುವುದಿಲ್ಲ.

ಹಾಗಾದರೆ ಬನ್ನಿ ನೀವು ಏನಾದರೂ 2022-23 ನೇ ಸಾಲಿನ ಹಿಂಗಾರಿ ಹಂಗಾಮಿನಲ್ಲಿ ಬೆಳೆವಿಮೆ ಮಾಡಿಸಿದರೆ ಯಾವ ಬೆಳೆಗೆ ಎಷ್ಟು ಪರ್ಸೆಂಟ್ ಬೆಳೆಯಾಗಿದೆ ಎಂಬುದನ್ನು ಆನ್ಲೈನ್ ಮೂಲಕ ಚೆಕ್ ಮಾಡೋದು ಹೇಗೆ ಎಂದು ತಿಳಿದುಕೊಳ್ಳೋಣ.

ನೀವು ಬೆಳೆವಿಮೆ ಮಾಡಿಸಿದ್ದರೆ ಯಾವ ಬೆಳೆಗಳಿಗೆ ಎಷ್ಟು ಬೆಳೆ ವಿಮೆ ಬರುತ್ತದೆ ಎಂದು ಆನ್ಲೈನ್ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ, ಬನ್ನಿ ಹೇಗೆ ಅಂತ ನೋಡೋಣ.

ಮೊಟ್ಟ ಮೊದಲಿಗೆ ನೀವು ಮೂರು ವಿಧಗಳಲ್ಲಿ ಅದನ್ನು ಚೆಕ್ ಮಾಡಬಹುದಾಗಿದೆ.

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:https://samrakshane.karnataka.gov.in/

 

Samrakshane

ಆಗ ನೀವು ಸಂರಕ್ಷಣೆ ವೆಬ್ಸೈಟ್ನ ಮುಖ್ಯ ಪೇಜ್ ನಲ್ಲಿ ಬರುತ್ತೀರಿ, ಅಲ್ಲಿ ವರ್ಷ ಹಾಗೂ ಋತುವನ್ನು ಆಯ್ಕೆ ಮಾಡಿ

ವರ್ಷ :2022-23

Season :ಹಿಂಗಾರಿ /rabi

ಮೇಲೆ ತಿಳಿಸಿದಂತಹ ವರ್ಷ ಹಾಗೂ ಋತುವನ್ನು ಆಯ್ಕೆ ಮಾಡಿ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಆಗ ನೀವು ಸಂರಕ್ಷಣೆ ವೆಬ್ಸೈಟ್ನ ತಲುಪುವಿರಿ

samrakshane

ಅದರಲ್ಲಿ ಫಾರ್ಮರ್ಸ್ ಎಂಬ ವಿಭಾಗದಲ್ಲಿ, ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:https://samrakshane.karnataka.gov.in/Premium/CheckStatusMain_aadhaar.aspx

ಆಗ ನಿಮಗೆ ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮಗೆ ಮೂರು ಆಯ್ಕೆಗಳಿರುತ್ತವೆ

1. ಪ್ರೊಪೋಸಲ್ ನಂಬರ್

2. ಮೊಬೈಲ್ ನಂಬರ್

3. ಆಧಾರ್ ನಂಬರ್

ನೀವು ಬೆಳೆ ವಿಮೆ ಮಾಡಿಸಿದಾಗ ಅವರು ನೀಡುವ ರಶೀದಿ ನಿಮ್ಮ ಬಳಿ ಇದ್ದರೆ ಅದರ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ ಅದರಲ್ಲಿ ಪ್ರಪೋಸಲ್ ನಂಬರ್ ಅಂದರೆ ಅಪ್ಲಿಕೇಶನ್ ನಂಬರ್ ಇರುತ್ತದೆ, ಅದರ ಮೂಲಕ ನೀವು ಚೆಕ್ ಮಾಡಬಹುದಾಗಿದೆ, ಅದು ಇಲ್ಲದಿದ್ದರೂ ಕೂಡ ನೀವು ನಿಮ್ಮ ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಹಾಕಿಯೂ ಕೂಡ ಚೆಕ್ ಮಾಡಬಹುದು.

1. ಪ್ರೊಪೋಸಲ್ ನಂಬರ್ ಎಂಬ ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ

samrakshane

ಅಲ್ಲಿ ನಿಮ್ಮ ಪ್ರಪೋಸಲ್ ನಂಬರನ್ನು ಟೈಪ್ ಮಾಡಿ, ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ

ಆಗ ನಿಮಗೆ ಕೆಳಗಡೆ ಚಿತ್ರದಲ್ಲಿ ನೀಡಿರುವಂತೆ ಅದರ ರಿಪೋರ್ಟನ್ನು ತೋರಿಸುತ್ತದೆ, ಅದರಲ್ಲಿ ನೀವು ವೀಕ್ಷಿಸುವ ಹಾಗೆ ಅದರಲ್ಲಿ ಶಾರ್ಟ್ ಫಾಲ್ 41% ಅಂತ ಇದೆ, ಅಂದರೆ ವಾಡಿಕೆಯಿಂದ ಶೇಕಡ 41% ರಷ್ಟು ಇಳುವರಿ ಕಡಿಮೆಯಾಗಿದ್ದು ನಾವು ಬೆಳೆ ವಿಮೆ ಮಾಡುತ್ತಿದ್ದಂತಹ ಬೆಳೆಗೆ ಬೆಳೆ ವಿಮೆ ಕ್ಲೇಮ್ ಆಗುತ್ತದೆ ಎಂದು ಅರ್ಥ.

ಒಂದು ವೇಳೆ ಅದು -41 ಇದ್ದರೆ ಬೆಳವಿಮೆ ಕ್ಲೇಮ್ ಆಗುವುದಿಲ್ಲ ಎಂದು ಅರ್ಥ, ಅಂದರೆ ವಾಡಿಕೆಗಿಂತ ಶೇಕಡ 41ರಷ್ಟು ಹೆಚ್ಚಿನ ಇಳುವರಿ ಬಂದಿದೆ ಎಂದು ಅರ್ಥ.

2. ಇನ್ನು ನಿಮ್ಮ ಬಳಿ ಪ್ರಪೋಸಲ್ ನಂಬರ್ ಇಲ್ಲವೆಂದರೆ ಇದೇ ರೀತಿ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ನಂಬರ್ ಹಾಕುವ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.

 

Leave a Comment