ನವಂಬರ್ 10ರ ಒಳಗೆ ರೈತರ ಖಾತೆಗೆ ಪ್ರತಿ ಎಕರೆಗೆ 3,364 ರೂಪಾಯಿ ಬೆಳೆ ವಿಮೆ ಜಮೆ ಆನ್ಲೈನ್ ಮೂಲಕ ಎಷ್ಟು ಹಣ ಜಮೆಯಾಗುವುದು ಎಂದು ಹೀಗೆ ಚೆಕ್ ಮಾಡಿಕೊಳ್ಳಿ

 ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಹೆಸರು ಬೆಳೆವಿಮೆ ಮಾಡಿಸಿದಂತಹ ರೈತರ ಖಾತೆಗಳಿಗೆ ಈಗಾಗಲೇ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು  ನವೆಂಬರ್ 10 ಒಳಗೆ ರೈತರ ಖಾತೆಗಳಿಗೆ ಪ್ರತಿ ಎಕರೆಗೆ 3,364 ರೂಪಾಯಿಗಳನ್ನು ಜಮೆ ಮಾಡಲಾಗುವುದು ಎಂದು ಮೂಲಗಳ  ಮೂಲಕ ಮಾಹಿತಿ ತಿಳಿದು ಬಂದಿದೆ.

 ತಮಗೆಲ್ಲ ಗೊತ್ತಿರುವ ಹಾಗೆ ಕರ್ನಾಟಕದಲ್ಲಿ ಹೆಸರು ಬೆಳೆಗೆ ಮಾಡಿಸಿದಂತಹ ರೈತರಿಗೆ ಈಗಾಗಲೇ ಬೆಳೆ ವಿಮೆಯ ಹಣ ಬಿಡುಗಡೆಯಾಗಿದ್ದು ಅದರಲ್ಲಿಯೂ ಪ್ರಮುಖವಾಗಿ ಗದಗ್ ಜಿಲ್ಲೆ, ಹೆಸರು ಬೆಳೆಯ ಬೆಳೆ ವಿಮೆಯಲ್ಲಿ ಸಿಂಹ ಪಾಲನ್ನು ಪಡೆದಿತ್ತು.

ಈಗಾಗಲೇ ಗದಗ್ ಜಿಲ್ಲೆಯ ಹಲವು ಗ್ರಾಮಗಳ ರೈತರಿಗೆ ಬೆಳೆ ವಿಮೆಯ ಹಣ ಜಮೆಯಾಗಿದೆ,  ಗದಗ್ ಜಿಲ್ಲೆಯ ಹೊಂಬಳ ಗ್ರಾಮದ ರೈತರಿಗೆ ಈಗಾಗಲೇ ಹೆಸರು ಬೆಳೆ ವಿಮೆಯ ಹಣ ಜಮೆಯಾಗಿದೆ,  ಆದರೆ ಇನ್ನೂ ಕೆಲವೊಂದಿಷ್ಟು ಗ್ರಾಮಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿಲ್ಲ.

 ಇದರ ಕುರಿತಾಗಿ ಬೆಳೆವಿಮೆ ಕಂಪನಿ ಆದಂತಹ ಬಜಾಜ್ ಅಲಿಯನ್ಸ್ ಇನ್ಸೂರೆನ್ಸ್ ಕಂಪನಿಯನ್ನು ನಾವು ಸಂಪರ್ಕಿಸಿದಾಗ  ಅವರು ತಿಳಿಸಿರುವ ಮಾಹಿತಿಯ ಪ್ರಕಾರ ನವೆಂಬರ್ ಹತ್ತರ ಒಳಗಾಗಿ ಗದಗ್ ಜಿಲ್ಲೆಯ ಎಲ್ಲಾ ರೈತರ ಖಾತೆಗಳಿಗೆ ಹೆಸರು ಬೆಳೆಯನ್ನು ಮಾಡಿಸಿದಂತಹ ರೈತರಿಗೆ ಪ್ರತಿ ಎಕರೆಗೆ ರೂ.3,364 ರೂಪಾಯಿಗಳನ್ನು ಜಮೆ ಮಾಡಲಾಗುವುದು ಎಂದು ತಿಳಿಸಿದರು.

Read this also:

ಆತ್ಮೀಯ ರೈತ ಬಾಂಧವರೇ, 202324ನೇ ಸಾಲಿನ ಮುಂಗಾರಿ ಹಂಗಾಮಿನ ಬೆಳೆ ವಿಮೆ(crop insurance) ಬಿಡುಗಡೆಯಾಗಿದ್ದು ಹೆಸರು ಬೆಳೆ ವಿಮೆ ಮಾಡಿದಂತಹ ರೈತರ ಖಾತೆಗಳಿಗೆ ಪ್ರತಿ ಎಕರೆಗೆ ರೂ.3634 ರೂಪಾಯಿಗಳು ಜಮೆಯಾಗಿವೆ.

ಗದಗ ಜಿಲ್ಲೆಯ ರೈತರಿಗೆ ಹೆಸರು ಬೆಳೆಯ ಮೇಲೆ ಸಿಂಹ ಪಾಲು ದೊರಕಿದ್ದು ಬಿಡುಗಡೆಯಾದಂತಹ 42 ಕೋಟಿ ರೂಪಾಯಿಗಳಲ್ಲಿ 34.99 ಕೋಟಿ ರೂಪಾಯಿಗಳನ್ನು ಗದಗ್ ಜಿಲ್ಲೆ ಬಾಚಿಕೊಂಡಿದ್ದು ಅದರಲ್ಲಿ ಈಗಾಗಲೇ ಗದಗ್ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಬೆಳೆ ವಿಮೆಯ ಹಣ ಜಮೆಯಾಗಿದ್ದು ಉಳಿದ ಹಳ್ಳಿಗಳಿಗೂ ಕೂಡ ಇನ್ನೇನು ಕೆಲವೇ ದಿನಗಳಲ್ಲಿ  ಜಮೆಯಾಗಲಿವೆ.

 

 ಆನ್ಲೈನ್ ಮೂಲಕ ನಿಮ್ಮ ಖಾತೆಗಳಿಗೆ ಎಷ್ಟು ಬೆಳೆ ವಿಮೆಯ ಹಣ ಜಮೆಯಾಗಿದೆ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/

ವರ್ಷ ಹಾಗೂ ಋತು ಆಯ್ಕೆ ಮಾಡಿ

ವರ್ಷ:2023-24

ಋತು:kharif /ಮುಂಗಾರಿ

ಆನಂತರ ನೀವು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ

samrakshane crop insurance

ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

ಈ ಪೇಜಿನ ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ :https://samrakshane.karnataka.gov.in/publichome.aspx

ಅಲ್ಲಿ ಮಧ್ಯದಲ್ಲಿ ಕಾಣುವಂತಹ ಫಾರ್ಮರ್ಸ್ ವಿಭಾಗದಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಕ್ಲಿಕ್ ಮಾಡಿ :https://samrakshane.karnataka.gov.in/Premium/CheckStatusMain_aadhaar.aspx

ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ಹಾಕಿ ಕ್ಯಾಚಫಾ ಕೋಡನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.

ಆಗ ನಿಮಗೆ ನಿಮ್ಮ ಖಾತೆಗಳಿಗೆ ಎಷ್ಟು ಹಣ ಯಾವಾಗ ಯಾವ ಖಾತೆಗೆ ಜಮೆಯಾಗಿದೆ ಎಂದು ಅಲ್ಲಿ ನೀವು ವೀಕ್ಷಿಸಬಹುದಾಗಿದೆ.

ಬೆಳೆ ವಿಮೆಯ ಹಣ ನಿನ್ನೆ ತಾನೆ ಬಿಡುಗಡೆಯಾಗಿದ್ದು, ಆನ್ಲೈನ್ ನಲ್ಲಿ ಅಪ್ ಡೇಟ್ ಆಗಲು ಕೆಲವು ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗಾಗಿ ನೀವು ಒಂದೆರಡು ದಿನ ಬಿಟ್ಟು ನೋಡಿದರೆ ನೀವು ಆನ್ಲೈನ್ ನಲ್ಲಿ ಯಾವ ಖಾತೆಗಳಿಗೆ ಯಾವ ದಿನಾಂಕದಂದು ಎಷ್ಟು ಹಣ ಜಮೆಯಾಗಿದೆ ಎಂಬುದರ ಖಚಿತ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ.

 

Leave a Comment