ಸತತ ಮಳೆ ಹಿನ್ನಲೆ ಜಿಲ್ಲೆಯ ರೈತರಿಗೆ ಕೃಷಿ ಇಲಾಖೆಯಿಂದ ಬೆಳೆ ರಕ್ಷಣೆ ಮಾಹಿತಿ

ಗದಗ: ಜಿಲ್ಲೆಯಲ್ಲಿ 2023 ರ ಮುಂಗಾರು: ಹಂಗಾಮಿನಲ್ಲಿ ಒಟ್ಟು 309810 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿತ್ತು. ಹೆಸರು ಪ್ರಮುಖ ಬೆಳೆಯಾಗಿರುವುದರಿಂದ 125000 ಹೆ.ಪ್ರದೇಶದಲ್ಲಿ ಬಿತ್ತುವ ಗುರಿ ಹೊಂದಲಾಗಿತ್ತು,

ಮುಂಗಾರು ಮಳೆ ಸಕಾಲದಲ್ಲಿ ಬಾರದ ಕಾರಣ ಹೆಸರು ಅಂದಾಜು 220 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಇಲ್ಲಿಯವರೆಗೆ ಶೇ.33ರಷ್ಟು ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಿದೆ.

ಮೆಕ್ಕೆಜೋಳ 55000 ಹೆ., ಹತ್ತಿ 3000 ಹೆ. ಸೂರ್ಯ ಕಾಂತಿ 6500 ಹೆ., ಶೇಂಗಾ 11500 ಹೆ.ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಎಲ್ಲಾ ಬೆಳೆಗಳು 30 ರಿಂದ 45 ದಿನಗಳ ಬೆಳೆಯಾಗಿವೆ.

ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಬಿಸಿಲು ಇರದ ಕಾರಣ ಬೆಳೆಗಳಿಗೆ ಕೀಟ ಬಾಧೆ ಕಾಡುವ ಸಂಭವವಿರುತ್ತದೆ.ಹೊಲದಲ್ಲಿ ನಿಂತಿರುವ ನೀರು ಹೊರ ಹಾಕಲು ಏರ್ಪಡಿಸುವುದು. ಬೆಳೆಗಳು ಬೆಳೆಯಲು ಆಯಾ ಬೆಳೆಗಳಿಗೆ ಶಿಫಾರಸ್ಸಿನಂತೆ ಸಾರಜನಕವನ್ನು ಮೇಲುಗೊಬ್ಬರ ಕೊಡುವುದು, ಸತತ ಮಳೆಯಿಂದ ಹೆಸರು ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ಅಂತ‌ ವ್ಯಾಪ್ತಿ ಕೀಟನಾಶಕ ಥೈಯೋಮೆಥೋಕ್ವಾನ್ 1.2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರ 19:19:19 ನ್ನು 5 ಗ್ರಾಂ, ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.

ಗೋವಿನ ಜೋಳದಲ್ಲಿ ವಾಶ್ ಸೈನಿಕ ಹುಳುವಿನ ಬಾಧೆ ಕಂಡು ಬಂದಲ್ಲಿ ಕೂಡ ನಿರ್ವಹಣೆಗೆ: ಇಮಾಮ ಬೆಂಝಯೇಟ್ 1.9 ಐಸಿಯನ್ನು 25 ಮಿಲಿ ಪತಿ ಟ್ಯಾಂಕ್ ನೀರಿಗೆ ಬೆರೆಸಿ ಸಿಂಪಡಿಸುವುದು.

ಮುಂಚಿತವಾಗಿ ಬಿಟಿ ಹತ್ತಿ ಬೆಳೆಗೆ ಹುಳು ಬಾಧೆ ಕಂಡು ಬಂದಲ್ಲಿ ಇದರ ನಿರ್ವಹಣೆಗೆ ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಮೊನಾಸ್ ಅಥವಾ ಕಾರ್ಬೋಸಲಾಲ್ಪನ 2ಗ್ರಾಂ/ಲೀಟರ ನೀರಿಗೆ ಬೆರೆಸಿ ಸಿಂಪಡಿಸುವುದು. ಸೂರ್ಯಕಾಂತಿ ಬೆಳೆಯುವ ರೈತರು ಆ.15ರ ನಂತರ ಬಿತ್ತನೆ ಕೈಗೊಳ್ಳಬಹುದು. ಹೊಲದ ಸುತ್ತಲೂ ಕನಿಷ್ಟ 4ರಿಂದ 5 ಸಾಲು ಎತ್ತರವಾಗಿ ಬೆಳೆಯುವ ಜೋಳ, ಸಜ್ಜೆ, ಗೋವಿನ ಜೋಳವನ್ನು ದಟ್ಟವಾಗಿ ಬಿತ್ತಬೇಕು. ಹೊಲದ ಸುತ್ತಲೂ ಇರುವ ಪಾರ್ಥೇನಿಯಂ ಮತ್ತು ಇತರ ಕಳೆಗಳನ್ನು ತೆಗೆಯುವುದು. ಮಾಹಿತಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೆಂದ, ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಸಂಶೋಧನಾ ಕೇಂದ್ರ, ಗದಗ ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

 

Leave a Comment