ಪ್ರವಾಸಿಗರಿಗೆ ಭರ್ಜರಿ ನ್ಯೂಸ್ :ಬೆಂಗಳೂರು ಮೂಲಕ ಕಾಶ್ಮೀರಕ್ಕೆ ವಿಶೇಷ ರೈಲು

ಭಾರತೀಯ ರೈಲ್ವೆಯ ‘ಭಾರತ ಗೌರವ್’ ಯೋಜನೆಯಲ್ಲಿ ದಕ್ಷಿಣ ಸ್ಟಾರ್ ರೈಲು ಕಾಶ್ಮೀರ ಕಣಿವೆಗೆ ರೈಲುಗಳ ಓಡಾಟ ಪ್ರಾರಂಭಿಸಿದೆ.

ಈ ಮೂಲಕ ಪ್ರವಾಸಿಗರಿಗೆ ಒಂದು ಭರ್ಜರಿ ಅವಕಾಶವಿದ್ದು ಬೆಂಗಳೂರು ಟು ಕಾಶ್ಮೀರ ನೇರವಾಗಿ ಹೋಗಬಹುದಾಗಿದೆ.

ಕೊಯಂಬತ್ತೂರಿನಿಂದ ಹೊರಡುವ ರೈಲು, ಬೆಂಗಳೂರಿನ ಯಲಹಂಕ ಮೂಲಕ ಹಾದು ಹೋಗುತ್ತದೆ. ಈ ಬೇಸಿಗೆ ರಜೆಗೆ ವಿಶೇಷ ರೈಲಿನ ಟಿಕೆಟ್ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ.

ಯಾವಾಗ ಶುರುವಾಗಲಿದೆ?

ಭಾರತ ಗೌರವ್ ಯೋಜನೆಯಡಿ ಕೊಯಂಬತ್ತೂರಿನಿಂದ ಮಹಾರಾಷ್ಟ್ರದ ಶಿರಡಿವರೆಗೆ 2022ರ ಜೂನ್‌ನಲ್ಲಿ ತನ್ನ ಮೊದಲ ಓಟವನ್ನು ಪ್ರಾರಂಭಿಸಿತು.

ಭಾರತ ಗೌರವ್ ಅಡಿಯಲ್ಲಿ, ಪ್ರವಾಸೋ ದ್ಯಮ ಪ್ಯಾಕೇಜ್‌ಗಳನ್ನು ಉತ್ತೇಜಿಸಲು ವಿಷಯಾಧಾರಿತ ವಲಯಗಳನ್ನು ನಡೆಸಲು ಖಾಸಗಿ ನಿರ್ವಾಹಕರು ಅಥವಾ ಸೇವಾ ಪೂರೈಕೆದಾ ರರಿಗೆ ಭಾರತೀಯ ರೈಲ್ವೆಯಿಂದ ರೈಲುಗಳನ್ನು ಗುತ್ತಿಗೆ ನೀಡಲು ರೈಲ್ವೆಯು ಅವಕಾಶ ನೀಡುತ್ತದೆ

.ಬಾಡಿಗೆದಾರರು ತಮ್ಮ ಆಯ್ಕೆಯ ಯಾವುದೇ ಪ್ರವಾಸಿ ವಲಯಗಳಲ್ಲಿ ರೈಲುಗಳನ್ನು ನಿರ್ವಹಿಸಬಹುದು.

ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಉತ್ತೇಜಿಸಲು ಈ ಸೇವೆ ನೀಡಲಾಗುತ್ತಿದೆ ಎಂದು ರೈಲ್ವೆಸಚಿವಾಲಯ ಹೇಳಿದೆ.

ಈ ಪ್ರವಾಸವನ್ನು ಟ್ರಾವೆಲ್ಸ್ ಟೈಮ್ಸ್ ಇಂಡಿಯಾ ಲಿಮಿಟೆಡ್ ಭಾರತ ಸರಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದ ಟೂರ್‌ಆಪರೇಟ‌ ಗಳು ಸುಮಾರು 600 ಕ್ಕೂ ಅಧಿಕ ಪ್ರವಾಸಿ ರೈಲುಗಳನ್ನು ಓಡಿಸಿದ್ದಾರೆ.

Leave a Comment