Important update about drought parihara from village accountants office:ಬರ ಪರಿಹಾರ

ಗ್ರಾಮ ಆಡಳಿತ ಅಧಿಕಾರಿ (ತಲಾಟಿ)ಗಳ ಕಾರ್ಯಾಲಯದಿಂದ ಬೆಳೆ ಪರಿಹಾರದ ಕುರಿತು ಆದೇಶ

ಈ ಮೂಲಕ ಎಲ್ಲಾ ರೈತ ಭಾಂದವರಿಗೆ ತಿಳಿಸುವದೇನೆಂದರೆ ತಮ್ಮ ಎಲ್ಲಾ ಜಮೀನುಗಳ FID ಯನ್ನು ಕೃಷಿ ಇಲಾಖೆಗೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಕಡ್ಡಾಯವಾಗಿ ಮಾಡಿಸಬೇಕು.. ಅಂದಾಗ ಮಾತ್ರ 2023 ನೇ ಸಾಲಿನ ಬರ ಪರಿಹಾರದ ಮೊತ್ತ ತಮಗೆ ಜಮೆ

FID ಮಾಡಿಸಲು ಈ ಕೆಳಕಂಡ ಧಾಖಲಾತಿಗಳನ್ನು ತೆಗೆದುಕೊಂಡು ಹೋಗಬೇಕು :

1)Aadhar card

2)ಬ್ಯಾಂಕ್ ಪಾಸ್ ಬುಕ್

3)ತಮ್ಮ ಎಲ್ಲಾ ಜಮೀನಿನ RTC (ಉತಾರ )

How to check online FID details?

https://fruits.karnataka.gov.in/OnlineUserLogin.aspx

Drought parihara eligibility:

ಬೆಳೆ ಪರಿಹಾರ ಪಡೆಯಲು ನೀವು ಬೆಳೆದಂತಹ ಬೆಳೆಯನ್ನು ನಿಮ್ಮ ಮೊಬೈಲ್ ಮೂಲಕ ಜಿಪಿಎಸ್ ಮಾಡಿರಲೇಬೇಕು.

 ಗೂಗಲ್ ನಲ್ಲಿ ಇರುವಂತಹ ಬೆಳೆ ಸಮೀಕ್ಷೆ ಆಪ್ ಮೂಲಕ ಕಡ್ಡಾಯವಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದಲ್ಲಿ ಬೆಳೆದಂತಹ ಬೆಳೆಗಳನ್ನು ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಮಾಡಿದ್ದರೆ ಮಾತ್ರ ನಿಮಗೆ ಬೆಳೆ ಪರಿಹಾರದ ಅಂದರೆ ಬರಗಾಲದ ಪರಿಹಾರದ ಹಣ ನಿಮ್ಮ ಖಾತೆಗಳಿಗೆ ಜಮೆಯಾಗುತ್ತದೆ.

 ಒಂದು ವೇಳೆ ನಿಮಗೆ ಮಾಡಲು ಗೊತ್ತಾಗದಿದ್ದಲ್ಲಿ ಕೂಡಲೇ ನಿಮ್ಮ ಗ್ರಾಮದ ಪಿ ಆರ್ ಅಥವಾ ಅಧಿಕಾರಿಗಳನ್ನು ಭೇಟಿಯಾಗಿ ಅವರ ಮೂಲಕ ಮಾಡಿಸಿಕೊಳ್ಳಬೇಕಾಗಿದೆ.

 ಒಂದು ವೇಳೆ ನೀವು ಬೆಳೆ ಸಮೀಕ್ಷೆ  ಮಾಡದಿದ್ದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗಳಿಗೆ ಬರ ಪರಿಹಾರದ ಹಣ ಜಮೆಯಾಗುವುದಿಲ್ಲ..

Drought parihara release date:

ಹೀಗಿರುವ ಸದ್ಯದ ಮಾಹಿತಿಯ ಪ್ರಕಾರ ಬೆಳೆ ಪರಿಹಾರದ ಬಿಡುಗಡೆಯ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಬಂದಿಲ್ಲ.

 ಈಗ ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರದಿಂದ ತಂಡಗಳು ಒಂದು ರಾಜ್ಯದಲ್ಲಿ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಿಕೊಂಡು ಹೋಗಿದ್ದು ಅದರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿದ ನಂತರ ಕೇಂದ್ರ ಸರ್ಕಾರದಿಂದ ಬರುವಂತಹ ಅನುದಾನವನ್ನು ನೋಡಿಕೊಂಡು ನಂತರ ಯಾವ ರೀತಿ ಎಷ್ಟು ಪರಿಹಾರವನ್ನು ನೀಡಬೇಕು ಎಂಬುದರ ಬಗ್ಗೆ ಅಧಿಕೃತ ಆದೇಶ  ಹೊರ ಬೀಳಲಿದೆ.

ಆನ್ಲೈನ್ ಮೂಲಕ ( crop insurance) ಜಮೆ ಆಗಿರುವುದನ್ನು ಚೆಕ್ ಮಾಡುವುದು ಹೇಗೆ:

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/

ವರ್ಷ ಹಾಗೂ ಋತು ಆಯ್ಕೆ ಮಾಡಿ

ವರ್ಷ:2023-24

ಋತು:kharif /ಮುಂಗಾರಿ

ಆನಂತರ ನೀವು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ

samrakshane crop insurance

ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

ಈ ಪೇಜಿನ ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ :https://samrakshane.karnataka.gov.in/publichome.aspx

ಅಲ್ಲಿ ಮಧ್ಯದಲ್ಲಿ ಕಾಣುವಂತಹ ಫಾರ್ಮರ್ಸ್ ವಿಭಾಗದಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಕ್ಲಿಕ್ ಮಾಡಿ :https://samrakshane.karnataka.gov.in/Premium/CheckStatusMain_aadhaar.aspx

ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ಹಾಕಿ ಕ್ಯಾಚಫಾ ಕೋಡನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.

Read this aLSO:

1.ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ: 1200 ಬದಲಿ ಎಷ್ಟು ಗೊತ್ತಾ?

ಆತ್ಮೀಯ ಹಿರಿಯ ಬಾಂಧವರೇ,  60 ವರ್ಷ ಮೇಲ್ಪಟ್ಟವರಿಗೆ ಹಿರಿಯ ನಾಗರಿಕರ ಪಿಂಚಣಿಯನ್ನು ಸರ್ಕಾರ ನೀಡುತ್ತಿದ್ದು,  ಇದೀಗ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು 1200 ಬದಲಿಗೆ ಎಷ್ಟು ಹಣ ಬರುತ್ತದೆ  ಗೊತ್ತಾ?

2.ಆನ್ಲೈನ್ ಮೂಲಕ ಉಚಿತವಾಗಿ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ಉಚಿತವಾಗಿ ನೀವು ನಿಮ್ಮ ಜಮೀನಿನ ಪಹಣಿಯನ್ನು ವೀಕ್ಷಿಸಬಹುದಾಗಿದೆ, ಬನ್ನಿ ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ.

parihara

ಬೆಳೆ ಸಮೀಕ್ಷೆ ಆಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :

https://play.google.com/store/apps/details?id=com.csk.farmer23_24.cropsurvey

ನೀವು ಬೆಳೆ ಸಮೀಕ್ಷೆ ಮಾಡಿದ ನಂತರ, ನೀವು ಮಾಡಿದಂತಹ ಬೆಳೆ ಸಮೀಕ್ಷೆ ಸರಿಯಾಗಿದೆ ಇಲ್ಲವೋ ಎಂಬುದನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಬಹುದು.

ಅದಕ್ಕಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಒಂದು ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ, ಅದರ ಹೆಸರು ಬೆಳೆ ದರ್ಶಕ್

ಇದನ್ನು ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ:

https://play.google.com/store/apps/details?id=com.crop.offcskharif_2021

ಆಪನ್ನು ಡೌನ್ಲೋಡ್ ಮಾಡಿ ಓಪನ್ ಮಾಡಿ

ಮುಖ್ಯ ಪೇಜ್ ನಲ್ಲಿ ನಿಮಗೆ ಹಲವಾರು ಆಪ್ಷನ್ಗಳಿವೆ, ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರನ್ನು ನಮೂದಿಸಿ ವಿವರ ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಆ ಸರ್ವೇ ನಂಬರಲ್ಲಿ ಇರುವಂತಹ ಹಿಸ್ಸಾ ನಂಬರ್ ಗಳು ಅಪ್ಡೇಟಾಗುತ್ತವೆ, ಆಗ ಹಿಸ್ಸ ಆಯ್ಕೆ ಮಾಡಿಕೊಂಡು ನಂತರದ ಆಯ್ಕೆಯಲ್ಲಿ ಮಾಲಕರ ಹೆಸರನ್ನು ಆಯ್ಕೆ ಮಾಡಿ

ನಂತರ ಕೆಳಗಡೆ ಇರುವಂತಹ ಸಮೀಕ್ಷೆಯ ವಿವರವನ್ನು ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಆಗ ನೀವು ನಿಮ್ಮ ಹೊಲವನ್ನು ಯಾರು ಜಿಪಿಎಸ್ ಮಾಡಿದ್ದಾರೆ ಎಂದು ಅವರ ಹೆಸರನ್ನು ಅಲ್ಲಿ ಕೆಳಗಡೆ ನೋಡಬಹುದು, ಆಗ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಹೊಲದಲ್ಲಿ ಯಾವ ಬೆಳೆಯನ್ನು ಬೆಳೆ ಸಮೀಕ್ಷೆ ಮಾಡಲಾಗಿದೆ ಹಾಗೂ ಅದು ಅಪ್ರುವಲ್ ಆಗಿದೆಯೋ ಇಲ್ಲವೋ ಎಂಬ ನಿಖರ ಮಾಹಿತಿಯನ್ನು ನೀವು ಮೂಲಕ ನಿಮ್ಮ ಮೊಬೈಲ್ ನಲ್ಲಿಯೇ ಪಡೆಯಬಹುದಾಗಿದೆ.

 

 

Leave a Comment