ಮುಂಗಾರು ಮುಗಿಯುತ್ತ ಬಂದರೂ ಮಳೆ ಕೊರತೆ ನಿವಾರಣೆ ಇಲ್ಲ: ಹವಾಮಾನ ತಜ್ಞರು: ಅಕ್ಟೋಬರ್‌ನಲ್ಲೂ ರಾಜ್ಯದಲ್ಲಿ ಮಳೆ ಕೊರತೆ ಮುನ್ಸೂಚನೆ

ಮುಂಗಾರು ಮುಗಿಯುತ್ತ ಬಂದರೂ ಮಳೆ ಕೊರತೆ ನಿವಾರಣೆ ಇಲ್ಲ: ಹವಾಮಾನ ತಜ್ಞರು: ಅಕ್ಟೋಬರ್‌ನಲ್ಲೂ ರಾಜ್ಯದಲ್ಲಿ ಮಳೆ ಕೊರತೆ ಮುನ್ಸೂಚನೆ

ಬೆಂಗಳೂರು: ಮುಂಗಾರು ಮುಗಿದು ಹಿ೦ಗಾರು ಆರಂಭವಾದ ಬಳಿಕ ಸಾಧಾರಣ ಮಳೆ ಮುಂದುವರಿಯಲಿದೆ ಎಂಬ ನಿರೀಕ್ಷೆ ಯ ಮಧ್ಯೆಯೂ ಈ ಹಿಂದಿನ ತಿಂಗಳುಗಳಂತೆ ಅಕ್ಟೋಬರ್‌ನಲ್ಲೂ ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಮುಂಗಾರು ಮುಗಿಯುತ್ತಾ ಬಂದರೂ ರಾಜ್ಯದಲ್ಲಿ ಮಳೆ ಕೊರತೆ ನಿವಾರಣೆಯಾಗಿಲ್ಲ ಈಶಾನ್ಯ ಹಿಂಗಾರು ಮಳೆ ಆರಂಭವೂ ಆಶಾದಾಯಕವಾಗಿಲ್ಲ.

ಜೂನ್‌ನಲ್ಲಿ ಮುಂಗಾರು ದುರ್ಬಲಗೊಂಡಂತೆ ಹಿಂಗಾರಿನ ಆರಂಭವೂ ದುರ್ಬಲವಾಗುವ ಸಾಧ್ಯತೆ ಗಳಿವೆ. ಮುಂಗಾರು ಮಳೆಯ ಅವಧಿ ಮುಗಿ ಯುತ್ತಿದ್ದು, ಹಿಂಗಾರು ಮಳೆ ಆರಂಭವಾಗುವ ಪರ್ವ ಕಾಲದಲ್ಲಿ ಮಳೆಯಾಗುವುದು ವಾಡಿಕೆ.

ಆದರೂ ರಾಜ್ಯದಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಕಳೆದ ಎರಡು ವಾರಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದ್ದರೂ ವ್ಯಾಪಕ ಪ್ರಮಾಣದ ವಾಡಿಕೆ ಮಳೆಯಾಗಿಲ್ಲಎಂದು ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್ ಒಂದರಿಂದ ಸೆಪ್ಟೆ೦ಬರ್ 30ರವರೆಗೆ ರಾಜ್ಯದಲ್ಲಿ 642 ಮಿ.ಮೀ. ಮಳೆಯಾಗಿದೆ.

ಈ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 852 ವಾಡಿಕೆಗಿಂತ ಕೊರತೆಯಾಗಿದೆ. ಆಗಿದೆ. ಅಂದರೆ, ಶೇ.25ರಷ್ಟು ಮಳೆ ರಾಜ್ಯದ ಯಾವ ಭಾಗದಲ್ಲೂ ಈ ಅವಧಿಯಲ್ಲಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಕಳೆದ ಒಂದು ವಾರದಲ್ಲೂ ರಾಜ್ಯದಲ್ಲಿ ವಾಡಿಕೆಗಿಂತ ಶೇ.42 ರಷ್ಟು ಕಡಿಮೆ ಮಳೆಯಾದ ವರದಿಯಾಗಿದೆ.

ಅದೇ ರೀತಿ ಅಕ್ಟೋಬರ್ 1ರಿಂದ 13ರವರೆಗಿನ ಮಳೆ ಪ್ರಮಾಣ ಗಮನಿಸಿದರೆ ವಾಡಿಕೆಗಿಂತ ಶೇ.54 ರಷ್ಟು ಕೊರತೆಯಾಗಿದ್ದು, ಎರಡು ವಾರದಲ್ಲಿ ಮಳೆ ಕೊರತೆ ತೀವ್ರವಾಗಿದೆ. ಈ ಅವಧಿಯಲ್ಲಿ 71 ಮಿ. ಮೀ. ವಾಡಿಕೆ ಮಳೆಯಿದ್ದು, ಕೇವಲ 33 ಮಿ. ಮಾತ್ರ ಮಳೆಯಾದ ವರದಿಯಾಗಿದೆ.

ಆನ್ಲೈನ್ ಮೂಲಕ ( crop insurance) ಜಮೆ ಆಗಿರುವುದನ್ನು ಚೆಕ್ ಮಾಡುವುದು ಹೇಗೆ:

ಮೊಟ್ಟ ಮೊದಲು ಗೂಗಲ್ ನಲ್ಲಿ ಸಂರಕ್ಷಣೆ ಎಂದು ಟೈಪ್ ಮಾಡಿ

ಡೈರೆಕ್ಟಾಗಿ ಲಿಂಕ್ ಗಾಗಿ ಕೆಳಗಡೆ ಕ್ಲಿಕ್ ಮಾಡಿ

https://samrakshane.karnataka.gov.in/

ವರ್ಷ ಹಾಗೂ ಋತು ಆಯ್ಕೆ ಮಾಡಿ

ವರ್ಷ:2023-24

ಋತು:kharif /ಮುಂಗಾರಿ

ಆನಂತರ ನೀವು ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ

samrakshane crop insurance

ಈಗ ನೀವು ಸಂರಕ್ಷಣೆ ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ

ಈ ಪೇಜಿನ ಡೈರೆಕ್ಟಾಗಿ ಇಲ್ಲಿ ಕ್ಲಿಕ್ ಮಾಡಿ :https://samrakshane.karnataka.gov.in/publichome.aspx

ಅಲ್ಲಿ ಮಧ್ಯದಲ್ಲಿ ಕಾಣುವಂತಹ ಫಾರ್ಮರ್ಸ್ ವಿಭಾಗದಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಡೈರೆಕ್ಟ್ ಲಿಂಕ್ಗಾಗಿ ಕ್ಲಿಕ್ ಮಾಡಿ :https://samrakshane.karnataka.gov.in/Premium/CheckStatusMain_aadhaar.aspx

ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರನ್ನು ಹಾಕಿ ಕ್ಯಾಚಫಾ ಕೋಡನ್ನು ಟೈಪ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.

Read this aLSO:

1.ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳ: 1200 ಬದಲಿ ಎಷ್ಟು ಗೊತ್ತಾ?

ಆತ್ಮೀಯ ಹಿರಿಯ ಬಾಂಧವರೇ,  60 ವರ್ಷ ಮೇಲ್ಪಟ್ಟವರಿಗೆ ಹಿರಿಯ ನಾಗರಿಕರ ಪಿಂಚಣಿಯನ್ನು ಸರ್ಕಾರ ನೀಡುತ್ತಿದ್ದು,  ಇದೀಗ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು 1200 ಬದಲಿಗೆ ಎಷ್ಟು ಹಣ ಬರುತ್ತದೆ  ಗೊತ್ತಾ?

2.ಆನ್ಲೈನ್ ಮೂಲಕ ಉಚಿತವಾಗಿ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಆನ್ಲೈನ್ ಮೂಲಕ ಉಚಿತವಾಗಿ ನೀವು ನಿಮ್ಮ ಜಮೀನಿನ ಪಹಣಿಯನ್ನು ವೀಕ್ಷಿಸಬಹುದಾಗಿದೆ, ಬನ್ನಿ ಹೇಗೆ ಚೆಕ್ ಮಾಡುವುದು ಎಂದು ತಿಳಿದುಕೊಳ್ಳೋಣ.

parihara

ಬೆಳೆ ಸಮೀಕ್ಷೆ ಆಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ :

https://play.google.com/store/apps/details?id=com.csk.farmer23_24.cropsurvey

ನೀವು ಬೆಳೆ ಸಮೀಕ್ಷೆ ಮಾಡಿದ ನಂತರ, ನೀವು ಮಾಡಿದಂತಹ ಬೆಳೆ ಸಮೀಕ್ಷೆ ಸರಿಯಾಗಿದೆ ಇಲ್ಲವೋ ಎಂಬುದನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಬಹುದು.

ಅದಕ್ಕಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಒಂದು ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ, ಅದರ ಹೆಸರು ಬೆಳೆ ದರ್ಶಕ್

ಇದನ್ನು ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ

ಡೈರೆಕ್ಟ್ ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ:

https://play.google.com/store/apps/details?id=com.crop.offcskharif_2021

ಆಪನ್ನು ಡೌನ್ಲೋಡ್ ಮಾಡಿ ಓಪನ್ ಮಾಡಿ

ಮುಖ್ಯ ಪೇಜ್ ನಲ್ಲಿ ನಿಮಗೆ ಹಲವಾರು ಆಪ್ಷನ್ಗಳಿವೆ, ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರನ್ನು ನಮೂದಿಸಿ ವಿವರ ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಆ ಸರ್ವೇ ನಂಬರಲ್ಲಿ ಇರುವಂತಹ ಹಿಸ್ಸಾ ನಂಬರ್ ಗಳು ಅಪ್ಡೇಟಾಗುತ್ತವೆ, ಆಗ ಹಿಸ್ಸ ಆಯ್ಕೆ ಮಾಡಿಕೊಂಡು ನಂತರದ ಆಯ್ಕೆಯಲ್ಲಿ ಮಾಲಕರ ಹೆಸರನ್ನು ಆಯ್ಕೆ ಮಾಡಿ

ನಂತರ ಕೆಳಗಡೆ ಇರುವಂತಹ ಸಮೀಕ್ಷೆಯ ವಿವರವನ್ನು ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಆಗ ನೀವು ನಿಮ್ಮ ಹೊಲವನ್ನು ಯಾರು ಜಿಪಿಎಸ್ ಮಾಡಿದ್ದಾರೆ ಎಂದು ಅವರ ಹೆಸರನ್ನು ಅಲ್ಲಿ ಕೆಳಗಡೆ ನೋಡಬಹುದು, ಆಗ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಹೊಲದಲ್ಲಿ ಯಾವ ಬೆಳೆಯನ್ನು ಬೆಳೆ ಸಮೀಕ್ಷೆ ಮಾಡಲಾಗಿದೆ ಹಾಗೂ ಅದು ಅಪ್ರುವಲ್ ಆಗಿದೆಯೋ ಇಲ್ಲವೋ ಎಂಬ ನಿಖರ ಮಾಹಿತಿಯನ್ನು ನೀವು ಮೂಲಕ ನಿಮ್ಮ ಮೊಬೈಲ್ ನಲ್ಲಿಯೇ ಪಡೆಯಬಹುದಾಗಿದೆ.

 

Leave a Comment