ಯಾರ ಹೆಸರಿನ ಮೇಲೆ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲವಿದೆ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಆತ್ಮೀಯ ರೈತ ಬಾಂಧವರೇ, ಯಾರ ಹೆಸರಿನಲ್ಲಿ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲವಿದೆ ಎಂಬುದನ್ನು ನಾವು ಆನ್ಲೈನ್ ಮೂಲಕ ನಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದಾಗಿದೆ.

ಹೌದು ಆನ್ಲೈನ್ ಮೂಲಕ, ಕೇವಲ ಎರಡು ನಿಮಿಷದಲ್ಲಿ ನೀವು ಆ ವ್ಯಕ್ತಿಯ ಹೆಸರಿನಲ್ಲಿ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲವಿದೆ ಎಂಬುದರ ಮಾಹಿತಿಯನ್ನು ನಿಮ್ಮ ಮೊಬೈಲ್ ಮೂಲಕ ಪಡೆಯಬಹುದಾಗಿದೆ.

ಬೇಕಾಗುವ ಮಾಹಿತಿ:

ಜಿಲ್ಲೆ

ತಾಲೂಕು

ಹೋಬಳಿ

ಗ್ರಾಮ

ಸರ್ವೆ ನಂಬರ್

ಹಿಸ್ಸಾ ನಂಬರ್

ಇಷ್ಟೆಲ್ಲ ಮಾಹಿತಿ ಗೊತ್ತಿದ್ದರೆ ಸಾಕು ನೀವು ಕೇವಲ ಎರಡು ನಿಮಿಷದಲ್ಲಿ ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಯಾರ ಹೆಸರಿನಲ್ಲಿ ಎಷ್ಟು ಸಾಲವಿದೆ ಎಂಬ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ.

ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು?

– ಮೊಟ್ಟ ಮೊದಲು ಗೂಗಲ್ ನಲ್ಲಿ ಭೂಮಿ ಎಂದು ಸರ್ಚ್ ಮಾಡಿ

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:https://landrecords.karnataka.gov.in/Service2/

-ಆಗ ಓಪನ್ ಆಗುವಂತಹ ಮುಖ್ಯ ಪೇಜ್ ನಲ್ಲಿ ನಿಮ್ಮ ಮಾಹಿತಿಯನ್ನು ನಮೂದಿಸಿ fetch details ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಿ.

ಆಗ ಆ ಜಮೀನಿನ ಮಾಲಕರ ಹೆಸರು ಹಾಗೂ ಭೂಮಿಯ ವಿಸ್ತೀರ್ಣ ಬರುತ್ತದೆ.

ಆಗ ಅಲ್ಲಿ ಕಾಣುವಂತಹ view ಎಂಬ ಒಪ್ಶನ್ ಮೇಲೆ ಕ್ಲಿಕ್ ಮಾಡಿ.

ಆಗ ಅ ವ್ಯಕ್ತಿಯ ಜಮೀನಿನ ಪಹಣಿ ನಿಮಗೆ ಆನ್ಲೈನ್ ನಲ್ಲಿ ಕಾಣಿಸುತ್ತದೆ.

ಅ ಪಹನಿಯಲ್ಲಿ ನಿಮಗೆ ಕೊನೆಯಲ್ಲಿ ಅ ಹೊಲದ ಮೇಲೆ ಯಾವ ಬ್ಯಾಂಕ್ನಲ್ಲಿ ಎಷ್ಟು ಸಾಲ ವಿದೆ ಎಂಬುದನ್ನು ಭೋಜ ಮಾಡಲಾಗಿರುತ್ತದೆ.

ಹೀಗೆ ನೀವು ಯಾರ ಹೆಸರಿನ ಮೇಲೆ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲವಿದೆ ಎಂದು ಮೊಬೈಲ್ ನಲ್ಲಿ ಚೆಕ್ ಮಾಡಬಹುದಾಗಿದೆ.

 

Leave a Comment