annabhagya

ಆತ್ಮೀಯರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾನು ಘೋಷಿಸಿದಂತಹ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಈಗಾಗಲೇ ಶಕ್ತಿ, ಗೃಹಜೋತಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿದ್ದು, ಇದೀಗ ಅನ್ನ ಭಾಗ್ಯ ಯೋಜನೆ  ಅಕ್ಕಿಯ ಅಭಾವದಿಂದ ಅದರ ಬದಲಿ ಹಣವನ್ನು ಕೊಡುವ ಮೂಲಕ ಈ ಯೋಜನೆಯನ್ನು ಕೂಡ ಯಶಸ್ವಿಯಾಗಿ ಜಾರಿಗೆ ತರಲಾಗಿದೆ.

ಬನ್ನಿ ಹಾಗಾದರೆ ರೇಷನ್ ಕಾರ್ಡ್ ನಂಬರ್ ಮೂಲಕ ಆನ್ಲೈನಲ್ಲಿ ಯಾರಿಗೆ ಎಷ್ಟು ಹಣ ಜಮಯಾಗಲಿ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಕಾಂಗ್ರೆಸ್ ಸರ್ಕಾರ ತಾವು ಘೋಷಸಿದಂತಹ ಗ್ಯಾರಂಟಿಯ ಪ್ರಕಾರ, ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿಗಳನ್ನು ನೀಡಲು ನಿರ್ಧರಿಸಿತು, ಆದರೆ ಅಕ್ಕಿಯ ಅಭಾವದಿಂದ ಕೇವಲ 5 ಕೆ.ಜಿ ಅಕ್ಕಿಗಳನ್ನು ಪ್ರತಿಯೊಬ್ಬರಿಗೂ ನೀಡಿ ಇನ್ನುಳಿದ 5 ಕೆಜಿ ಅಕ್ಕಿ ಹಣವನ್ನು ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಪ್ರತಿಯೊಬ್ಬ ವ್ಯಕ್ತಿಗೆ 170 ರೂಪಾಯಿಗಳನ್ನು ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.

ಕಾಡಿನಲ್ಲಿ ಎಷ್ಟು ಜನ ಇರುತ್ತಾರೆ ಅದರ ಪ್ರಕಾರವಾಗಿ, ಮನೆಯ ಯಜಮಾನಿಯ ಖಾತೆಗೆ ಹಣವು ಜಮೆಯಾಗುತ್ತದೆ. ಈಗಾಗಲೇ ಬಹುತೇಕ ಜನರ ಖಾತೆಗಳಿಗೆ ಅನ್ನಭಾಗ್ಯ ಯೋಜನೆಯ ಹಣವು ಜಮೆಯಾಗಿದ್ದು, ನಮ್ಮ ಖಾತೆಗಳಿಗೆ ಜಮೆಯಾಗದಿದ್ದರೆ ಈ ಕೂಡಲೇ ಈ ಕೆಳಗೆ ನೀಡುವ ಸ್ಟೆಪ್ಸ್ ಗಳನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಚೆಕ್ ಮಾಡಲು ಬೇಕಾದ ದಾಖಲೆಗಳು :

ರೇಷನ್ ಕಾರ್ಡ್

ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಗೂಗಲ್ ನಲ್ಲಿ AHARA ಎಂದು ಸರ್ಚ್ ಮಾಡಿ.

ಡೈರೆಕ್ಟ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ :https://ahara.kar.nic.in/

ನಂತರ ಎಡಗಡೆ ಕಾಣುವಂತಹ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, ಈ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಆಗ ಅದರಲ್ಲಿ ಇರುವಂತಹ ಡಿಬಿಟಿ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ನಂತರ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯ ಆಯ್ಕೆಯನ್ನು ಆಯ್ಕೆ ಮಾಡಿ

ನಂತರ ಓಪನ್ ಆಗುವಂತಹ ಮತ್ತೊಂದು ಹೊಸ ಪೇಜ್ ನಲ್ಲಿ ನೇರ ವರ್ಗಾವಣೆ ಸ್ಥಿತಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಮೇಲೆಯದ್ದು ತಿಳಿಯಲಿಲ್ಲವೆಂದರೆ ಕೆಳಗಡೆ ನೀಡಿರುವಂತಹ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

https://ahara.kar.nic.in/status2/status_of_dbt.aspx

ಜುಲೈ ತಿಂಗಳನ್ನು ಆಯ್ಕೆ ಮಾಡಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ನಮೂದಿಸಿ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ನಿಮಗೆ ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗುತ್ತದೆ ಎಂಬ ಮಾಹಿತಿ ಸಿಗುತ್ತದೆ.

ಮಾಹಿತಿ ಇಷ್ಟವಾಗಿದ್ದರೆ, ನಿಮ್ಮ ಆಪ್ತರಿಗೂ ಶೇರ್ ಮಾಡಿ

ಹಾಗೂ ಈ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿ

krishisuddi whatsapp group

By Raju

One thought on “ರೇಷನ್ ಕಾರ್ಡ್ ನಂಬರ್ ಮೂಲಕ ಅನ್ನಭಾಗ್ಯ ಯೋಜನೆಯ ಹಣ ಯಾವಾಗ ಹಾಗೂ ಎಷ್ಟು ಜಮೆಯಾಗುತ್ತದೆ ಎಂಬುದನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?”

Leave a Reply

Your email address will not be published. Required fields are marked *