ಗೃಹಲಕ್ಷ್ಮಿ ಯೋಜನೆಗಾಗಿ ರೇಷನ್ ಕಾರ್ಡ್ ನಲ್ಲಿ ಮನೆ ಒಡತಿಯನ್ನು ಬದಲು ಮಾಡಲು ಬರುತ್ತದೆಯೋ ಇಲ್ಲವೋ? ಇಲ್ಲಿದೆ ನಿಮಗೆ ಉತ್ತರ

ಆತ್ಮೀಯ ಬಾಂಧವರೇ, ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಲು ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದ್ದು, ಕೆಲವೊಂದಿಷ್ಟು ವಿಚಾರಗಳಲ್ಲಿ ಜನರ ಬಳಿ ಗೊಂದಲವೆಂದು ಅದಕ್ಕೆ ಇಲ್ಲಿ ಉತ್ತರವನ್ನು ನೀಡಲಾಗಿದೆ.

ಈ ಯೋಜನೆಯ ಪ್ರಕಾರ ಮನೆಯ ಒಡತಿಗೆ  ಪ್ರತಿ ತಿಂಗಳು 2000ಗಳನ್ನು  ನೀಡಲಾಗುವುದು, ಹಾಗಾದರೆ ನಾವು ಮನೆಯೊಡತಿಯನ್ನು ಬದಲಿ ಮಾಡಬಹುದೇ.

ಇಲ್ಲಿದೆ ನೋಡಿ ಉತ್ತರ

-: ಪಡಿತರ ಚೀಟಿದಾರರ ಗಮನಕ್ಕೆ :-

1.ಮರಣ ಹೊಂದಿರುವ ಸದಸ್ಯರನ್ನು ಮಾತ್ರ ತೆಗೆಯಲಾಗುತ್ತದೆ.

(ಪಡಿತರ ಚೀಟಿ ಜೆರಾಕ್ಸ್ ಮತ್ತು ಮರಣ ಪ್ರಮಾಣ ಪತ್ರ ಜೆರಾಕ್ಸ್‌ ಕಡ್ಡಾಯ)

2. ಜೀವಂತ ಸದಸ್ಯರನ್ನು ಯಾವುದೇ ಕಾರಣಕ್ಕೂ ತೆಗೆಯಲು ಅವಕಾಶವಿಲ್ಲ.

3.ಮನೆಯ ಯಜಮಾನ/ಯಜಮಾನಿಯನ್ನು ಮರಣ ಹೊಂದಿದ್ದಲ್ಲಿ ಮಾತ್ರ ಬದಲಾಯಿಸಲಾಗುತ್ತದೆ. ಇತರ ಯಾವುದೇ ಕಾರಣಕ್ಕೂ ಅವಕಾಶವಿಲ್ಲ.

4. ಹೊಸ ಪಡಿತರ ಚೀಟಿ ಮತ್ತು ತಿದ್ದುಪಡಿಗಳಿಗೆ ಅವಕಾಶವಿರುವುದಿಲ್ಲ.

5.ಹಿರಿಯ ವ್ಯಕ್ತಿಗಳು ಮಾತ್ರ ಕಡ್ಡಾಯವಾಗಿ ಕುಟುಂಬ ಮುಖ್ಯಸ್ಥರಾರುತ್ತಾರೆ.

6. ಇ-ಕೆವೈಸಿಯನ್ನು ನಿಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಡಿಸಿಕೊಳ್ಳುವುದು,

7. ಬ್ಯಾಕ್ ಖಾತೆಗಳು ಸರಿ ಇಲ್ಲದಿದ್ದಲ್ಲಿ ನಿಮ್ಮ ಬ್ಯಾಂಕ್ ಗಳಲ್ಲಿ ಸರಿ ಮಾಡಿಸಿಕೊಳ್ಳುವುದು

 

Leave a Comment