ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಅಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ? ನಿಮಗೆ ಮೆಸೇಜ್ ಬಂದಿದೆಯೋ ಇಲ್ಲವೋ?

ಯಾದಗಿರಿ: ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳೂ 2000 ರೂ.ಗಳನ್ನು ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಮಾನ್ಯ ಕರ್ನಾಟಕ ಸರಕಾರವು ಜಾರಿಗೊಳಿಸಿದ್ದು, ಈ ಯೋಜನೆಯಡಿ ಫಲಾನುಭವಿಗಳು ನೋಂದಾಯಿಸಿಕೊಳ್ಳುವಂತೆ ಯಾದಗಿರಿ ನಗರಸಭೆ ಪೌರಾಯುಕ್ತರು ಸಂಗಪ್ಪ ಉಪಾಸೆ ತಿಳಿಸಿದ್ದಾರೆ.

ಈಗಾಗಲೇ ಯಾದಗಿರಿ ನಗರದಲ್ಲಿ ಐದು ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅರ್ಜಿಸಲು ಇಚ್ಛಿಸಿದಲ್ಲಿ ಅರ್ಜಿಯನ್ನು ಗೃಹಲಕ್ಷ್ಮೀ ಯೋಜನೆಯ ನೋಂದಣಿ ಕೇಂದ್ರಗಳಾದ ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿ ಇರುವ ನಗರಸಭೆ ಕಾರ್ಯಾಲಯದ ಸಂಕೀರ್ಣದ ಕೊಠಡಿ ಸಂಖ್ಯೆ 42. ಯಾದಗಿರಿ ನಗರದ ತಹಸೀಲ್‌ ಕಾರ್ಯಾಲ ಯದಲ್ಲಿ, ಯಾದಗಿರಿ ನಗರದ ಹಳೆಯ ತಾಲ್ಲೂಕು ಪಂಚಾಯತ ಕಟ್ಟಡದಲ್ಲಿ. ಯಾದಗಿರಿ ನಗರದ ಸದರ ಧರವಾಜದ ನಗರಸಭೆ ಮಳಿಗೆ ಸಂಕೀರ್ಣದ ಕೊಠಡಿ ಸಂಖ್ಯೆ 5 ರಲ್ಲಿ, ಯಾದಗಿರಿ ನಗರದ ರಾಯಚೂರ-ಹೈದ್ರಾಬಾದ ಮುಖ್ಯ ರಸ್ತೆಯ ಫೀಲ್ಡರ್ ಬೆಡನಲ್ಲಿ ಕೇಂದ್ರಗಳನ್ನು ತೆರೆ ಯಲಾಗಿದ್ದು, ಈ ಕೇಂದ್ರಗಳಲ್ಲಿ ಕಛೇರಿಯ ಸಮಯದಲ್ಲಿ ಅರ್ಜಿಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Comment