parihara

ಆತ್ಮೀಯ ರೈತ ಬಾಂಧವರೇ,   ತಮಗೆಲ್ಲ ಗೊತ್ತಿರುವ ಹಾಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವಂಥ ಬರ ಪರಿಹಾರವನ್ನು ರೈತರ ಖಾತೆಗಳಿಗೆ ನೆರ ವರ್ಗಾವಣೆ ಮೂಲಕ ಬಿಡುಗಡೆ ಮಾಡಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಗೂ ಆದೇಶವನ್ನು ಹೊರಡಿಸಿದೆ.

ಹಾಗಾದರೆ ಬನ್ನಿ ಯಾರಿಗೆ ಯಾವ ಬೆಳೆಗೆ ಎಷ್ಟು ಪರಿಹಾರ ಜಮಯಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಗರಿಷ್ಠ 2 ಹೆಕ್ಟೇರ್‌ ಪ್ರದೇಶದ ಮಿತಿಗೊಳಪಟ್ಟು ಬೆಳೆ ನಷ್ಟ ಪರಿಹಾರ ನಿಗದಿ ಮಾಡಲಾಗಿದೆ.

 

  • ಮಳೆಯಾಶ್ರಿತ ಬೆಳೆಗೆ – 8,500 ರೂ.
  • ನೀರಾವರಿ ಪ್ರದೇಶದ ಬೆಳೆ – 17,000 ರೂ.
  • ದೀರ್ಘಾವಧಿ (ತೋಟಗಾರಿಕೆ) ಬೆಳೆ – 22,500 ರೂ.

ಮೇಲೆ ತಿಳಿಸಿರುವಷ್ಟು ಹಣ ರೈತರು ಖಾತೆಗಳಿಗೆ  ಜಮಾ  ಆಗಬೇಕು, ಆದರೆ ಈಗಾಗಲೇ  ಮೊದಲನೇ  ಕಂತಿನಲ್ಲಿ  ಎರಡು ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ   ಜಮಾ ಮಾಡಲಾಗಿದ್ದು,  ಅದನ್ನು ಮುರಿದುಕೊಂಡು ಉಳಿದ ಹಣವನ್ನು ರೈತರ ಖಾತೆಗಳಿಗೆ   ಜಮಾ ಮಾಡುವ  ಸಂಬವವಿದೆ.

ಆದರೆ ಕೇಂದ್ರ ಸರ್ಕಾರದಿಂದ ನಿರೀಕ್ಷಿಸಿದಷ್ಟು ಪರಿಹಾರ ನಮ್ಮ ರಾಜ್ಯಕ್ಕೆ  ನೀಡಿಲ್ಲ ಎಂದು ರಾಜ್ಯ ಸರ್ಕಾರವು ಮತ್ತೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಈಗಾಗಲೇ ಹೇಳಿದೆ.

ಹಾಗಾಗಿ   ಇದೇ ಕಂತಿನಲ್ಲಿ ಪೂರ್ತಿ ಪ್ರಮಾಣದ ಬೆಳೆ ಪರಿಹಾರವನ್ನು ರೈತರ ಖಾತೆಗಳಿಗೆ ಹಾಕುತ್ತಾರೋ ಅಥವಾ ಇಲ್ಲವೋ ಎಂಬುದು ಜಮೆಯಾದ ಬಳಿಕವಷ್ಟೇ  ತಿಳಿಯುತ್ತದೆ.

Read this also:

2023-24  ನೇ ಸಾಲಿನಲ್ಲಿ ಬರಗಾಲದಿಂದ  ರಾಜ್ಯದ ರೈತರು ಭೀಕರ ನಷ್ಟವನ್ನು ಅನುಭವಿಸಿದ್ದು, ಅವರ ನೆರವಿಗೆ ಬರಲು ಈಗಾಗಲೇ ರಾಜ್ಯ ಸರ್ಕಾರವು ಮೊದಲನೇ ಕಂತಿನಲ್ಲಿ ಎರಡು ಸಾವಿರ ರೂಪಾಯಿಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ.

ಇದೀಗ  ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ 3,454 ಕೋಟಿ ರೂ. ಬೆಳೆ ನಷ್ಟ ಪರಿಹಾರವನ್ನು  ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ರೈತರ ಖಾತೆಗಳಿಗೆ ಬಿಡುಗಡೆ ‌ಮಾಡಿ ರಾಜ್ಯ ಕಂದಾಯ ಇಲಾಖೆ ಆದೇಶ ಪ್ರಕಟಿಸಿದೆ.

ನೇರ ನಗದು ವರ್ಗಾವಣೆ (DBT) ಮೂಲಕ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. 223 ಬರ ಪೀಡಿತ ತಾಲ್ಲೂಕುಗಳ 33,55,599 ರೈತರಿಗೆ ಅರ್ಹತೆಗನುಸಾರವಾಗಿ 2023 ರ ಮುಂಗಾರು ಹಂಗಾಮಿನ ಬೆಳೆ ನಷ್ಟವನ್ನು ಬಿಡುಗಡೆ ಮಾಡಿದೆ.

ಈ ಹಿಂದೆ ಎಕರೆಗೆ ತಲಾ 2 ಸಾವಿರ ರೂ ಬೆಳೆ ನಷ್ಟ ಪರಿಹಾರವಾಗಿ 636.44 ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಹಿಂದಿನ 2 ಸಾವಿರ ರೂ. ಹಿಡಿದುಕೊಂಡು ಉಳಿದ ಬೆಳೆ ನಷ್ಟ ಪರಿಹಾರ ವಿತರಿಸುವಂತೆ ಸರ್ಕಾರ ಆದೇಶ ನೀಡಿದೆ.

Read this also:

ಆತ್ಮೀಯ ರೈತ ಬಾಂಧವರೇ,  ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಮೊದಲನೇ ಹಂತದಲ್ಲಿ ರೈತರ ಖಾತೆಗಳಿಗೆ ಸಾವಿರ ರೂಪಾಯಿಗಳ ಬರ ಪರಿಹಾರವನ್ನು ರಾಜ್ಯ ಸರ್ಕಾರವು ಜಮೆ ಮಾಡಿತ್ತು.

ಕೇಂದ್ರ ಸರ್ಕಾರದಿಂದ ಏನ್ ಡಿ ಆರ್ ಎಫ್ ಹಣ ಬಿಡುಗಡೆಗಾಗಿ ರಾಜ್ಯ ಸರ್ಕಾರ  ಕಾಯುತ್ತಿತ್ತು,  ಇದೀಗ ಕೇಂದ್ರ ಸರ್ಕಾರದಿಂದ 3454 ಕೋಟಿ ರೂಪಾಯಿಗಳ ಇನ್ಪುಟ್ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗಿದ್ದು.

ವೋಟಿಂಗ್ ಮುನ್ನವೇ ರಾಜ್ಯದ 34 ಲಕ್ಷ ರೈತರ ಖಾತೆಗಳಿಗೆ ಕೇಂದ್ರ ಸರ್ಕಾರ ನೀಡುವ ನೀಡಿರುವಂತಹ ಇನ್ಪುಟ್ ಸಬ್ಸಿಡಿ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದ ಸುಮಾರು 34 ಲಕ್ಷ ರೈತರ  ಖಾತೆಗಳಿಗೆ  ಇನ್ನು ಮೂರ್ನಾಲ್ಕು ದಿನಗಳಲ್ಲಿ ಬೆಳೆ ನಷ್ಟ ಪರಿಹಾರದ ಹಣ ಸೇರಲಿದೆ.

ಕೇಂದ್ರದಿಂದ ಬಂದಿರುವ 3,454 ಕೋಟಿ ರೂ. ಅನ್ನು ಇನ್‌ಪುಟ್‌ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ. ಈಗಾಗಲೇ ರೈತರಿಗೆ ವಿತರಿಸಿರುವ ಗರಿಷ್ಠ 2,000 ರೂ.ವರೆಗಿನ ಪರಿಹಾರ ಮೊತ್ತವನ್ನು ಕಡಿತ ಮಾಡಿಕೊಂಡು ಬಾಕಿ ಮೊತ್ತವನ್ನು ಡಿಬಿಟಿ ಮೂಲಕ ಖಾತೆಗೆ ಜಮಾ  ಮಾಡಲಾಗುವುದು.

ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಖುಷ್ಕಿ, ನೀರಾವರಿ, ತೋಟಗಾರಿಕೆ ಬೆಳೆಗಳಿಗೆ ನಿಗದಿಯಾಗಿರುವ ಮೊತ್ತವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.

ಈ ನಿಟ್ಟಿನಲ್ಲಿ ಶುಕ್ರವಾರ ಮೊದಲಿಗೆ 15 ಲಕ್ಷ ರೈತರಿಗೆ ಜಮಾ ಮಾಡುವ ಪ್ರಕ್ರಿಯೆ ನಡೆಯಲಿದೆ. ಉಳಿದ ರೈತರಿಗೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪರಿಹಾರದ ಹಣ ತಲುಪಲಿದೆ ಎಂದು ಕಂದಾಯ ಇಲಾಖೆ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ರಾಜ್ಯದಲ್ಲಿ 2ನೇ ಹಂತದ ಚುನಾವಣೆ ವೇಳೆಗೆ ಬಹುತೇಕ ಬೆಳೆ ನಷ್ಟ ಪರಿಹಾರ ರೈತರಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.

READ THIS ALSO:

ಮೊದಲನೇ ಕಂತಿನ ಬೆಳೆ ಪರಿಹಾರ ಜಮಾ ಆಗದವರ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಈ ಕೆಲಸ ಮಾಡಿ ಹಾಗೂ ಬೆಳೆ ಪರಿಹಾರ ಪಡೆಯಿರಿ

ಆತ್ಮೀಯ ರೈತ ಬಾಂಧವರೇ, ತಮಗೆಲ್ಲ ತಿಳಿದಿರುವ ಹಾಗೆ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ  2023-24 ನೇ ಸಾಲಿನಲ್ಲಿ ತೀವ್ರ ಬರಗಾಲದ ಕಾರಣದಿಂದ  ರೈತರಿಗೆ ಒಂದನೇ ಕಂತಿನ ಬರ ಪರಿಹಾರದ ರೂ.2000 ಗಳನ್ನು ಬಿಡುಗಡೆ ಮಾಡಲಾಗಿತ್ತು.

ಆದರೆ ಹಲವಾರು ಕಾರಣಗಳಿಂದ ಕೆಲವೊಂದಿಷ್ಟು ರೈತರ ಖಾತೆಗಳಿಗೆ ಇನ್ನೂ ಕೂಡ ಬೆಳೆ ಪರಿಹಾರದ ಹಣ, ಹಾಗಾಗಿ ಇದೀಗ ಸರ್ಕಾರದ ವತಿಯಿಂದ ಬೆಳೆ ಪರಿಹಾರ ತಂತ್ರಾಂಶದಲ್ಲಿಯೇ  ಬೆಳೆ ಪರಿಹಾರ ಜಮಾ ಆಗದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು.

ಆ ಪಟ್ಟಿಯಲ್ಲಿ ಹೆಸರಿರುವವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ಲೋಪವನ್ನು ಸರಿಪಡಿಸಿಕೊಂಡು ಕೂಡಲೇ ಬೆಳೆ ಪರಿಹಾರವನ್ನು ಪಡೆಯಬೇಕಾಗಿ ವಿನಂತಿ.

ಆನ್ಲೈನ್ ಮೂಲಕ ಪಟ್ಟಿಯನ್ನು ನೋಡುವುದು ಹೇಗೆ:

ಗೂಗಲ್ ನಲ್ಲಿ bhoomi parihara  ಎಂದು ಟೈಪ್ ಮಾಡಿ

ಅಥವಾ ಡೈರೆಕ್ಟರ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ: https://parihara.karnataka.gov.in/Pariharahome/

ನೀವೀಗ ಭೂಮಿ ಪರಿಹಾರ  ತಂತ್ರಾಂಶದ ಮುಖ್ಯ ಪೇಜ್ ನಲ್ಲಿ ಇದ್ದೀರಿ,  ಅಲ್ಲಿ ಎಡಗಡೆ ಕಾಣುವಂತಹ Village list   ಮೇಲೆ ಕ್ಲಿಕ್ ಮಾಡಿ.

ಡೈರೆಕ್ಟಾ  ಲಿಂಕ್ಗಾಗಿ ಇಲ್ಲಿ ಕ್ಲಿಕ್ ಮಾಡಿ 

https://parihara.karnataka.gov.in/service89/PaymentDetailsReport.aspx

ಕೇಳುವಂತಹ ವರ್ಷ, ಋತು,  ಜಿಲ್ಲೆ ತಾಲೂಕು ಹೋಬಳಿ ಹಾಗೂ ಗ್ರಾಮದ ಮಾಹಿತಿಯನ್ನು ನಮೂದಿಸಿ,  ಎಡಗಡೆ ಕಾಣುವಂತಹ Payment failed case  ಮೇಲೆ ಕ್ಲಿಕ್ ಮಾಡಿ.

ಆಗ ನೀವು ನಿಮ್ಮ ಗ್ರಾಮದಲ್ಲಿ ಯಾರಿಗೆ ಬೆಳೆ ಪರಿಹಾರದ ಹಣ ಯಾವ ಕಾರಣದಿಂದ ಬಂದಿಲ್ಲ ಎಂಬುದನ್ನು ತಿಳಿಯಬಹುದಾಗಿದೆ.

ನೀವು ಇದರಲ್ಲಿರುವಂತಹ ಲೋಪವನ್ನು ಸರಿಪಡಿಸಿಕೊಳ್ಳುವ ಮೂಲಕ ಮೊದಲ ಕಂತಿನ ಬರ ಪರಿಹಾರದ ಜೊತೆಗೆ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಎರಡನೇ ಕಂತಿನ ಬೆಳೆ ಪರಿಹಾರದ ಹಣವನ್ನು ಕೂಡ ಪಡೆಯಬಹುದಾಗಿದೆ.

Read this also:

ಆತ್ಮೀಯ ರೈತ ಬಾಂಧವರೇ,  ಯಾವ ಬೆಳೆಗಳಿಗೆ ಎಷ್ಟು ಬೆಳೆ ವಿಮೆಯ ಹಣ ಬರಲಿದೆ ಎಂಬುದು ಈಗಾಗಲೇ ಸಂರಕ್ಷಣೆ ತಂತ್ರಾಂಶದಲ್ಲಿ ಶಾರ್ಟ್ ಫಾಲ್ ಜನರೇಟ್ ಆಗಿದ್ದು,  ಬೆಳೆ ವಿಮೆ ಬರುವುದು ಖಚಿತವೆಂದು ತಿಳಿದಿರುವ ರೈತರು  ಖುಷಿಯಲ್ಲಿದ್ದಾರೆ.

ಆದರೆ ಈಗಾಗಲೇ ಶಾರ್ಟ್ ಫಾಲ್  ಬಿಡುಗಡೆಯಾಗಿ ಸುಮಾರು 15 ದಿನಗಳ ಮೇಲೆ ಆದರೂ ಕೂಡ ಇನ್ನೂ ರೈತರ ಖಾತೆಗಳಿಗೆ ಬೆಳೆವಿಮೆಯ ಹಣ ಜಮೆಯಾಗಿಲ್ಲ, ಹೀಗಾಗಿ ಜನರು ಬೆಳೆ ವಿಮೆ ನಿರೀಕ್ಷೆಯಲ್ಲಿದ್ದು, ಕೂಡಲೇ ಆದಷ್ಟು ಬೇಗ ಬೆಳೆ ವಿಮೆಯನ್ನು ಬಿಡುಗಡೆ ಮಾಡಬೇಕಾಗಿ  ಸರ್ಕಾರಕ್ಕೆ ವಿನಂತಿಯನ್ನು ಮಾಡಿಕೊಳ್ಳುತ್ತೇವೆ.

ಆತ್ಮೀಯ ರೈತ ಬಾಂಧವರೇ,  ಮೆಣಸಿನಕಾಯಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಸಿಹಿ ಸುದ್ದಿ ಎಂದು ಹೇಳಬಹುದು,  ಏಕೆಂದರೆ ಪ್ರತಿ ಎಕರೆಗೆ 22 ಸಾವಿರ ರೂಪಾಯಿಗಳ ಬೆಳೆ ವಿಮೆ ಕ್ಲೇಮ್ ಆಗಿದ್ದು ರೈತರಲ್ಲಿ ಖುಷಿಯನ್ನು ತರಿಸಿದೆ.

ಗದಗ್ ಜಿಲ್ಲೆ ಗದಗ್ ತಾಲೂಕಿನ ಬೆಟಿಗೇರಿ ಹೋಬಳಿಯಲ್ಲಿ ಬರುವಂತಹ ಎಲ್ಲಾ ಗ್ರಾಮ ಗಳಲ್ಲಿ  ಮೆಣಸಿನಕಾಯಿ ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ  ಇನ್ನೇನು ಕೆಲವೇ ದಿನಗಳಲ್ಲಿ ಪ್ರತಿ ಎಕರೆಗೆ 17,000  ರೂಪಾಯಿಗಳು ಜಮೆಯಾಗಲಿವೆ.

ಈಗ ತಾನೆ ಶಾರ್ಟ್ ಫಾಲ್ ಬಿಡುಗಡೆಯಾಗಿದ್ದು  ಗದಗ್ ಜಿಲ್ಲೆ, ಗದಗ್ ತಾಲೂಕಿನ ಬೆಟಿಗೇರಿ  ಹೋಬಳಿ ಅಡಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳ ಮೆಣಸಿನ ಕಾಯಿ ಆನೆವರಿಯ ಪ್ರಕಾರ  ಶೇಕಡ 70 ರಷ್ಟು ಇಳುವರಿ ಕುಂಠಿತವಾಗಿದ್ದು,  ಬೆಳೆ ವಿಮೆ ಮಾಡಿಸಿದಂತಹ ರೈತರಿಗೆ ಶೇಕಡ 70ರಷ್ಟು ಬೆಳೆ ವಿಮೆಯ ಹಣ ಕ್ಲೇಮ್ ಆಗಲಿದೆ.

ಪ್ರತಿ ಎಕರೆಗೆ ಶೇಕಡ 70% ಎಂದರೆ 22+ ಸಾವಿರ ರೂಪಾಯಿ ಹಣ ಕ್ಲೇಮ್ ಆಗಲಿದ್ದು,  ಈಗಾಗಲೇ ಮಧ್ಯಂತರವಾಗಿ 5000+ ಗಳನ್ನು ರೈತರ ಖಾತೆಗಳಿಗೆ ಡಿಸೆಂಬರ್ ತಿಂಗಳಲ್ಲಿ ಜಮೇ ಮಾಡಲಾಗಿದ್ದು,  ಆ ಐದು ಸಾವಿರ ರೂಪಾಯಿಗಳನ್ನು ಮುರಿದು ಇನ್ನುಳಿದ ಅಂತಹ ಹಣವಾದ 17000+ ಗಳನ್ನು ಇನ್ನೇನು ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು.

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ?

ನಿಮ್ಮ ಮೊಬೈಲ್ ನಲ್ಲಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವುದನ್ನು ನೋಡೋಣ.

ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಸಂರಕ್ಷಣೆ ಎಂದು ಸರ್ಚ್ ಮಾಡಿ ಅಥವಾ ಟೈಪ್ ಮಾಡಿ:

ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:

https://samrakshane.karnataka.gov.in/

Step 1:ಅಲ್ಲಿ ನಿಮಗೆ ಒಂದು ಹೊಸ ಓಪನ್ ಆಗುತ್ತೆ ಅದರಲ್ಲಿ ನೀವು ಬೆಳೆ ವಿಮೆ ಮಾಡಿಸಿರ್ತಕ್ಕಂತ ಋತು, ವರ್ಷ ಹಾಕಿ ಗೋ (GO)ಬಟನ್ ಅನ್ನು ಒತ್ತಿ

  • ಆಗ ಅಲ್ಲಿ ವರ್ಷ ಹಾಗೂ ಋತುವಿನ ಆಯ್ಕೆ ಮಾಡಿ
  • ವರ್ಷ 2023-24
  •  ಋತು ಮುಂಗಾರು( kharif)
  • ಮುಂದೆ/GO ಬಟನನ್ನು ಒತ್ತಿ

Step 2: ಅದಾದ ನಂತರ ನಿಮಗೆ ಮತ್ತೊಂದು ಹೊಸ ವಿಂಡೋ ಓಪನ್ ಆಗುತ್ತೆ, ಅಲ್ಲಿ ನೀವು ಫಾರ್ಮರ್ ಕಾರ್ನರ್ ಅಡಿಯಲ್ಲಿ ಇರುವಂತಹ Check status ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ.

ಅಲ್ಲಿ ಮೊದಲನೇ ಆಪ್ಷನ್ ಆದಂತಹ ಪ್ರಪೋಸಲ್ ಮಾರ್ಕ್ ಮಾಡಿ ಅಥವಾ ಕ್ಲಿಕ್ ಮಾಡಿ

ನಂತರ ನಿಮ್ಮ ಪ್ರಪೋಸ ನಂಬರ (ಅಪ್ಲಿಕೇಶನ್ no) ಅಲ್ಲಿ ನಮೂದಿಸಿ ನಂತರ ಕ್ಯಾಚ್ ಅಪ್ ಕೋಡ್ ಟೈಪ್ ಮಾಡಿ ಸರ್ಚ್ ಬಟನ್ ಒತ್ತಿ.

ಅದಾದ ನಂತರ ನಿಮಗೆ ಯಾವ ಬೆಳೆಗೆ ನೀವು ಬೆಳೆ ವಿಮೆ ಮಾಡಿಸಿದ್ದೀರಿ ಹಾಗೂ ಎಷ್ಟು ರೂಪಾಯಿಗಳು ಮಧ್ಯಂತರ ಹಣ ನಿಮ್ಮ ಖಾತೆಗೆ ಬಿಡುಗಡೆಯಾಗಿದೆ ಎಂಬುದರ ಮಾಹಿತಿಯನ್ನು ನೀವು ಇದರ ಮೂಲಕ ಪಡೆಯಬಹುದು

ಈ ರೀತಿ ನಿಮಗೂ ನಿಮ್ಮ ಬೆಳೆವಿಮೆ ಸ್ಟೇಟಸ್ ನಲ್ಲಿ Payment process in progress ಈ ರೀತಿ ಇದ್ದರೆ ನಿಮಗೆ ಇನ್ನೇನು ಕೆಲ ದಿನಗಳಲ್ಲಿ ಬೆಳೆ ವಿಮೆ ಜಮಾ ಆಗಲಿದೆ

Read these also:

ಮಾರ್ಚ್ ಅಂತ್ಯದ ವೇಳೆಗೆ 5 ಲಕ್ಷ ರೈತರಿಗೆ 800 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆ

ಕರ್ನಾಟಕ ರಾಜ್ಯದ ಕೃಷಿ ಸಚಿವರಾದಂತಹ N. ಚೆಲುವರಾಯಸ್ವಾಮಿ ಯವರು  ನಾಗಮಂಗಲದಲ್ಲಿ ನಡೆದಂತಹ ಸಮಾರಂಭದಲ್ಲಿ ಮಾತನಾಡಿ ಮಾರ್ಚ್ ಅಂತ್ಯದ ವೇಳೆಗೆ 5 ಲಕ್ಷ ರೈತರಿಗೆ 800 ಕೋಟಿ ರೂಪಾಯಿಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಹೇಳಿದರು.

ಕರ್ನಾಟಕದಲ್ಲಿ 25 ಲಕ್ಷ ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡಿದ್ದು ಅದರಲ್ಲಿ 13 ಲಕ್ಷ ರೈತರಿಗೆ 1400 ಕೋಟಿ ರೂಪಾಯಿಗಳ ಬೆಳೆ ವಿಮೆಯನ್ನು ಕ್ಲೇಮ್ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ಮಧ್ಯಂತರ ಬೆಳೆ ವಿಮೆಯನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದ್ದು ಪೂರ್ಣ ಪ್ರಮಾಣದ ಬೆಳೆ ವಿಮೆಯ ಹಣವನ್ನು ಮಾರ್ಚ್ ಅಂತ್ಯಕ್ಕೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಸದ್ಯಕ್ಕೆ 8 ಲಕ್ಷ ರೈತರು ಖಾತೆಗಳಿಗೆ 600 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು ಉಳಿದ 5 ಲಕ್ಷ ರೈತರ ಖಾತೆಗೆ 800 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

 

👉How to check all lands are connected to fid number: ನಿಮ್ಮ ಎಲ್ಲಾ ಹೊಲದ ಸರ್ವೆ ನಂಬರ್ಗಳು fid ನಂಬರಿಗೆ ಲಿಂಕ್ ಆಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ?

https://krishisuddi.com/how-to-check-all-lands-are-connected-to-fid-number/

👉ಈ ದಿನಾಂಕದೊಳಗೆ FID ಮಾಡಿಸದಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ಸಿಗುವುದಿಲ್ಲ

https://krishisuddi.com/last-date-for-fid/

👉How to check all lands are connected to fid number: ನಿಮ್ಮ ಎಲ್ಲಾ ಹೊಲದ ಸರ್ವೆ ನಂಬರ್ಗಳು fid ನಂಬರಿಗೆ ಲಿಂಕ್ ಆಗಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳುವುದು ಹೇಗೆ?

https://krishisuddi.com/how-to-check-all-lands-are-connected-to-fid-number/

👉ಈ ದಿನಾಂಕದೊಳಗೆ FID ಮಾಡಿಸದಿದ್ದರೆ ನಿಮಗೆ ಬೆಳೆ ಪರಿಹಾರದ ಹಣ ಸಿಗುವುದಿಲ್ಲ

https://krishisuddi.com/last-date-for-fid/

 

 

 

By Raju

Leave a Reply

Your email address will not be published. Required fields are marked *