ಗದಗ: 2023ನೇ ಮುಂಗಾರು ಹಂಗಾಮಿನಲ್ಲಿ ಕೃಷಿ ಪರಿಕರ ಮಾರಾಟಗಾರರು ಈ ಕೆಳಕಂಡ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಅಧಿಕೃತ ಪರವಾನಗಿ/ಸಿಂಧುತ್ವ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಪರವಾನಿಗೆಯಲ್ಲಿ ಮಾರಾಟ ಮಾಡುತ್ತಿರುವ ಸೇರ್ಪಡೆಯಾಗಿದೆ(ರಸಗೊಬ್ಬರ ಮೂಲ ಪರಿಕರ ಪ್ರಮಾಣ ಪತ್ರಗಳು, ಓ ಫಾರಂ) ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು,

ದಾಸ್ತಾನು ಮಾಡಿರುವ ಕೃಷಿ ಪರಿಕರದ ಸ್ಥಳ ಗೋದಾಮಿಗೆ ಪ್ರತ್ಯೇಕವಾದ ಪರವಾನಿಗೆ ಇದೆಯೇ/ಪರವಾನಿಗೆಯಲ್ಲಿ ಸೇರ್ಪಡೆ ಮಾಡಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಮಾರಾಟ ಮಳಿಗೆಯಲ್ಲಿ ದಾಸ್ತಾನು ಮಾಡಲಾಗಿರುವ ಪ್ರತಿಯೊಂದು ಪರಿಕರದ ಇನ್ವಾಯ್ಸ್ಗಳು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು

ಇನ್‌ವಾಯ್ಸನಲ್ಲಿ ನಮೂದಿಸಿರುವ ಕೃಷಿ ಪರಿಕರದ ದಾಸ್ತಾನನ್ನು ಸಂಬಂಧಪಟ್ಟ ಕೃಷಿ ಪರಿಕರದ ದಾಸ್ತಾನು ಪುಸ್ತಕದಲ್ಲಿ ನಮೂದಿಸಬೇಕ.

ದಾಸ್ತಾನು ಪುಸ್ತಕಗಳನ್ನು ವಿವಿಧ ಕೃಷಿ ಪರಿಕರ ಕಾಯ್ದೆಗಳ ಅನುಸಾರ ನಿರ್ವಹಿಸಬೇಕು.

ಪ್ರತಿದಿನದ ವಹಿವಾಟನ್ನು ದಾಸ್ತಾನು ಪುಸ್ತಕದಲ್ಲಿ ನಮೂದಿಸಿ, ಪರಿಕರ ಖರೀದಿಸಿದ ರೈತರಿಗೆ ಅಧಿಕೃತವಾದ ಮಾರಾಟದ ಬಿಲ್ಲುಗಳನ್ನು ನೀಡುವುದು ಹಾಗೂ ರೈತರ ಸಹಿಗಳನ್ನು ಬಿಲ್ಲಿನಲ್ಲಿ ಪಡೆಯಬೇಕು.

ಪರವಾನಗಿಗಳನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರದರ್ಶಿಸಬೇಕು.

ಮಾರಾಟ ಮಳಿಗೆಯಲ್ಲಿ ದಾಸ್ತಾನು ಮಾಡಲಾಗಿರುವ ಕೃಷಿ ಪರಿಕರದ ವಿವರಗಳನ್ನು ಹಾಗೂ ಮಾರಾಟದ ದರಗಳನ್ನು ರೈತರಿಗೆ ಕಾಣುವಂತೆ ಮಾರಾಟ ಮಳಿಗೆಯ ಜಾಗದಲ್ಲಿ ಪ್ರದರ್ಶಿಸಬೇಕು.

ಪ್ರತಿಯೊಬ್ಬರೂ ದಾಸ್ತಾನು ಪುಸ್ತಕಗಳಲ್ಲಿ ಪರವಾನಿಗೆ ಅಧಿಕಾರಿಗಳಿಂದ ದೃಢೀಕರಿಸಿಕೊಂಡಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.

ಕಳೆದ ಸಾಲಿನಲ್ಲಿ ಮಾರಾಟ ಮಾಡಲಾದಕೃಷಿ ಪರಿಕರಗಳ ಮಾಹಿತಿಯನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಬೇಕು, ಕೃಷಿ ಪರಿಕರದ ಮೇಲಿನ ಗರಿಷ್ಠ ಮಾರಾಟ ಬೆಲೆಗಳಿಗಿಂತ ಹೆಚ್ಚಿನ ದರಗಳಲ್ಲಿ ಮಾರಾಟ ಮಾಡಿದಲ್ಲಿ ಪರವಾನಗಿ ಮೂಲಕ ನಿಶ್ಚಿತವಾಗಿ ಕಳೆದುಕೊಳ್ಳಬೇಕಾಗುತ್ತದೆ.

ರಸಗೊಬ್ಬರಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದೀರಿ ಖಾತ್ರಿಪಡಿಸಿಕೊಳ್ಳಬೇಕು.

ದಲ್ಲಾಳಿಗಳಿಗೆ ಮಧ್ಯವರ್ತಿಗಳಿಗೆ/ಕೈಗಾರಿಕೆಗಳಿಗೆ ರಸಗೊಬ್ಬರಗಳು ಸರಬರಾಜಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಯೂರಿಯಾ ಸೇರಿದಂತೆ ಕ್ರಮ ವಹಿಸಲಾಗುವುದು. ಯಾವುದೇ ರಸಗೊಬ್ಬರಗಳನ್ನು ಕೈಗಾರಿಕೆಗಳಿಗೆ ಮಾರಾಟ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಮಾರಾಟ ಮಳಿಗೆಗೆ ಸರಬರಾಜಾದ ಕೃಷಿ ಪರಿಕರದ ತೂಕ ಸರಿಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು, ಕೃತಕ ಅಭಾವ ಸೃಷ್ಟಿಸಲು ಪ್ರಯತ್ನಿಸಿದರೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುವುದು.

ಪಾಯಿಂಟ್ ಆಫ್ ಸೇಜ್ ರಸಗೊಬ್ಬರ ಮಿಶ್ರಣಗಳು ಮಾರಾಟ ಮುಖಾಂತರ ರಸಗೊಬ್ಬರಗಳನ್ನು ಆಧಾರ್ ಬಳಕೆ ಮಾಡಿ ಮಾರಾಟ ಮಾಡಬೇಕು. ಇಲ್ಲದಿದ್ದಲ್ಲಿ ಭೌತಿಕ ದಾಸ್ತಾನಿನಲ್ಲಿ ವ್ಯತ್ಯಾಸವಿದ್ದಲ್ಲಿ ಜಿಲ್ಲೆಯ ರಸಗೊಬ್ಬರ ವ್ಯತ್ಯಯಕ್ಕೆ ಕೃಷಿ ಪರಿ ಮಾರಾಟಗಾರರೇ ಸಂಪೂರ್ಣ ಜವಾಬ್ದಾರರಾಗುವರು.

ಪಾಯಿಂಟ್ ಆಫ್ ಸೇಲ್ ಮಾರಾಟ ಮಾಡದೆ ಇದ್ದಲ್ಲಿ ಮತ್ತು ದಾಸ್ತಾನು ಕ್ಲಿಯರ್ ಮಾಡದೇ ಇದ್ದಲ್ಲಿ, ಪಥಮ ನೋಟಿಸಿನಲ್ಲಿಯೇ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು.

ರೈತರಿಂದ ದೂರುಗಳು ಬಂದಲ್ಲಿ, ಸ್ಥಳ ಮಹಜರ್ ಮಾಡಿ, ದೂರು ನೀಡಿರುವಂತೆ ಕೃಷಿ ಪರಿಕರ ಕಾಯ್ದೆಗಳ ಉಲ್ಲಂಘನೆಗಳು ಕಂಡುಬಂದಲ್ಲಿ ಕಾನೂನು ಪ್ರಕಾರ ಕಡ್ಡಾಯವಾಗಿ ಸೂಕ್ತ

ಪ್ರತಿ ಮಾಹೆ 5ನೇ ತಾರೀಖಿನೊಳಗೆ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಲಾದ ದಾಸ್ತಾನಿನ ವಿವರಗಳನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳನ್ನು ಇಲಾಖೆಯ ಗಮನಕ್ಕೆ ತಂದು ಮಾರಾಟ ಮಾಡಬೇಕು.

ಪ್ರಾರಂಭದಲ್ಲಿಯೇ ರಸಗೊಬ್ಬರದ ಗುಣಮಟ್ಟಗಳನ್ನು ಪರೀಕ್ಷಿಸಿಕೊಳ್ಳಬೇಕು.

ರಸಗೊಬ್ಬರ ಮಿಶ್ರಣಗಳ ಗುಣಮಟ್ಟದಲ್ಲಿ ವ್ಯತ್ಯಾಸಗಳು ಕಂಡುಬಂದು, ರೈತರಿಂದ ದೂರುಗಳೇನಾದರೂ ಬಂದಲ್ಲಿ, ರೈತರಿಗೆ ರಸಗೊಬ್ಬರದ ಅಷ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಮೇಲ್ಕಂಡ ಎಲ್ಲ ಮಾರ್ಗಸೂಚಿಗಳನ್ನು ಕೃಷಿ ಪರಿಕರ ಮಾರಾಟಗಾರರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಗದಗ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ತಿಳಿಸಿದ್ದಾರೆ.

By Raju

Leave a Reply

Your email address will not be published. Required fields are marked *